Home namma chikmagalur chikamagalur ಕಾಂಗ್ರೆಸ್‌ನ ಮುಸ್ಲಿಂ ಮುಖಂಡ ರಾಹಿಲ್ ಷರೀಫ್‌ ಬಂದನಕ್ಕೆ ಬಿಜೆಪಿ ಆಗ್ರಹ
chikamagalurHomeLatest Newsnamma chikmagalur

ಕಾಂಗ್ರೆಸ್‌ನ ಮುಸ್ಲಿಂ ಮುಖಂಡ ರಾಹಿಲ್ ಷರೀಫ್‌ ಬಂದನಕ್ಕೆ ಬಿಜೆಪಿ ಆಗ್ರಹ

Share
Share

ಚಿಕ್ಕಮಗಳೂರು : ಇತ್ತೀಚೆಗೆ ದಲಿತ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿರುವ ಕಾಂಗ್ರೆಸ್‌ನ ಮುಸ್ಲಿಂ ಮುಖಂಡ ರಾಹಿಲ್ ಷರೀಫ್‌ನನ್ನು ಕೂಡಲೇ ಬಂಧಿಸಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಕೆ.ಪಿ ವೆಂಕಟೇಶ್ ಆಗ್ರಹಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿಂದು ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಒಂದು ತಿಂಗಳ ಅವಧಿಯಲ್ಲಿ ಒಟ್ಟು ೫ ದಲಿತದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

ಚಿಕ್ಕಮಗಳೂರು ವಿಧಾನಸಭಾಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಸ್ಥಳೀಯ ಶಾಸಕರೂ ಮತ್ತು ಪೋಲಿಸ್ ಇಲಾಖೆಯ ವೈಫಲ್ಯದಿಂದ ದಲಿತರಿಗೆ ರಕ್ಷಣೆ ಇಲ್ಲದಂತಾಗಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಬಿಜೆಪಿ ಎಸ್ಸಿ ಮೋರ್ಚಾದ ವತಿಯಿಂದ ನಗರಬಂದ್‌ಗೆ ಕರೆನೀಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇತ್ತೀಚೆಗೆ ಕಾಂಗ್ರೆಸ್‌ನ ಮುಸ್ಲಿಂ ಮುಖಂಡ ರಾಹೀಲ್ ಷರೀಫ್ ಚೇತನಾ ಎಂಬ ದಲಿತ ಮಹಿಳೆ ಹಾಗೂ ಅವರ ಪತಿಗೂ ಮಚ್ಚಿನಿಂದ ಬೀಸಿ ಹಲ್ಲೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ದಲಿತ ಜನಾಂಗಕ್ಕೆ ಜಾತಿ ನಿಂದನೆ ಮಾಡಿರುತ್ತಾನೆ.

ಈ ಪ್ರಕರಣದಲ್ಲಿ ಆ ರಾಹೀಲ್ ಷರೀಫ್ ಎ-೧ ಆಗಿದ್ದರೂ ಸಹ ಪೊಲೀಸ್ ಇಲಾಖೆಯವರು ೮ ಜನರ ಮೇಲೆ ಎಫ್‌ಐಆರ್ ದಾಖಲಿಸಿರುತ್ತಾರೆ. ಇದರಲ್ಲಿ ರಾಹೀಲ್ ಷರೀಫ್ ಎ-೧ ಆರೋಪಿಯಾಗಿದ್ದರೂ ಇಲ್ಲಿಯವರೆಗೂ ಬಂಧಿಸಿರುವುದಿಲ್ಲಎಂದು ಆರೋಪಿಸಿದರು.

ಹಿಂದೆ ಇದೇ ಇದೇ ವ್ಯಕ್ತಿ ಡಾ.ಬಿ. ಆರ್. ಅಂಬೇಡ್ಕರ್ ರಸ್ತೆಯಲ್ಲಿ ವಾಸವಾಗಿರುವ ದಲಿತ ಯುವಕ ಅವರ ಸ್ನೇಹಿತೆಯನ್ನು ಮೋಟಾರ್ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಎಂಬ ನೆಪದಲ್ಲಿ ಅಡ್ಡಗಟ್ಟಿ ಹಲ್ಲೆಯನ್ನು ನಡೆಸಿರುತ್ತಾನೆ.

ಇವನಿಗೆ ರಾಜಕೀಯ ಬೆಂಬಲವಿರುವುದರಿಂದ ಚಿಕ್ಕಮಗಳೂರು ಶಾಸಕರ ಕುಮ್ಮಕ್ಕು ಇರುವುದರಿಂದ ನಿರಂತರವಾಗಿ ಘಟನೆಗಳು ನಡೆಯುತ್ತಿದೆ. ಹಾಗೂ ಫೆಬ್ರವರಿ ತಿಂಗಳಿನಲ್ಲಿ ಮುಸ್ಲಿಂ ಕಿಡಿಗೇಡಿಗಳಿಂದ ದಲಿತರ ಮೇಲೆ ೫ ದೌರ್ಜನ್ಯ ಘಟನೆಗಳು ನಡೆದರೂ ದಲಿತರ ಓಟ್ ಬ್ಯಾಂಕ್ ಪಡೆದು ದಲಿತರಿಗೆ ರಕ್ಷಣೆ ಕೊಡದ ಶಾಸಕ ಎಚ್.ಡಿ ತಮ್ಮಯ್ಯರವರು ವರ್ತನೆ ಖಂಡನೀಯ ಎಂದರು.

ಇದರ ಹಿಂದೆ ಸಿ.ಟಿ.ರವಿ ೨೦ ವರ್ಷಶಾಸಕರಾಗಿದ್ದ ಅವಧಿಯಲ್ಲಿ ಇಂತಹ ಘಟನೆಗಳಿಗೆ ಅವಕಾಶ ಮಾಡಿಕೊಡುತ್ತಿರಲಿಲ್ಲ.ದಲಿತರಿಗೆ ಸಮಾನತೆ, ಅಧಿಕಾರ, ಗೌರವ, ಪ್ರೀತಿ ಮತ್ತು ಅಭಿವೃದ್ಧಿ ಇಷ್ಟನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದರು. ಈಗಿನ ಶಾಸಕರು ದಲಿತರ ಬಗ್ಗೆ ಕಾಳಜಿ ಇಲ್ಲದ ಶಾಸಕರಾಗಿದ್ದಾರೆ.

ಇವುಗಳ ಬಗ್ಗೆ ಸಮೂದಾಯದವರು ವಿಮರ್ಶೆ ಮಾಡಿಕೊಳ್ಳ ಬೇಕಾಗುತ್ತದೆ ಎಂದರು. ಗೋಷ್ಟಿಯಲ್ಲಿ ಮುಖಂಡರಾದ ಕೊಲ್ಲಭೋವಿ,ಕೇಶವಮೂರ್ತಿ,ಬೀರಪ್ಪ,ಯತೀಶ್,ಹಂಪಯ್ಯ,ರೇವನಾಥ್, ಕೇಶವ ಇದ್ದರು.

BJP demands arrest of Congress’ Muslim leader Raheel Sharif

Share

Leave a comment

Leave a Reply

Your email address will not be published. Required fields are marked *

Don't Miss

ಲೋಕಾಯುಕ್ತ ಬಲೆಗೆ ತಂಗಲಿ ಗ್ರಾಮ ಪಂಚಾಯಿತಿಯ ಪಿಡಿಒ

ಕಡೂರು : ಸೈಟ್ ಗೆ ಎನ್.ಒ.ಸಿ (NOC) ನೀಡಲು ಲಂಚದ ಬೇಡಿಕೆಯಿಟ್ಟಿದ್ದ ಕಡೂರು ತಾಲೂಕಿನ ತಂಗಲಿ ಗ್ರಾಮ ಪಂಚಾಯಿತಿಯ ಪಿಡಿಒ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಿಮ್ಮಶೆಟ್ಟಿ ಎಂಬುವವರಿಗೆ ಸೇರಿದ...

ಕಳಪೆ ಕಾಮಗಾರಿ ತಡೆಗಟ್ಟುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ

ಚಿಕ್ಕಮಗಳೂರು: ಕಡೂರು ತಾಲೂಕಿನ ಐತಿಹಾಸಿಕ ಮದಗದ ಕೆರೆ ಕಾಲುವೆಯ (ಚಾನಲ್) ಕಳಪೆ ಕಾಮಗಾರಿಯನ್ನು ತಡೆಗಟ್ಟುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಅಪರ ಜಿಲ್ಲಾಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ...

Related Articles

ಶಾಸಕ ರಾಜೇಗೌಡರ ಕಣ್ಣೀರು ಕಾಂಗ್ರೆಸ್ ನವರ ಆಕ್ರೋಶ-ಬಿ.ಜೆ.ಪಿಯ ತಲ್ಲಣ

ಶೃಂಗೇರಿ: ಶೃಂಗೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಶಾಸಕ ರಾಜೇಗೌಡರ ವಿರುದ್ಧ ಬಿಜೆಪಿ...

ದಲಿತ ಸಂಘಟನೆಗಳ ಒಕ್ಕೂಟದ ವಿಭಿನ್ನ ಹೋರಾಟ

ಚಿಕ್ಕಮಗಳೂರು : ನಗರ ಸಮೀಪದ ಗೌಡನಹಳ್ಳಿ ವಾಸಿ ಮಂಜುನಾಥ್ ಯಾನೆ ಹೇಮಂತ್ ಎಂಬುವವರಿಗೆ ಸೇರಿದ ಜೆ.ಸಿ.ಬಿ...

ಅರವಿಂದ್ ಕೇಜ್ರವಾಲ್ ದೋಷಮುಕ್ತ ಪಕ್ಷಕ್ಕೆ ಸಂದ ಜಯ

ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಪಿತೂರಿಯಿಂದ ದೆಹಲಿಯ ಅಬಕಾರಿ ಹಗರಣದಲ್ಲಿ ಸಿಲುಕಿಸಲಾಗಿದ್ದ ಅರವಿಂದ್ ಕೇಜ್ರವಾಲ್ ಮತ್ತು...

ಬಿಜೆಪಿ ಟಿಕೆಟ್ ಭ್ರಮೆಯಿಂದ ವೆಂಕಟೇಶ್ ಹೊರಬರಲಿ

ಚಿಕ್ಕಮಗಳೂರು : ಶಾಸಕ ಹೆಚ್.ಡಿ ತಮ್ಮಯ್ಯನವರನ್ನು ಪ್ರತಿ ನಿತ್ಯ ವಿರೋಧಿಸಿದರೆ ಮೂಡಿಗೆರೆ ಮೀಸಲು ಕ್ಷೇತ್ರಕ್ಕೆ ಬಿಜೆಪಿ...