Home Crime News ಭದ್ರಾ ಚಾನಲ್ ಪಂಪ್ ಹೌಸ್‌ನಲ್ಲಿ ಎಲೆಕ್ನಿಕಲ್ ಸಾಮಗ್ರಿ ಕಳ್ಳತನ
Crime NewsHomeLatest Newsnamma chikmagalurTarikere

ಭದ್ರಾ ಚಾನಲ್ ಪಂಪ್ ಹೌಸ್‌ನಲ್ಲಿ ಎಲೆಕ್ನಿಕಲ್ ಸಾಮಗ್ರಿ ಕಳ್ಳತನ

Share
Share

ಅಜ್ಜಂಪುರ: ಭದ್ರಾ ಚಾನಲ್ ಪಂಪ್ ಹೌಸ್‌ನಲ್ಲಿ ಭಾರಿ ಪ್ರಮಾಣದ ಎಲೆಕ್ನಿಕಲ್ ಸಾಮಗ್ರಿಗಳನ್ನು ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಸಮಯದಲ್ಲಿ ಪಂಪ್ ಹೌಸ್‌ನಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಬಳಸಿಕೊಂಡ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಪಂಪ್ ಹೌಸ್ ಮುಂಭಾಗದಲ್ಲಿದ್ದ ಪ್ಯಾನೆಲ್‌ಗಳ ಒಳಗಿನ ಕೇಬಲ್ ವೈರ್‌ಗಳು, ಬ್ಯಾಟರಿಗಳು, ಕ್ಯೂರಿಂಗ್ ಫ್ಯಾನ್ ಹಾಗೂ ಹೆಚ್‌ಎಂಐ ಡಿಸ್‌ಪ್ಲೇಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಕಳ್ಳತನವಾದ ಈ ಎಲ್ಲಾ ವಸ್ತುಗಳ ಅಂದಾಜು ಮೌಲ್ಯ ಸುಮಾರು 4.90 ಲಕ್ಷ ರೂಪಾಯಿಗಳೆಂದು ತಿಳಿದುಬಂದಿದೆ.

ಈ ಸಂಬಂಧ ಮಂಜುನಾಥ್ ಎಂ.ಎಲ್. ಅವರು ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳತನವಾದ ವಸ್ತುಗಳನ್ನು ವಶಪಡಿಸಿಕೊಳ್ಳುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Theft of electronic equipment at Bhadra Channel Pump House

Share

Leave a comment

Leave a Reply

Your email address will not be published. Required fields are marked *

Don't Miss

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು. ಶೃಂಗೇರಿ ತಾಲೂಕಿನ ಬುಕ್ಕಡಿಬೈಲು ಗ್ರಾಮದ ನಿವಾಸಿಯಾಗಿರುವ ಬಿ.ಜಿ. ಕೃಷ್ಣಮೂರ್ತಿ ವಿರುದ್ಧ ಕರ್ನಾಟಕದಲ್ಲಿ ಒಟ್ಟು 54...

ವಾಹನಗಳ ಮಿರರ್ ತಗುಲಿ-ಕತ್ತಿ-ಬಂದೂಕು ಝಳಪಿಸಿದ ಗಲಾಟೆ

ಚಿಕ್ಕಮಗಳೂರು: ವಾಹನಗಳ ಮಿರರ್ ಪರಸ್ಪರ ತಗುಲಿದ ಸಣ್ಣ ವಿಚಾರ ಕತ್ತಿ-ಬಂದೂಕು ಝಳಪಿಸುವ ಹಂತಕ್ಕೆ ತಲುಪಿರುವ ಆರೋಪವೊಂದು ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಸರವಳ್ಳಿ ಗ್ರಾಮದಲ್ಲಿ ಜುಲೈ 2...

Related Articles

ಮಹಿಳೆ ಗಮನ ಬೇರೆಡೆ ಸೆಳೆದು ₹ 3.90 ಲಕ್ಷ ವಂಚನೆ

ಕಡೂರು: ಕಳೆದ ಜೂನ್‌ನಲ್ಲಿ ಗಮನ ಬೇರೆಡೆಗೆ ಸೆಳೆದು ಗ್ರಾಹಕರೋರ್ವರ ಖಾತೆಯಿಂದ ₹3.90 ಲಕ್ಷಡ್ರಾ ಮಾಡಿರುವ ಪ್ರಕರಣ...

ಶಿವಮೊಗ್ಗ-ಶೃಂಗೇರಿ ಮಾರ್ಗ ಪರಿಗಣಿಸಿ

ಚಿಕ್ಕಮಗಳೂರು: ನೂತನ ರೈಲ್ವೆ ಯೋಜನೆಗೆ ಅಂತಿಮ ಸ್ಥಳ ನಿರ್ಧಾರ ಸಮೀಕ್ಷೆ ಮಾಡುವ ವೇಳೆ ಶಿವಮೊಗ್ಗ, ಭದ್ರಾವತಿ,...

ಕವಿಕಲ್ ಮಠದ ರಸ್ತೆಯಲ್ಲಿ ಹುಲಿ ದಿಢೀರನೆ ಪ್ರತ್ಯಕ್ಷ

ಚಿಕ್ಕಮಗಳೂರು: ಕಾಫಿನಾಡಿನ ಹಸಿರು ಕಾಡುಗಳ ನಡುವೆ ಸಂಚರಿಸುತ್ತಿದ್ದ ಪ್ರವಾಸಿಗರಿಗೆ ಮರೆಯಲಾಗದ ಅನುಭವವೊಂದು ಎದುರಾಗಿದೆ. ಚಿಕ್ಕಮಗಳೂರು ತಾಲೂಕಿನ...

ಭದ್ರಾ ಜಲಾಶಯದ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಸೂಚನೆ

ಚಿಕ್ಕಮಗಳೂರು: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು,...