Home namma chikmagalur chikamagalur ಪ್ಲೆಕ್ಸ್‌ ಹರಿದ ಪ್ರಕರಣ ಇಬ್ಬರು ಆರೋಪಿಗಳ ಬಂಧನ
chikamagalurHomeLatest Newsnamma chikmagalur

ಪ್ಲೆಕ್ಸ್‌ ಹರಿದ ಪ್ರಕರಣ ಇಬ್ಬರು ಆರೋಪಿಗಳ ಬಂಧನ

Share
Share

ಚಿಕ್ಕಮಗಳೂರು: ಕಾಫಿನಾಡಿನ ಕಾಂಗ್ರೆಸ್ ಶಾಸಕ ಹೆಚ್.ಡಿ.ತಮ್ಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರವಿದ್ದ ಪ್ಲೆಕ್ಸ್‌ಗೆ ಇಬ್ಬರು ಯುವಕರು ಬೇಡ್‌ನಿಂದ ಹಾನಿ ಮಾಡಿರುವ ಘಟನೆ ಚಿಕ್ಕಮಗಳೂರಿನ ಹೃದಯ ಭಾಗದ ಹನುಮಂತಪ್ಪ ವೃತ್ತದಲ್ಲಿ ನಡೆದಿದೆ.

“ನನಗೆ ಈ ಶಾಸಕ ಇಷ್ಟವಿಲ್ಲ” ಎಂದು ಹೇಳುತ್ತಾ ಬ್ಯಾನರ್ ಗೆ ಬೇಡ್ ಹಾಕಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಬಸವನಹಳ್ಳಿ ಠಾಣೆ ಪೊಲೀಸರು ತಕ್ಷಣವೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಚಿಕ್ಕಮಗಳೂರು ತಾಲೂಕಿನ ಕೊಳಗಾಮೆ ಗ್ರಾಮದ ಸಂದೀಪ್ (27) ಮತ್ತು ದಿಲೀಪ್ (20) ಎಂದು ಗುರುತಿಸಲಾಗಿದೆ. ಇವರಲ್ಲಿ ಸಂದೀಪ್ ಕೂಲಿ ಕಾರ್ಮಿಕನಾಗಿದ್ದು, ದಿಲೀಪ್ ಕೆ.ಇ.ಬಿ. ಕಂಟ್ರಾಕ್ಟರ್ ಬಳಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಮದ್ಯದ ಅಮಲಿನಲ್ಲಿ ಈ ರೀತಿ ಪ್ಲೆಕ್ಸ್‌ಗೆ ಬೇಡ್ ಹಾಕಿದ್ದಾರೆ ಎಂದು ಶಂಕಿಸಲಾಗಿದ್ದು, ಬಸವನಹಳ್ಳಿ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Two accused arrested in Plex tearing case

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ‌ಲ್ಲಿ ಇಂದು ನೂತನ ರಸ್ತೆ ಮೇಲ್ವೇತುವೆಯ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ

ಚಿಕ್ಕಮಗಳೂರು: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ಸಚಿವರಾದ ವಿ.ಸೋಮಣ್ಣ ಅವರು ಮೇ 31 ರಂದು (ನಾಳೆ ಭಾನುವಾರ) ಚಿಕ್ಕಮಗಳೂರು ಜಿಲ್ಲೆಯ ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ...

ಶ್ರೀಗಂಧ ಮರಗಳ ರಕ್ಷಣೆ, ಪ್ಲಾಸ್ಟಿಕ್ ಮುಕ್ತಕ್ಕೆ ಆಗ್ರಹಿಸಿ ಮೌನ ಪ್ರತಿಭಟನೆ

ಚಿಕ್ಕಮಗಳೂರು: ನಾಡಿನಲ್ಲಿ ಶ್ರೀಗಂಧ ಮರಗಳ ರಕ್ಷಣೆ ಮತ್ತು ನಗರವನ್ನು ಪ್ಲಾಸ್ಟಿಕ್ ಮು ಕ್ತಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಜಿಲ್ಲಾ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಮತ್ತು ವಿವಿಧ ಕನ್ನಡಪರ ಸಂಘಟನೆಗಳ...

Related Articles

ಅಡಿಕೆ ಕಳವು ಪ್ರಕರಣದ ಆರೋಪಿಗಳ ಬಂಧನ

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಜಕ್ಕಣಕ್ಕಿಯ ರೈತರ ಗೋದಾಮಿನಲ್ಲಿಟ್ಟಿದ್ದ ಅಡಿಕೆಯನ್ನು ಕಳವು ಮಾಡಿದ ಆರೋಪದಲ್ಲಿ ಪೊಲೀಸರು ಇಬ್ಬರನ್ನು...

ಮೂಡಿಗೆರೆಯಲ್ಲಿ ಬಾಗಿಲು ಮುರಿದು ಕಳ್ಳತನ

ಮೂಡಿಗೆರೆ: ಬೀಗ ಹಾಕಿದ್ದ ಮನೆಯೊಂದರ ಮುಂಬಾಗಿಲು ಮುರಿದು ಮನೆಯೊಳಗೆ ನುಗ್ಗಿ ನಗದು ಸಹಿತ ಅಪಾರ ಮೌಲ್ಯದ...

ನಾಗಲಕ್ಷ್ಮಿ ಚಿತ್ರಮಂದಿರದ ಪ್ರದರ್ಶನ ಸ್ಥಗಿತ

ಚಿಕ್ಕಮಗಳೂರು: ಅಗ್ನಿ ಸುರಕ್ಷತಾ ಪರಿಕರಗಳನ್ನು ಅಳವಡಿಸದ ಕಾರಣಕ್ಕೆ ನಗರದ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನಗಳನ್ನು ಅಧಿಕಾರಿಗಳು...

ನಕಲಿ ಛಾಪಕಾಗದ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚನೆ

ನರಸಿಂಹರಾಜಪುರ: ನಕಲಿ ಛಾಪಕಾಗದ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಿದ ಆರೋಪದ ಮೇಲೆ ಡಿಜಿಟಲ್ ಸಂಸ್ಥೆ ಮತ್ತು...