ಚಿಕ್ಕಮಗಳೂರು: ಹಳೇ ಗಲಾಟೆಯೊಂದರ ವಿಚಾರವಾಗಿ ನಗರದ ಮಲ್ಲೇಗೌಡ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಮುಂಭಾಗದಲ್ಲೇ ಯುವಕನೋರ್ವನ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಟಿಂಬರ್ ಕೆಲಸ ಮುಗಿಸಿ ಊಟ ಮಾಡುವಾಗ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ ತನ್ನ ಸ್ನೇಹಿತರಾದ ತೌಸಿಫ್ ಮತ್ತು ಸಚಿನ್ರನ್ನು ಚಿಕಿತ್ಸೆಗೆ ದಾಖಲಿಸಿ, ಆಸ್ಪತ್ರೆಯ ಹೊರಗೆ ಕುಳಿತಿದ್ದ ಶಿವಪುರದ ಅರುಣ್ ಕುಮಾರ್ ಎಂಬುವವರ ಮೇಲೆ ಆಕಾಶ್, ಜೀವನ್ ಹಾಗೂ ಇತರರು ಏಕಾಏಕಿ ದಾಳಿ ನಡೆಸಿದ್ದಾರೆ.
ಅರುಣ್ ಕುಮಾರ್ ಆಸ್ಪತ್ರೆಯ ಒಳಗೆ ಓಡಲು ಯತ್ನಿಸಿದಾಗ ತಡೆದು, ಅವಾಚ್ಯವಾಗಿ ನಿಂದಿಸಿ, ಕಣ್ಣಿನ ಭಾಗ ಹಾಗೂ ಮುಖಕ್ಕೆ ತೀವ್ರವಾಗಿ ಗುದ್ದಿ, ಕೆಳಗೆ ಕೆಡವಿ ತುಳಿದಿದ್ದಾರೆ.
ಜೊತೆಯಲ್ಲಿದ್ದ ಸ್ನೇಹಿತರು ಗಲಾಟೆ ಬಿಡಿಸಿದ್ದು, ಗಾಯಾಳು ಅರುಣ್ ಕುಮಾರ್ ನೀಡಿದ ಹೇಳಿಕೆಯನ್ವಯ ನಗರ ಪೊಲೀಸರು ಮೊಕದ್ದಮೆ ಹೂಡಿದ್ದಾರೆ.
A young man was attacked at Mallegowda Hospital.
Leave a comment