Home Crime News ಮಹಿಳೆ ಗಮನ ಬೇರೆಡೆ ಸೆಳೆದು ₹ 3.90 ಲಕ್ಷ ವಂಚನೆ
Crime NewsHomeKadurLatest Newsnamma chikmagalur

ಮಹಿಳೆ ಗಮನ ಬೇರೆಡೆ ಸೆಳೆದು ₹ 3.90 ಲಕ್ಷ ವಂಚನೆ

Share
Share

ಕಡೂರು: ಕಳೆದ ಜೂನ್‌ನಲ್ಲಿ ಗಮನ ಬೇರೆಡೆಗೆ ಸೆಳೆದು ಗ್ರಾಹಕರೋರ್ವರ ಖಾತೆಯಿಂದ ₹3.90 ಲಕ್ಷಡ್ರಾ ಮಾಡಿರುವ ಪ್ರಕರಣ ಕುರಿತು ಮಹಿಳೆಯೊಬ್ಬರುಕಡೂರು ಪೊಲೀಸರಿಗೆ ಗುರುವಾರ ದೂರು ನೀಡಿದ್ದಾರೆ.

ತಾಲೂಕಿನ ಚಿಕ್ಕಪಟ್ಟಣಗೆರೆಯ ಸುನಂದ ಟಿ.ಎಂ. ಎಂಬವರು ತಮ್ಮ ಖಾತೆಯಿಂದ ಹಣ ಡ್ರಾ ಮಾಡಲೆಂದು ಕಡೂರು ಪಟ್ಟಣದಜೈನ್‌ ಟೆಂಪಲ್‌ ರಸ್ತೆಯ ಕೆನರಾಬ್ಯಾಂಕ್ ಎ.ಟಿ.ಎಂ.ಗೆ ಹೋಗಿ ದ್ದರು.

ಈ ವೇಳೆ ಅಲ್ಲಿದ್ದ ಅಪರಿಚಿತ ವ್ಯಕ್ತಿಯು ಸುನಂದಾ ಅವರ ಗಮನವನ್ನು ಬೇರೆಡೆಗೆ ಸೆಳೆದು ಎ.ಟಿ.ಎಂ.ಪಾಸ್ ವರ್ಡ್ ತಿಳಿದುಕೊಂಡಿದ್ದಾನೆ. ಅಲ್ಲದೆ, ಸುನಂದಾ ಅವರು ನೀಡಿದ್ದ ಎ.ಟಿ. ಎಂ. ಕಾರ್ಡ್ ಪಡೆದು ಆತನ ಬಳಿಯಿದ್ದ ಇನ್ಯಾವುದೋ ಎ.ಟಿ.ಎಂ. ಅನ್ನು ನೀಡಿದ್ದಾನೆ.

ಬಳಿಕ ಸುನಂದಾ ಟಿ.ಎಂ. ಅವರ ಕೆನರಾ ಬ್ಯಾಂಕ್ ಖಾತೆಯಿಂದ ಒಟ್ಟು * 3.90 ಲಕ್ಷ ಹಣವನ್ನು ಹಲವಾರು ಬಾರಿ ಎಟಿಎಂನಿಂದ ಪಡೆಯುವ ಮೂಲಕವಂಚಿಸಿದ್ದಾನೆ. ಈಬಗ್ಗೆ ಯಾವುದೇ ಮಾಹಿತಿ ಅರಿವಿಗೆ ಬಾರದ ಸುನಂದಾ ತನ್ನ ಅಕೌಂಟ್‌ನಲ್ಲಿನ ಹಣದ ವಿವರ ಪರಿಶೀಲಿಸಲು ಮುಂದಾದಾಗ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.

ಬಳಿಕ ಎಟಿಎಂ ಬಳಿ ತನಗೆ ಸಹಾಯ ಮಾಡುವ ನೆಪದಲ್ಲಿ ಬಂದಿದ್ದ ಅಪರಿಚಿತನ ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಂಡು ಕಳೆದುಕೊಂಡಿರುವ ಹಣ ಪತ್ತೆ ಕೊಡಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

Woman cheated of ₹ 3.90 lakh by diverting attention

Share

Leave a comment

Leave a Reply

Your email address will not be published. Required fields are marked *

Don't Miss

ಬೆಳವಾಡಿ ಕೆರೆಗೆ ಎತ್ತಿನಹೊಳೆ ನೀರು-ರೈತರಲ್ಲಿ ಸಂತಸ

ಚಿಕ್ಕಮಗಳೂರು: ಎತ್ತಿನಹೊಳೆ ಯೋಜನೆಯ ನೀರಿನಿಂದ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯ ಬೆಳವಾಡಿ ಕೆರೆ ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು...

`ನಾನು’ ಎಂಬುದನ್ನು ಬಿಟ್ಟು `ನಾವು’ ಎಂಬ ಮನೋಭಾವ ಬೆಳೆಸಿಕೊಳ್ಳಿ

ಚಿಕ್ಕಮಗಳೂರು: `ನಾನು ಮಾಡಿದ್ದು, ನಾನು ಮಾಡಿದ್ದು’ ಎನ್ನುವುದಕ್ಕಿಂತ `ನಾವು ಮಾಡಿದ್ದು’ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಜನರ ಆಶೀರ್ವಾದದಿಂದಲೇ ಜನಪ್ರತಿನಿಧಿಗಳು ಅಧಿಕಾರಕ್ಕೆ ಬರುತ್ತಾರೆ. ಅಭಿವೃದ್ಧಿ ಕಾರ್ಯಗಳಿಗೆ ವೈಯಕ್ತಿಕ ಹಕ್ಕು ಸಾಧಿಸುವ ಬದಲು ಎಲ್ಲರ...

Related Articles

ಮುಖ್ಯಮಂತ್ರಿ ಸೂಕ್ತ ಭದ್ರತಾ ವ್ಯವಸ್ಥೆಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಮುಖ್ಯಮಂತ್ರಿಗಳ ಜಿಲ್ಲಾ ಭೇಟಿಯ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸುವುದಲ್ಲದೆ, ಶಿಷ್ಟಾಚಾರ ಪಾಲನೆಗೆ...

ಎಂ.ಸಿ. ಹಳ್ಳಿಯಲ್ಲಿ ಕಡವೆ ಬೇಟೆ-ಆರೋಪಿಗಳ ಬಂಧನ

ತರೀಕೆರೆ: ಲಕ್ಕವಳ್ಳಿ ವಲಯದ ಎಂ.ಸಿ. ಹಳ್ಳಿ ಶಾಖೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆಯನ್ನು ಬೇಟೆ ಮಾಡಿ ಮಾಂಸ...

ಸೆ.21ರಿಂದ ಮುಖ್ಯಮಂತ್ರಿ ನಿವಾಸದವರೆಗೆ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು: ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ವಿಶೇಷ ನೇರ ನೇಮಕಾತಿ ಅಥವಾ ನೇರಪಾವತಿ...

 ವಿಶ್ವಕರ್ಮ ಸಮುದಾಯ ಎಲ್ಲ ರಂಗಗಳಲ್ಲೂ ಮುಂಚೂಣಿಗೆ ಬರಲಿ

ಚಿಕ್ಕಮಗಳೂರು: ವಿಶ್ವಕರ್ಮ ಸಮುದಾಯ ಎಲ್ಲ ರಂಗಗಳಲ್ಲೂ ಮುಂಚೂಣಿಗೆ ಬರಬೇಕು ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ...