ಚಿಕ್ಕಮಗಳೂರು: ರಸ್ತೆ ಕಾಮಗಾರಿಗಳು, ಭದ್ರ ಉಪಕಣಿವೆ ಯೋಜನೆಗಳಿಗೆ ಕಾಂಗ್ರೆಸ್ ಶಾಸಕರುಗಳಲ್ಲಿ “ಸಿಟ್ಟು” ಮಡಿಗಟ್ಟಿದೆ. ಇದಕ್ಕೆ ಪ್ರತಿಯಾಗಿ ವಿಧಾನ ಪರಿಷತ್ ಸದಸ್ಯಮತ್ತು ಬಿಜೆಪಿ ಮುಖಂಡ ಸಿ.ಟಿ.ರವಿ ಹಾದಿ ರಂಪ,ಬೀದಿ ರಂಪ ಮಾಡಿಕೊಂಡು ದೂರುಪ್ರತಿದೂರು ದಾಖಲಿಸುವ ಮೂಲಕ ಮುಂದಿನ ಚುನಾವಣೆಗೆ ಈಗಲೇ ಸ್ಕೆಚ್ ರೆಡಿಮಾಡಿಕೊಳ್ಳುತ್ತಿದ್ದಾರೆ.
ತರೀಕೆರೆ ,ಕಡೂರು ಚಿಕ್ಕಮಗಳೂರು ವಿಧಾನ ಕ್ಷೇತ್ರಗಳ ನೂರಾರು ಕೆರೆ ತುಂಬಿಸುವ ಭದ್ರ ಬುನಾದಿ ಬರೆದವರು ಸಿ.ಟಿ.ರವಿ ಹಟ, ಡಿ.ಎಸ್.ಸುರೇಶ್ ಮತ್ತು ಬೆಳ್ಳಿಪ್ರಕಾಶ್ ನಿಜ ಆದರೆ ಬದಲಾದ ಪ್ರತಿನಿಧಿಗಳು ಅನಿವಾರ್ಯವಾಗಿ ಮುಂದುವರೆಸುವ ಜವಬ್ದಾರಿ ಇರುತ್ತದೆ ಅದರಂತೆ ಶಾಸಕ ತಮ್ಮಯ್ಯ, ಆನಂದ್, ಶ್ರೀನಿವಾಸ್ ನಿಭಾಯಿಸುತ್ತಿದ್ದಾರೆ. ಭದ್ರ ಉಪಕಣಿವೆ ನೀರಾವರಿ ಯೋಜನೆಯ ನೀರು ಹರಿಸುವುದು ತರೀಕೆರೆ ಕ್ಷೇತ್ರದಲ್ಲಿ ಆದರೆ ಕಡೂರು ಕ್ಷೇತ್ರದ ಶಾಸಕ ಯಾವ ಮುಲಾಜು ನೋಡದೆ ತಾವೇ ಹೋಗಿ ನೀರು ಹರಿಸುವ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ.
ಆಗ ಶ್ರೀನಿವಾಸ್ ಇನ್ನೊಂದು ದಿನ ಮತ್ತೊಂದು ಕಾರ್ಯಕ್ರಮ ನಡೆಸಿ ನೀರು ಹರಿಸುವ ಕೆಲಸಕ್ಕೆ ಮತ್ತೊಮ್ಮೆ ಚಾಲನೆ ನೀಡಿದ್ದಾರೆ.ಇದಕ್ಕೆ ಶ್ರೀನಿವಾಸ್ ಅಳಿಯ ಚೇತನ್ ಕೆಂಪರಾಜ್ ತರೀಕೆರೆಯಲ್ಲಿ ಒರಜಿನಲ್ ಕಾಂಗ್ರೆಸ್ ಕಡೂರಿಗೆ ಬಂದ ತಕ್ಷಣ ದಳದ ಅಭ್ಯರ್ಥಿ ಹೀಗಾಗಿ ಅಂದರೆ ಒಂದೇ ಪಕ್ಷದಲ್ಲಿ ಇರುವವರ ಮುಖಗಳು ಉತ್ತರ ,ದಕ್ಷಿಣ ಆದಾಗ ಇನ್ನೂ ಬಿಜೆಪಿ ಶಾಸಕರನ್ನು ಕರೆದು ಕುರಿ,ಕೋಳಿ ಕೊಯ್ದು ಕಾರ್ಯಕ್ರಮ ಮಾಡಲು ಸಾಧ್ಯವೇ ?
ಚಿಕ್ಕಮಗಳೂರು ಕ್ಷೇತ್ರದ ರಾಂಪುರ ಬಳಿಯ ರಸ್ತೆ ಕಾಮಗಾರಿ ನಾನು ಹೇಳಿದಂತೆ ಅಧಿಕಾರಿಗಳು ಮಾಡಿಲ್ಲ ಎಂದು ಶಾಸಕ ತಮ್ಮಯ್ಯ ಕೂಗಾಡಿ ರೇಗಾಡಿದ ನಂತರ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದಾಗ ನಗರ ಸಭಾ ಸದಸ್ಯ ಪರಮೇಶ್ ಮತ್ತಿತರರು ಪ್ರತಿಭಟನೆ ನಡೆಸಿದರು. ನಂತರ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಬಂದು ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಸ್ಥಳದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಯಿತು. ಪೊಲೀಸರು ಗಲಾಟೆ ತಪ್ಪಿಸಲು ಹರಸಾಹಸ ಪಟ್ಟರು.ನಂತರ ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದಾಗ ಮತ್ತಷ್ಟು ಪರಿಸ್ಥಿತಿ ಹದಗೆಟ್ಟಿತು.
ಗಲಾಟೆ ಮುಗಿದ ನಂತರ ಪತ್ರಿಕಾ ಹೇಳಿಕೆ ಪ್ರತಿಹೇಳಿಕೆ ಜನರಿಗೆ ಪುಕ್ಕಟ್ಟೆ ಮನರಂಜನೆ ಒದಗಿಸುತ್ತಿದೆ. ಸಿ.ಟಿ.ರವಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತಮ್ಮಯ್ಯರ ಗುಣಗಾನ ಮಾಡಿ.ಬಾರ್,ಕಮೀಷನ್ ಗಣಿಗಾರಿಕೆ, ಬೋಜೇಗೌಡರ ಕೃಪೆಯಿಂದ ಶಾಸಕರಾದವರು ಎಂದು ಮೂದಲಿಸಿ ಹೇಳಿಕೆ ನೀಡಿರುವುದು ಕಾಂಗ್ರೆಸ್ ನವರನ್ನು ಕೆರಳಿಸಿ ರವಿ ಜಾತಕ ಪ್ರಶ್ನೆ ಮಾಡುತ್ತಿದ್ದಾರೆ.
ಒಂದು ಕಾಲದಲ್ಲಿ ಬಯಲು ಸೀಮೆಯಲ್ಲಿ ರಾಜಕೀಯ ಕಿತ್ತಾಟ ನಡೆಯುತಿತ್ತು. ಈಗ ಶೃಂಗೇರಿ ಕ್ಷೇತ್ರದಲ್ಲಿ ಶಾಸಕ ಟಿ.ಡಿ.ರಾಜೇಗೌಡ V/S ಜೀವರಾಜ್ ಕಿತ್ತಾಟ ಮತ್ತು ಆಣೆ ಪ್ರಮಾಣಕ್ಕಾಗಿ ದೇವಸ್ಥಾನ ಸುತ್ತುತ್ತಿರುವುದು ರಾಜಕೀಯ ಕಾರಣಕ್ಕೆ ಎಂಬುದು ಕುತೂಹಲ ಕೆರಳಿಸಿದರೆ.ಚಿಕ್ಕಮಗಳೂರು ಕ್ಷೇತ್ರಕ್ಕೆ ಎಂಟ್ರಿ ಆಗಿದೆ.ಇದು ಮುಂದಿನ ಚುನಾವಣೆವರೆಗೆ ಗಲಾಟೆ ಮುಂದುವರೆಯಲಿದೆ. ಚಿಕ್ಕಮಗಳೂರು ಜಿಲ್ಲೆ ಶಾಂತಿಗೆ ಹೆಸರುವಾಸಿಯಾಗಿದೆ. ಅದರೆ ಇತ್ತೀಚಿನ ರಾಜಕೀಯ ಬೆಳವಣಿಗೆಗೆ ಹಲವರಿಗೆ ಬೇಸರ ತರಿಸಿದೆ.
Tarikere-Kadur-Chikkamagaluru: Congress and BJP clash alternately!
Leave a comment