Home namma chikmagalur chikamagalur ಮುತ್ತೋಡಿ ಅಭಯಾರಣ್ಯದ ಮುಖ್ಯ ರಸ್ತೆಯಲ್ಲಿ ಕರಡಿ ಪ್ರತ್ಯಕ್ಷ
chikamagalurHomeLatest Newsnamma chikmagalur

ಮುತ್ತೋಡಿ ಅಭಯಾರಣ್ಯದ ಮುಖ್ಯ ರಸ್ತೆಯಲ್ಲಿ ಕರಡಿ ಪ್ರತ್ಯಕ್ಷ

Share
Share

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಳೆದೊಂದು ತಿಂಗಳಿನಿಂದ ಅಬ್ಬರಿಸುತ್ತಿರುವ ಮುಂಗಾರು ಪೂರ್ವ ಮಳೆಗೆ ಪ್ರಕೃತಿ ಸೌಂದರ್ಯದ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು ಇದರ ನಡುವೆ ವನ್ಯಜೀವಿಗಳ ಲೋಕ ಅನಾವರಣಗೊಂಡಂತಿದೆ. ಮುತ್ತೋಡಿ ಅಭಯಾರಣ್ಯದ ಮುಖ್ಯ ರಸ್ತೆಯಲ್ಲಿ ಇಂದು ಮುಂಜಾನೆ ಅಪರೂಪದ ಅತಿಥಿಯೊಂದು ಪ್ರತ್ಯಕ್ಷವಾಗಿ ವಾಹನ ಸವಾರರನ್ನು ಕೆಲಕಾಲ ಮಂತ್ರಮುಗ್ಧರನ್ನಾಗಿಸಿದೆ.

ಅಭಯಾರಣ್ಯದ ದಟ್ಟ ಅರಣ್ಯದ ರಸ್ತೆಯಲ್ಲಿ ವಾಹನವೊಂದು ಸಾಗುತ್ತಿದ್ದಾಗ, ಹಠಾತ್ತನೆ ಕರಡಿಯೊಂದು ರಸ್ತೆಯ ಮಧ್ಯದಲ್ಲೇ ಪ್ರತ್ಯಕ್ಷವಾಗಿದೆ. ವಾಹನದ ಹೆಡ್‌ಲೈಟ್‌ನ ಬೆಳಕಿನ ನಡುವೆಯೂ ಯಾವುದೇ ಆತಂಕವಿಲ್ಲದೆ, ಅತ್ಯಂತ ಗಂಭೀರವಾಗಿ ರಸ್ತೆಯುದ್ದಕ್ಕೂ ಹೆಜ್ಜೆ ಹಾಕುತ್ತಾ ಸಾಗಿದೆ. ವಾಹನವು ತನ್ನನ್ನು ಹಿಂಬಾಲಿಸುತ್ತಿದ್ದರೂ ತಲೆಕೆಡಿಸಿಕೊಳ್ಳದ ಜಾಂಬವಂತ ಗಾಂಭೀರ್ಯದಿಂದ ಮುಂದೆ ಸಾಗಿದ್ದಾನೆ.

ಸ್ವಲ್ಪ ದೂರ ಮುಂದೆ ಹೋಗಿ ರಸ್ತೆಯ ಮಧ್ಯದಲ್ಲೇ ನಿಂತ ಕರಡಿ, ಒಮ್ಮೆ ವಾಹನದ ಕಡೆಗೆ ತಿರುಗಿ ದಿಟ್ಟಿಸಿ ನೋಡಿದೆ. ಈ ದೃಶ್ಯವು ಸವಾರರಲ್ಲಿ ರೋಮಾಂಚನ ಮತ್ತು ಆತಂಕ ಮೂಡಿಸಿದೆ. ಬಳಿಕ ರಸ್ತೆ ಬದಿಯ ಪೊದೆಯತ್ತ ಸರಿದ ಕರಡಿ, ತಕ್ಷಣವೇ ತನ್ನ ಹಿಂಗಾಲುಗಳ ಮೇಲೆ ಎದ್ದು ನಿಂತು ವಾಹನವನ್ನು ಸೂಕ್ಷ್ಮವಾಗಿ ಗಮನಿಸಿದೆ. ಮನುಷ್ಯರಂತೆ ಎದ್ದು ನಿಂತು ನೋಡಿದ ಕರಡಿಯ ಈ ವಿಶಿಷ್ಟ ಭಂಗಿ ಅಚ್ಚರಿ ಮೂಡಿಸಿದೆ. ನಂತರ ನಿಧಾನವಾಗಿ ಹೆಜ್ಜೆ ಹಾಕುತ್ತಾ ದಟ್ಟ ಕಾಡಿನೊಳಗೆ ಕಣ್ಮರೆಯಾಗಿದೆ.

ವಾಹನದಲ್ಲಿದ್ದ ಚಾಲಕ ಈ ಇಡೀ ಅಪರೂಪದ ಕ್ಷಣಗಳನ್ನು ಹಾಗೂ ಕರಡಿಯ ಚಲನವಲನಗಳನ್ನು ಅತ್ಯಂತ ಜಾಣ್ಮಯಿಂದ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ದರ್ಶನ ಸಾಮಾನ್ಯವಾದರೂ, ಇಷ್ಟು ಹತ್ತಿರದಲ್ಲಿ, ಅದೂ ಹೆಡ್‌ಲೈಟ್ ಬೆಳಕಿನಲ್ಲಿ ಕರಡಿಯು ಇಷ್ಟೊಂದು ವಿಭಿನ್ನವಾಗಿ ವರ್ತಿಸಿರುವುದು ತೀರಾ ಅಪರೂಪವಾಗಿದೆ.

Bear sighted on the main road of Muthodi Sanctuary

Share

Leave a comment

Leave a Reply

Your email address will not be published. Required fields are marked *

Don't Miss

ಆಲ್ದೂರಿನಲ್ಲಿ ಟೈಲ್ಸ್ ಮೇಲೆ ಜಾರಿ ಬಿದ್ದ ರೈತ ಸಾವು

ಆಲ್ದೂರು: ಅಡುಗೆ ಮನೆಯ ನೆಲದ ಮೇಲೆ ಬಿದ್ದಿದ್ದ ನೀರನ್ನು ಗಮನಿಸದೆ ಟೈಲ್ಸ್ ಮೇಲೆ ಕಾಲಿಟ್ಟು ಜಾರಿ ಬಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋರಣ ಮಾವು ಗ್ರಾಮದಲ್ಲಿ...

ಕಲ್ಯಾಣನಗರ 5ನೇ ಕ್ರಾಸ್‌ನಲ್ಲಿ ಮಹಿಳೆಯ ಮಾಂಗಲ್ಯ ಸರ ಕಳವು

ಚಿಕ್ಕಮಗಳೂರು: ಭಜನೆ ಮುಗಿಸಿಕೊಂಡು ಸ್ನೇಹಿತೆಯೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಗೃಹಿಣಿಯೊಬ್ಬರ ಕುತ್ತಿಗೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಹೆಲ್ಮೆಟ್ ಧರಿಸಿದ ವ್ಯಕ್ತಿಗಳು ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ಕಲ್ಯಾಣನಗರ...

Related Articles

“ತಮ್ಮಯ್ಯಾ… ಯಾರಯ್ಯಾ ನಿನ್ನ ಮೇಲೆ ಸೋತದ್ದು ಸಿ.ಟಿ.ರವಿ

ಬೀರೂರು (ಚಿಕ್ಕಮಗಳೂರು): “ತಮ್ಮಯ್ಯಾ… ಯಾರಯ್ಯಾ ನಿನ್ನ ಮೇಲೆ ಸೋತದ್ದು ಸಿ.ಟಿ.ರವಿ…”  ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ...

ಹಂದಿಗಳು ಅಡ್ಡ ಬಂದಾಗ ಸ್ಕೂಟಿಗೆ ಬ್ರೇಕ್: ರಸ್ತೆಗೆ ಬಿದ್ದು ಯುವಕ ಸಾವು

ಚಿಕ್ಕಮಗಳೂರು: ರಸ್ತೆಗೆ ಹಂದಿಗಳು ಏಕಾಏಕಿ ಅಡ್ಡ ಬಂದ ಪರಿಣಾಮ ಸ್ಕೂಟಿಗೆ ಬ್ರೇಕ್ ಹಾಕಿದಾಗ ಹಿಂಬದಿ ಸವಾರ...

ಬೊಲೆರೋ ಪಿಕಪ್ ಡಿಕ್ಕಿ: ಬೈಕ್ ಹಿಂಬದಿ ಸವಾರ ಸಾವು

ಸಕ್ಕರಾಯಪಟ್ಟಣ: ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಬೊಲೆರೋ ಪಿಕಪ್ ವಾಹನವು ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ...

ತೋಟದಲ್ಲಿ ಮಹಿಳೆಯ ಕುತ್ತಿಗೆಯಲ್ಲಿದ್ದ ₹6.30 ಲಕ್ಷ ಮೌಲ್ಯದ ಚಿನ್ನದ ಸರ ಕಳವು

ಕಡೂರು: ತೋಟದಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಸುಮಾರು ₹6.30 ಲಕ್ಷ ಮೌಲ್ಯದ 45 ಗ್ರಾಂ...