Home namma chikmagalur chikamagalur ಚಿಕ್ಕಮಗಳೂರು ಜಿಲ್ಲೆಗೆ “ಬ್ಯಾಡ್” ಬಜೆಟ್ !
chikamagalurHomeLatest Newsnamma chikmagalur

ಚಿಕ್ಕಮಗಳೂರು ಜಿಲ್ಲೆಗೆ “ಬ್ಯಾಡ್” ಬಜೆಟ್ !

Share
Share

ಚಿಕ್ಕಮಗಳೂರು: ಜಿಲ್ಲೆಯ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ “ಬ್ಯಾಡ್” ಬಜೆಟ್ ನೀಡಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹಳೆ ಸೀರೆಗೆ ತೇಪೆ ಹಚ್ಚಿದಂತೆ “ಮುಳ್ಳಯ್ಯನ ಗಿರಿ” ಯಿಂದ “ಸೀತಾಳಯ್ಯ ಗಿರಿ” ಮೂಲಕ ಕೈಮಾರದವರಿಗೆ ರೋಪ್ ವೇ ಅಳವಡಿಸುವುದಾಗಿ ಬಜೆಟ್ ನಲ್ಲಿ ಹೇಳಿದ್ದಾರೆ.ಈ ಹಿಂದೆ ಬಸವರಾಜ್ ಬೊಮ್ಮಯಿ ಕೂಡ ಬೊಗಳೆ ಬಿಟ್ಟಿದ್ದರು ಅದು ಕಾರ್ಯರೂಪಕ್ಕೆ ಬರವುದಿರಲಿ ಕಳೆದ ಮೂರು ವರ್ಷಗಳಿಂದ ಇದರ ಸದ್ದು_ಗದ್ದಲವಿರಲಿಲ್ಲಾ.

ಪ್ರವಾಸಿಗರಿಗೆ ಮಾತ್ರ ಇದರ ಉಪಯೋಗವಾಗುತ್ತದೆ.ಇದಕ್ಕೆ ಸರ್ಕಾರಕ್ಕೆ ಆದಾಯ ಬರುತ್ತದೆ ಇದರಿಂದ ಸ್ಥಳೀಯ ರಿಗೆ ಏನು ಪ್ರಯೋಜನ .ಆದರೆ ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಕೂಡ ಇಳಿಮುಖವಾಗಿದೆ.ಪರಿಸರ ನಾಶ ಮಾಡುವುದಕ್ಕೆ ಇಂತಹ ಯೋಜನೆಗಳು ಬೇಕಾ ಎಂದು ಪರಿಸರವಾದಿಗಳ ಜೊತೆಗೆ ಜನರು ಪ್ರಶ್ನೆ ಮಾಡುತ್ತಾರೆ. ಅಜ್ಜಂಪುರ ತಾಲ್ಲೂಕು ಮತ್ತು ಕಡೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೂಡ ಮುಂದುವರೆದ ಕಾಮಗಾರಿಗಳು.

ಚಿಕ್ಕಮಗಳೂರುನಿಂದ ಬೇಲೂರು ರೈಲ್ವೆ ಕಾಮಗಾರಿ ಕೂಡ ಮುಂದುವರೆದ ಕಾಮಗಾರಿ. ಇವುಗಳ ಯಾವುದೇ ಹೊಸ ಯೋಜನೆಯ ಬಗ್ಗೆ ಪ್ರಸ್ತಾಪ ಕೂಡ ಮಾಡಿಲ್ಲ ಎಂದು ವಿರೋಧ ಪಕ್ಷಗಳ ಜೊತೆಗೆ ಸಾರ್ವಜನಿಕರು ಕೂಡ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಡಳಿತಾರೂಢ ಐವರು ಶಾಸಕರ ಜೊತೆಗೆ ನಾಲ್ಕಾರು “ಗೂಟ”ದ ಕಾರಿನಲ್ಲಿ ಓಡಾಡುವ ಜನರಿದ್ದಾರೆ.

ಆದರೆ ಜಿಲ್ಲೆಯ ಅಭಿವೃದ್ಧಿಗೆ ಬೇಕಾದ ಯೋಜನೆಗಳ ಬಗ್ಗೆ ಚಕಾರ ಎತ್ತದೆ ತಮ್ಮಗಳ ಅಧಿಕಾರ ಮುಂದುವರೆಸಲು ತಿಣಕಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನವರು ಸಹ ಅಸಮಾಧಾನಗೊಂಡಿದ್ದಾರೆ.
ಈ ಅವಧಿಯಲ್ಲಿ ಸರ್ಕಾರ ಮೂರನೆಯ ವರ್ಷದ ಬಜೆಟ್ ಮಂಡಿಸುತ್ತಿದ್ದು ಯಾವುದೇ ಹೊಸ ಯೋಜನೆಗಳು ಬಾರದಿರುವುದು ಬರೀ ” ಗ್ಯಾರಂಟಿ ” ಗಂಟೆ ಬಾರಿಸುತ್ತಿರುವುದು ಬಿಟ್ಟರೆ ಬೇರೇನೂ ಇಲ್ಲದಂತೆ ಆಗಿದೆ.

ರೈತರಿಗೆ ಸಂಬಂಧಿಸಿದಂತೆ ಜಿಲ್ಲೆಯ ಪ್ರಮುಖ ಬೆಳೆಗಳ ಬಗ್ಗೆ ತುಟಿ ಬಿಚ್ಚಿಲ್ಲಾ ಸಿದ್ದರಾಮಯ್ಯ ಬಜೆಟ್ ನಲ್ಲಿ ಹೇಳಿದ ವಚನ,ಕವನ ಮತ್ತು ಅಂಕಿ ಅಂಶಗಳಿಗೆ ಚಪ್ಪಾಳೆ ತಟ್ಟುವ ಶಾಸಕರುಗಳು ಇರುವಾಗ,ಕಣ್ಣು, ಕಿವಿ,ಮೂಗಿಲ್ಲದ ಜಿಲ್ಲಾ ಉಸ್ತುವಾರಿ ಸಚಿವ ಕೆ,ಜೆ,ಜಾರ್ಜ್ ಇರುವಾಗ ರೈತರ ಬಗ್ಗೆ ಯೋಚಿಸುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬೇಕಾಗಿದೆ.

ಜಿಲ್ಲೆಯಲ್ಲಿ ಅಡಿಕೆ,ತೆಂಗು, ಮೆಣಸು,ಕಾಫಿ ವಾಣಿಜ್ಯ ಬೆಳೆಗಳು ಹಲವು ರೋಗಗಳಿಗೆ ಒಳಗಾಗಿವೆ.ಬೆಲೆ ಏರುವುದು ಇಳಿಯುವುದು ರೈತರು ನಷ್ಟ ಅನುಭವಿಸಿ ಸೊರಗಿದ್ದಾರೆ.ತೆಂಗು ಬೆಳೆ ನಶಿಸಿ ಹೋಗುತ್ತಿರುವಾಗ ಸರ್ಕಾರ ನೆರವಿಗೆ ಬರಬೇಕು ಆದರೆ ಈ ಬಗ್ಗೆ ಚಕಾರ ಎತ್ತಿಲ್ಲ.ಮಾವು,ಭತ್ತ ಹುಡುಕ ಬೇಕಾಗಿದೆ. ಇನ್ನೂ ಕಾಡು ಪ್ರಾಣಿಗಳ ಕಾಟದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ರೈತರ ಮತ್ತು ಕಾಫಿ ಮತ್ತಿತರ ಬೆಳೆ ನಾಶವಾಗುತ್ತಿದೆ. ಇದಕ್ಕೆ ಪರಿಹಾರ ಇಲ್ಲವೇ ಇಲ್ಲ.

ಗ್ಯಾರಂಟಿ, ಗ್ಯಾರಂಟಿ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲೆಯ ಶಾಸಕರುಗಳು ಪೂರಕ ಬಜೆಟ್ ನಲ್ಲಾದರೂ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡಲಿ ಎಂದು ಜನ ಒತ್ತಾಯ ಮಾಡುತ್ತಿದ್ದಾರೆ.

“Bad” budget for Chikmagalur district!

Share

Leave a comment

Leave a Reply

Your email address will not be published. Required fields are marked *

Don't Miss

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

ಸಾಲ ತೀರಿಸಲಾಗದೆ ರೈತ ಬೆಂಕಿ ಹಚ್ಚಿಕೊಂಡು ಸಾವು

ಕಡೂರು: ಜಮೀನಿನ ಅಭಿವೃದ್ಧಿ ಹಾಗೂ ಬೆಳೆಗೆ ಮಾಡಿದ್ದ ಸಾಲವನ್ನು ತೀರಿಸಲಾಗದೆ ತೀವ್ರವಾಗಿ ಕೊರಗುತ್ತಿದ್ದ ಕನ್ನೇನಹಳ್ಳಿಯ ರೈತರೊಬ್ಬರು ನೆರೆಯವರ ತೋಟದ ಮನೆಯ ಹಿಂಭಾಗ ಬೆಂಕಿ ಹಚ್ಚಿಕೊಂಡು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ದುರಂತ ಘಟನೆ ವರದಿಯಾಗಿದೆ....

Related Articles

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...

ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುವ ನೆಪದಲ್ಲಿ ₹1.59 ಲಕ್ಷ ವಂಚನೆ

ಚಿಕ್ಕಮಗಳೂರು: ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುವುದಾಗಿ ನಂಬಿಸಿ ಬ್ಯಾಂಕ್ ಅಧಿಕಾರಿಯಂತೆ ನಟಿಸಿದ ಸೈಬರ್ ವಂಚಕರು ವ್ಯಕ್ತಿಯೊಬ್ಬರ...