Home namma chikmagalur chikamagalur ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಧರಣಿ
chikamagalurHomeLatest Newsnamma chikmagalur

ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಧರಣಿ

Share
Share

ಚಿಕ್ಕಮಗಳೂರು:  ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಗೆ ಮಾಡುತ್ತಿರುವ ದ್ರೋಹವನ್ನು ಸರಿಪಡಿಸುವಂತೆ ಆಗ್ರಹಿಸಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕಾರ್ಮಿಕ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ವಸಂತ್‌ಕುಮಾರ್ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಜಿಪಿಎಸ್ ಪೋಟೋ ತೆಗೆಯದೇ ಮನೆಯಲ್ಲಿರುವಾಗ ಮತ್ತು ಕೆಲಸದ ಸ್ಥಳಗಳೀಂದ ವಾಟ್ಸ್‌ಆಫ್ ಪೋಟೋ ಕಾರ್ಮಿಕರಿಂಂದ ಕಳುಹಿಸಿಕೊಂಡು ಜಿಪಿಎಸ್‌ಗೆ ಟ್ಯಾಗ್ ಮಾಡಿ ಸರ್ವರ್‌ಗೆ ಆಪ್‌ಲೋಡ್ ಮಾಡಲಾಗುತ್ತಿದೆ ಎಂದು ದೂರಿದರು.

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಫಲಾನುಭವಿ ಕಾರ್ಮಿಕರು ನೈಜ ಕಾರ್ಮಿಕರಾ ಗಿದ್ದರೂ ಮಂಡಳಿಯ ಸರ್ವರ್‌ನ ತಾಂತ್ರಿಕ ದೋಷದಿಂದ ಹೊಸ ನೊಂದಣಿ ಮತ್ತು ನವೀಕರಣ ಸಮ ಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಮಿಕ ಸೇವಾಕೇಂದ್ರದವರು ಕೂಡ ನೈಜ ಕಟ್ಟಡ ಕಾರ್ಮಿಕರಿಗೆ ಕೆಲಸದ ಸ್ಥಳ ಪರಿಶೀಲನೆ ಮಾಡ ದೇ ಇವರು ರೈತರು ಮತ್ತು ಬೀದಿ ಬದಿ ವ್ಯಾಪಾರಿಗಳು ಎಂದು ಪರಿಶೀಲನಾ ವರದಿಯಲ್ಲಿ ಕಾರ್ಮಿಕ ಇಲಾಖೆಗೆ ಕಳುಹಿಸಿಕೊಡುತ್ತಿದ್ದಾರೆ. ಕಾರ್ಮಿಕ ಇಲಾಖೆಯವರನ್ನು ವಿಚಾರಿಸಿದರೆ ಸೇವಾಕೇಂದ್ರದ ವರದಿ ಯೇ ಅಂತಿಮ ಎಂದು ಹಿರಿಯ ಕಾರ್ಮಿಕ ನಿರೀಕ್ಷಕರು ತಿಳಿಸುತ್ತಿದ್ದಾರೆ ಎಂದರು.

ಕಾರ್ಮಿಕ ಸೇವಾ ಕೇಂದ್ರದಲ್ಲಿ ಮನಸೋಇಚ್ಚೆಯಲ್ಲಿ ಕೆಲಸ ಮಾಡುತ್ತಿದ್ದು ಸರಿಯಾದ ಮಾನದಂಡಗ ಳನ್ನು ಪಾಲಿಸುತ್ತಿಲ್ಲ. ಬೋಗಸ್ ಕಾರ್ಡ್‌ಗಳನ್ನು ನಿಯಂತ್ರಣ ಮಾಡಲು ಕಾರ್ಮಿಕ ಸೇವಾಕೇಂದ್ರವನ್ನು ಜಾ ರಿ ಮಾಡಿದ್ದರೂ ಸಹ ಕಾರ್ಮಿಕ ಸೇವಾ ಕೇಂದ್ರ ಬೋಗಸ್ ಕಾರ್ಡ್‌ಗಳನ್ನು ನಿಯಂತ್ರಣ ಮಾಡುವಲ್ಲಿ ವಿಫ ಲವಾಗಿವೆ ಎಂದು ದೂರಿದರು.

ಎಲ್ಲಾ ಕಾರ್ಮಿಕರುಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಕಾರ್ಮಿಕ ಇಲಾಖೆ ಹೊಸ ಮತ್ತು ನವೀ ಕರಣದ ಕಾರ್ಡ್‌ಗಳಿಗೆ ಅನುಮೋದನೆ ನೀಡುವುದರಿಂದ ಬೋಗಸ್ ಕಾರ್ಡ್‌ಗಳನ್ನು ನಿಯಂತ್ರಿಸಲು ಸಾಧ್ಯ ವಿಲ್ಲ. ಆ ನಿಟ್ಟಿನಲ್ಲಿ ಕಾರ್ಮಿಕ ಸೇವಾ ಕೇಂದ್ರದ ಅವಶ್ಯಕತೆ ಮಂಡಳಿಗೆ ಇಲ್ಲವೆಂದು ಕಾರ್ಮಿಕರ ಸಂಘ ಅಭಿ ಪ್ರಾಯಿಸಿದ್ದು ಕೂಡಲೇ ಸೇವಾ ಕೇಂದ್ರ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಯಕುಮಾರ್ ಮಾತನಾಡಿ ಕಾರ್ಮಿಕ ಮಂಡಳಿ ಹೊಸ ಮತ್ತು ನವೀಕರಣದ ಅರ್ಜಿಗಳಿಗೆ ಶುಲ್ಕ ವಿಧಿಸಿರುವುದನ್ನು ಸ್ಥಗಿತಗೊಳಿಸಬೇಕು. ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿ ಸಲು ಮಂಡಳಿಯ ನಿಧೀಯಿಂದ ರೂ.೬೦೦ ಕೋಟಿ ರೂ. ಪಡೆಯುವುದನ್ನು ನಿಲ್ಲಿಸಬೇಕು. ಕಾರ್ಮಿಕ ಸೇ ವಾ ಕೇಂದ್ರದವರು ಮಂಡಳಿಯ ಮಾನದಂಡದಂತೆ ಕಾರ್ಯವನ್ನು ನಿರ್ವಹಿಸಬೇಕು ಎಂದರು.

ಮಂಡಳಿ ವತಿಯಿಂದ ವಸತಿ ಯೋಜನೆ ಜಾರಿಗೊಳಿಸಬೇಕು. ಕಟ್ಟಡ ಕಾರ್ಮಿಕರಿಗೆ ವಾಸಿಸಲು ಮನೆ ಖರೀದಿ ಅಥವಾ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾ ಯವನ್ನು ೨೦೨೦-೨೧ನೇ ಸಾಲಿನಲ್ಲಿ ನೀಡುತ್ತಿದ್ದಂತೆ ಮುಂದೆ ನೀಡಬೇಕು ಎಂದು ಒತ್ತಾಯಿಸಿ ದರು.

ಸಂಘದ ಜಿಲ್ಲಾಧ್ಯಕ್ಷ ಜಿ.ರಘು ಮಾತನಾಡಿ ಕಟ್ಟಡ ಕಾರ್ಮಿಕರು ಅನಾರೋಗ್ಯದಿಂದ ಒಂದು ದಿನ ಆಸ್ಪ ತ್ರೆಗೆ ದಾಖಲಾದರೂ ಅವರ ವೈದ್ಯಕೀಯ ವೆಚ್ಚವನ್ನು ಮಂಡಳಿಯೇ ಭರಿಸಬೇಕು. ಹಾಗೂ ಮೂರು ದಿನ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ದಾಖಲಾಗಬೇಕೆಂಬ ನಿಯಮವನ್ನು ರದ್ದುಪಡಿಸಬೇಕು. ಬೆಲೆಏರಿಕೆಗೆ ಅನು ಗುಣವಾಗಿ ಹೆಚ್ಚುವರಿ ಸೆಸ್ ಸಂಗ್ರಹಕ್ಕೆ ಕ್ರಮ ವಹಿಸಬೇಕು ಎಂದರು.

ಇದೇ ವೇಳೆ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾ ಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ತಾಲ್ಲೂಕು ಉಪಾಧ್ಯಕ್ಷರಾದ ಸಿ.ಸಿ.ಮಂಜೇಗೌಡ, ಕೆ.ಕುಪ್ಪ ನ್, ಖಜಾಂಚಿ ಎಂ.ಎಸ್.ಜಾನಕಿ, ಸದಸ್ಯರುಗಳಾದ ಎ.ಶ್ರೀಧರ್, ದಯಾಕ್ಷಿ, ಸಲೀಂ, ಶ್ರೀನಿವಾಸ್, ಸಿ.ಸಿ. ಮಂಜುನಾಥ್, ಭದ್ರಚಾರ್ ಮತ್ತಿತರರು ಉಪಸ್ಥಿತರಿದ್ದರು.

Protest demanding redress of injustice faced by workers

Share

Leave a comment

Leave a Reply

Your email address will not be published. Required fields are marked *

Don't Miss

ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಪ್ರತಿಭಟನೆ

ಚಿಕ್ಕಮಗಳೂರು: ತಾಲೂಕಿನ ಅಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸರಿಕೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮೈಲಿಮನೆ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ವಿಲೀನಗೊಳಿಸುವುದನ್ನು ವಿರೋಧಿಸಿ ಬುಧವಾರ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಕೆಸರಿಕೆಯ...

ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಧರಣಿ

ಚಿಕ್ಕಮಗಳೂರು:  ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಗೆ ಮಾಡುತ್ತಿರುವ ದ್ರೋಹವನ್ನು ಸರಿಪಡಿಸುವಂತೆ ಆಗ್ರಹಿಸಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಕಾರ್ಮಿಕರು ಪ್ರತಿಭಟನೆ...

Related Articles

ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದವರ ಬಂಧನ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತಾಂತರದ ಭೂತ ಮತ್ತೆ ದರ್ಶನ ನೀಡಿದೆ. ವಾರದ ಸಂತೆಯಲ್ಲಿ ವ್ಯಾಪಾರಕ್ಕೆ ಬಂದಿದ್ದ...

ಏ.2ಕ್ಕೆ ಕಡೂರಿನಲ್ಲಿ ದೇವರದಾಸಿಮಯ್ಯ ಜಯಂತಿ

ಚಿಕ್ಕಮಗಳೂರು: ಜಿಲ್ಲಾ ಮಟ್ಟದ ೧೦೪೬ನೇ ಶ್ರೀ ದೇವರ ದಾಸಿಮಯ್ಯನವರ ಜಯಂತಿ ಮತ್ತು ದೇವಾಂಗ ಜನಜಾಗೃತಿ ಹಾಗೂ...

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉಳಿಸುವಂತೆ ಆಗ್ರಹಿಸಿ ಧರಣಿ

ಚಿಕ್ಕಮಗಳುರು: ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಬಡ, ರೈತ, ಕೂಲಿ ಕಾರ್ಮಿಕ ಮಕ್ಕಳನ್ನು ಶಿಕ್ಷಣದಿಂದ ವಂಚಿಸಲಾಗುತ್ತಿದೆ...

ಗ್ಯಾಸ್ ಏಜೆನ್ಸಿ-ಗೋದಾಮಿನಿಂದ ಸಿಲಿಂಡರ್ ವಿತರಣೆ ಇಲ್ಲ

ಚಿಕ್ಕಮಗಳೂರು:  ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಎಂದಿನಂತೆ ಜೇಷ್ಠತೆ ಆಧಾರದ ಮೇಲೆ ಗ್ರಾಹಕರ ಮನೆಗಳಿಗೆ ಸಂಬಂಧಿಸಿದ ಗ್ಯಾಸ್...