Home namma chikmagalur chikamagalur ಮೇ 27ಕ್ಕೆ ಅರಣ್ಯ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಪ್ರತಿಭಟನೆ
chikamagalurHomeLatest Newsnamma chikmagalur

ಮೇ 27ಕ್ಕೆ ಅರಣ್ಯ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಪ್ರತಿಭಟನೆ

Share
Share

ಚಿಕ್ಕಮಗಳೂರು: ಜಿಲ್ಲಾಧಿಕಾರಿಗಳು ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಹೋರಾಟಗಾರರ ಜಂಟಿ ಸಭೆ ನಿಗದಿಗೊಳಿಸಿ ಸ್ಥಳೀಯ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿ ಎದುರು ಮೇ ೨೭ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಾಗರಿಕ ವಿಜಯ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ಕುಮಾರ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿ,ಕಂದಾಯ ಮತ್ತು ಅರಣ್ಯ ಇಲಾಖೆ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚನಾ ಸಭೆ ಏರ್ಪಡಿಸಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.

ಸರ್ಕಾರ ನಿಯೋಜಿಸಿರುವ ಎಸ್‌ಐಟಿ ಅಧಿಕಾರಿಗಳಾದ ಗ್ರಾಮಲೆಕ್ಕಿಗರು, ರಾಜಸ್ವನಿರೀಕ್ಷಕರು, ಸರ್ವೆಯರ್ ಮತ್ತು ಅರಣಾಧಿಕಾರಿಗಳು ಗ್ರಾಮಕ್ಕೆ ತೆರಳಿದಾಗ ಸರ್ವೆ ವೇಳೆಯಲ್ಲಿ ಕಡ್ಡಾಯವಾಗಿ ಸ್ಥಳೀಯ ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮಸ್ಥರಿಗೆ ಮಾಹಿತಿ ನೀಡಿ ರೈತರ ಭೂಮಿ, ಶಾಲೆ, ಆಟದ ಮೈದಾನ, ಸ್ಮಶಾನ, ಆಶ್ರಯನಿವೇಶನಗಳನ್ನು ಮುಂದಿನ ೫೦ವರ್ಷಕ್ಕೆ ಆಗಬಹುದಾದ ಜನಸಂಖ್ಯೆ ಅಂದಾಜಿಸಿ ಭೂಮಿಯನ್ನು ಅಗತ್ಯತೆಗಳಿಗೆ ಮೀಸಲಿಟ್ಟು ಉಳಿದ ಭೂಮಿಯನ್ನು ಅರಣ್ಯ ಸ್ವರೂಪದ ಭೂಮಿಗಳನ್ನು ಮಾತ್ರ ಡೀಮ್ಡ್ ವ್ಯಾಪ್ತಿಗೆ ನಕ್ಷೆ ತಯಾರಿಸಬೇಕೆಂದು ಹೇಳಿದರು.

ಪೋಡಿ ಮಾಡಲು ಪಹಣಿಯಲ್ಲಿ ಅರಣ್ಯವೆಂದು ನಮೂದಾಗಿರುವ ಸರ್ವೆನಂಬರ್‌ಗಳನ್ನು ಮಾತ್ರ ಅರಣ್ಯ ಇಲಾಖೆ ಎನ್‌ಓಸಿಗೆ ಕಳುಹಿಸಬೇಕು. ಅರಣ್ಯವೆಂದು ನಮೂದಾಗದ ಸರ್ವೆನಂಬರ್‌ಗಳನ್ನು ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ಅಭಿಪ್ರಾಯಕ್ಕೆ ಪೋಡಿಮಾಡಲು ಕಳುಹಿಸಿ ವಿಳಂಬಮಾಡಬಾರದು. ಜಂಟಿ ಸರ್ವೆಯಲ್ಲಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಬಾಕಿ ಇರುವ ಆಶ್ರಯ ನಿವೇಶನದ ಕಡತಗಳ ಪ್ರಕ್ರಿಯೆ ಅಂತಿಮಗಳಿಸಿ ಬಡವರಿಗೆ ನಿವೇಶನ ನೀಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಎಫ್‌ಎಸ್‌ಓ ಅವರಿಂದ ಅಂತಿಮ ಆದೇಶಗೊಳಿಸಿ ಅರಣ್ಯ ಇಲಾಖೆಗೆ ಕಳುಹಿಸಲಾಗಿರುವ ಎಲ್ಲಾ ಕಡತಗಳನ್ನು ಡಿಎಫ್‌ಓ ಅವರ ಸಹಿಯೊಂದಿಗೆ ಮುಂದಿನ ಹಂತಕ್ಕೆ ಕಳುಹಿಸಬೇಕು. ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಯೋಜನೆಯನ್ನುಈಗಾಗಲೇ ಗ್ರಾಮಪಂಚಾಯಿತಿಗಳು ನೀಡಿರುವ ಅಭಿಪ್ರಾಯದಂತೆ ಕ್ರಮ ಕೈಗೊಳ್ಳಬೇಕು. ಮತ್ತು ಸೀತಾಳಯ್ಯನಗಿರಿ, ನಾರುಕಂತೆ ಮಠ, ದತ್ತಪೀಠಬಾಬಾಬುಡನ್‌ಗಿರಿ, ಬಿಸಗ್ನಿಮಠದಂತ ಶ್ರದ್ಧಾಕೇಂದ್ರಗಳಳಿಗೆ ಹಾಊ ಪ್ರವಾಸೋದ್ಯಮಕ್ಕೆ ಧಕ್ಕೆ ಬಾರದಂತೆ ಕ್ರಮವಹಿಸಬೇಕೆಂದು ಆಗ್ರಹಿಸಿದರು.

ಇನಾಂ ಭೂಮಿಗಳ ಸಮಸ್ಯೆ ಸರಿಪಡಿಸಿ ಅತ್ತಿಗುಂಡಿ, ಮಹಲ್,ಬಿಸಗ್ನಿಮಠ ಗ್ರಾಮಸ್ಥರು ಹಾಗೂ ರೈತರ ನೆವಿಗೆ ಬರಬೇಕು. ಈಗಾಗಲೇ ಸೆಕ್ನ್ ೪(೧) ಪ್ರಕರಣಗಳಲ್ಲಿ ಮೀಸಲು ಅರಣ್ಯಕ್ಕೆ ಉದ್ಘೋಷಣೆಗಿಂತ ಹೆಚ್ಚಿನ ಭೂಮಿಯನ್ನು ಸೆಕ್ಷನಕ್ ೧೭ಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಹೆಚ್ಚುವರಿ ಭೂಮಿಯನ್ನು ಮಸಗಲಿ, ಇಂದಾವರ, ಕಾಮೇನಹಳ್ಳಿ ಅರಣ್ಯ ಪ್ರದೇಶಗಳ ರೈತರ ಸಮಸ್ಯೆಗೆ ಬದಲಿ ಜಮೀನಾಗಿ ಬಳಸಿಕೊಂಡುರೈತರಿಗೆ ಸೂಕ್ತ ಪರಿಹಾರ ಒದಗಿಸಿ ಅರಣ್ಯವಾಸಿಗಳ ಬದುಕು ಕಟ್ಟಿಕೊಡಬೇಕೆಂದು ಕೋರಿದರು.

ಎಫ್‌ಎಸ್‌ಓ ಅವರ ಬಳಿಇರುವ ಸೆಕ್ಷನ್ ೪(೧)ರ ಕಡತಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು. ರೈತರಿಗೆ ಹತ್ತಾರು ವರ್ಷಗಳ ಹಿಂದೆ ನೀಡಲಾಗಿರುವ ಭೂಮಿಗೆ ನಗರಭೆ ವ್ಯಾಪ್ತಿಯಿಂದ ೫ ಕಿ.ಈ. ವೈಮಾನಿಕ ಅಂತ ರ ಪರಿಗಣಿಸುವಂತೆ ಸರ್ಕಾರ ನೀಡಿರುವ ಸಲಹೆಗಳನ್ನು ಹಿಂಪಡೆದು ಭೂಮಾರ್ಗವಾಗಿ ನೇರ ಅಳತೆಯಲ್ಲಿ ಪರಿಗಣಿಸಿ ರೈತರ ಮೀನಿಗೆ ಖಾತ್ರಿ ಒದಗಿಸಬೇಕೆಂದು ತಿಳಿಸಿದರು.

ತಹಸೀಲ್ದಾರರು ಗ್ರಾಮಗಳಿಗೆ ಗೋಮಾಳ ನಿಗದಿಗಿಳಿಸಿ ೯೪ ಸಿ ಪ್ರಕರಣಗಳನ್ನು ಮತ್ತು ನಮೂನೆ ೫೩ ಅರ್ಜಿಗಳ ಪ್ರಕರಣಗಳನ್ನು ವಿಲೇವಾರಿ ಮಾಡಿ ಉಳಿಕೆ ಭೂಮಿಯನ್ನು ಅರಣ್ಯಕ್ಕೆ ಶಿಫಾರಸ್ಸು ಮಾಡಬೇಕು.ನಗರ ಪ್ರಾಧಿಕಾರ ಇತ್ತೀಚೆಗೆ ತಯಾರಿಸಿದ ಹೊಸ ನಕ್ಷೆಯನ್ನು ರೈತರ ಹಿಡುಳಿ ಮತ್ತು ರಸ್ತೆಗಳನ್ನು ಸರಿಯಾಗಿ ಗುರುತಿಸದೆ ಅರಣ್ಯ ಎಂದು ಗುರುತಿಸಿರುವುದನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಕಾರ್ಯದರ್ಶಿ ಕೆ.ಕೆ.ರಘು ಮಾತನಾಡಿಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವಾಪಸ್‌ಪಡೆಯಲಾದ ಭೂಮಿಗೆ ಸಂಬಂಧಿಸಿದಂತೆ ೧೯೯೧ರ ಜನವರಿ ೩ರ ಆದೇಶವನ್ನು ಕಡ್ಡಾಯವಾಗಿ ಕಂದಾಯ ಇಲಾಖೆ ಪಾಲಿಸಬೇಕು. ಅರಣ್ಯ ಸಮಸ್ಯೆಯಿಂದ ಜನರನ್ನು ಹೊರತರಬೇಕೆಂದು ಆಗ್ರಹಿಸಿದರು.

ಜಿಲ್ಲಾ ಕಾಫಿ ಬೆಳೆಗಾರ ಸಂಘದ ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ಮಾತನಾಡಿ, ಬೆಳೆಗಾರರು ನಮೂನೆ ೫೭ರಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ನಮೂನೆ ೫೩ಕ್ಕೆ ಪರಿವರ್ತಿಸಿ ಅರ್ಹ ಪ್ಲಾಂಟೇಷನ್ ರೈತರಿಗೂ ಸಾಗುವಳಿ ನೀಡಬೇಕು.ರೈತರು ಪಡೆಯಲಾಗಿರುವ ಲೀಜ್ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕೆಂದು ತಿಳಿಸಿದರು.

ಹೋರಾಟ ಸಮಿತಿ ಮುಖಂಡರುಗಳಾದ ಇಂದಾವರ ಲೋಕೇಶ್, ಕೋಟೆ ಕುಮಾರಸ್ವಾಮಿ, ಮುನ್ನಾ, ಕುಮಾರ್, ಚಂದ್ರಪ್ಪ ಇದ್ದರು.

Protest demanding resolution of forest issues on May 27

Share

Leave a comment

Leave a Reply

Your email address will not be published. Required fields are marked *

Don't Miss

ರಾಜ್ಯ ಹೆದ್ದಾರಿಯಲ್ಲಿ ದೈತ್ಯ ಒಂಟಿ ಸಲಗ ಪ್ರತ್ಯಕ್ಷ

ಚಿಕ್ಕಮಗಳೂರು : ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ದೈತ್ಯ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ. ಚಿಕ್ಕಮಗಳೂರು ತಾಲೂಕಿನ ಬಸವರಹಳ್ಳಿ...

ಸಾರಿಗೆ ಸಂಸ್ಥೆಯ ಬಸ್ – ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ

ಮೂಡಿಗೆರೆ: ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಮನಕಲಕುವ ಘಟನೆ ನಡೆದಿದೆ. ಮೂಡಿಗೆರೆ ಕಡೆಗೆ ತೆರಳುತ್ತಿದ್ದ...

Related Articles

ನಿಗಮ ಮಂಡಳಿ ಸ್ಥಾನ ನೀಡಲು ಪರದಾಡುತ್ತಿರುವ ಕಾಂಗ್ರೆಸ್

ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಪತ್ತರಗುಟ್ಟುತ್ತಿದೆ.ಶಾಸಕರು ಮತ್ತು ಕಾಂಗ್ರೆಸ್ ದುಡಿದ ಮುಖಂಡರು ಕಣ್ಣ್...

ಗಾಣದಾಳು ವಿದ್ಯುತ್ ಉಪಕೇಂದ್ರ ಕಾಮಗಾರಿ ಪೂರ್ಣ

ಚಿಕ್ಕಮಗಳೂರು: ತಾಲೂಕಿನ ಗಾಣದಾಳು ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ನಿರ್ಮಿಸಲಾಗಿರುವ ವಿದ್ಯುತ್ ಉಪಕೇಂದ್ರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು,...

ಚುನಾವಣಾ ಆಯೋಗದ ವಿರುದ್ಧ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಜವಾಬ್ದಾರಿಯುತ ನಡೆ ಅಗತ್ಯ

ಚಿಕ್ಕಮಗಳೂರು: ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳು ಮತ್ತು ಟೀಕೆಗಳು...

ಮತದಾರರ ಮತಪಟ್ಟಿಯಿಂದ ಹೊರಗಿಡುವವರ ವಿರುದ್ಧ ಕ್ರಮ ಕೈಗೊಳ್ಳಿ

ಚಿಕ್ಕಮಗಳೂರು: ಮತದಾರರ ಪಟ್ಟಿಯಿಂದ ಮತದಾರರನ್ನು ಕೈ ಬಿಡುವ ಚಟುವಟಿಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ನಡೆಯುತ್ತಿದ್ದು, ಇಂಥ ದು?ತ್ಯ...