Home namma chikmagalur chikamagalur ಮೂಡಿಗೆರೆ ಪೊಲೀಸ್ ಠಾಣೆಯ ಒಳಗೆ ಕತ್ತಿ ಹಿಡಿದು ದಾಂಧಲೆ
chikamagalurCrime NewsHomeLatest Newsnamma chikmagalur

ಮೂಡಿಗೆರೆ ಪೊಲೀಸ್ ಠಾಣೆಯ ಒಳಗೆ ಕತ್ತಿ ಹಿಡಿದು ದಾಂಧಲೆ

Share
Share

ಮೂಡಿಗೆರೆ: ವೆಲ್ಡಿಂಗ್ ವಿಚಾರದ ಗಲಾಟೆಯು ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಈ ಬೆನ್ನಲ್ಲೇ ಪೊಲೀಸ್ ಠಾಣೆಯ ಒಳಗೆ ಸೇಡು ತೀರಿಸಿಕೊಳ್ಳಲು ಮೃತ ವ್ಯಕ್ತಿಯ ಪುತ್ರ ಕತ್ತಿ ಹಿಡಿದು ದಾಂಧಲೆ ನಡೆಸಿರುವ ಆಘಾತಕಾರಿ ಘಟನೆಗಳು ವರದಿಯಾಗಿವೆ.

ಮೂಡಿಗೆರೆ ಬೇಲೂರು ರಸ್ತೆಯ ಗ್ಯಾರೇಜ್ ಮಾಲೀಕ ಸೈಯದ್ ಜಾವಿದ್ ಎಂಬುವವರ ಮೇಲೆ ರಾಜು ಎಂಬಾತ ವೆಲ್ಡಿಂಗ್ ವಿಚಾರವಾಗಿ ಗಲಾಟೆ ನಡೆಸಿ, ಅವರ ಎದೆಭಾಗಕ್ಕೆ ರಭಸವಾಗಿ ಹೊಡೆದಿದ್ದಾನೆ. ಈ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಕೆಳಕ್ಕೆ ಬಿದ್ದ ಜಾವಿದ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಕೊಲೆಗೆ ಸಂಬಂಧಿಸಿದಂತೆ ಮೃತರ ಪತ್ನಿ ಜೈನಾಬಿ ಅವರು ನೀಡಿದ ದೂರಿನ ಮೇರೆಗೆ ಆಟೋ ರಿಕ್ಷಾ ಚಾಲಕ ರಾಜು ಎಂಬಾತನ ವಿರುದ್ಧ ಮೂಡಿಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಠಾಣೆಯ ಆವರಣದಲ್ಲಿ ಮತ್ತೊಂದು ಹೈಡ್ರಾಮಾ ನಡೆದಿದೆ. ಮೃತ ಜಾವಿದ್ ಅವರ ಪುತ್ರ ಸೈಯದ್ ಆಶಿರ್ (26), ತನ್ನ ತಂದೆಯ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳಲು ಮಾರುತಿ 800 ಕಾರಿನಲ್ಲಿ ಕತ್ತಿ ಹಿಡಿದು ಠಾಣೆಯೊಳಗೆ ನುಗ್ಗಿದ್ದಾನೆ.

ಠಾಣೆಯಲ್ಲಿದ್ದ ಆರೋಪಿಯ ಮೇಲೆ ಹಲ್ಲೆ ಮಾಡಲು ಮುಂದಾದ ಆತನನ್ನು ತಡೆದ ಹೆಡ್ ಕಾನ್ಸೆಬಲ್ ಪುಟ್ಟೇಗೌಡ ಮತ್ತು ಪಿಸಿ 393 ರವರನ್ನು ತಳ್ಳಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ತಕ್ಷಣ ಎಚ್ಚೆತ್ತ ಹೋಮ್ ಗಾರ್ಡ್ ಮೂರ್ತಿ ಮತ್ತು ಇತರೆ ಸಿಬ್ಬಂದಿ ಆತನ ಕೈಯಲ್ಲಿದ್ದ 15 ಇಂಚು ಉದ್ದದ ಹರಿತವಾದ ಕತ್ತಿಯನ್ನು ಕಸಿದುಕೊಂಡು, ಆತನನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆಶಿರ್ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Sword-wielding vandalism inside Mudigere police station

Share

Leave a comment

Leave a Reply

Your email address will not be published. Required fields are marked *

Don't Miss

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ ಬಿ.ಎಸ್. ಅವರ ನೇತೃತ್ವದಲ್ಲಿ ಜುಲೈ 5, 2026ರಂದು ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯ ಆರ್.ಸಿ....

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ ಫಾಲ್ಸ್‌ (Hebbe Falls) ಧುಮ್ಮಿಕ್ಕಿ ಹರಿಯುತ್ತಿದೆ. ಹೆಬ್ಬೆ ಜಲಪಾತದಲ್ಲಿ ಸುಮಾರು 100 ಅಡಿಗೂ ಎತ್ತರದಿಂದ...

Related Articles

ಜಿಲ್ಲಾ ಆಸ್ಪತ್ರೆಯ ಸರ್ಜನ್ ಆಗಿ ಡಾ.ದೇವರಾಜ್

ಚಿಕ್ಕಮಗಳೂರು; ಮಲ್ಲೇಗೌಡ ಜನರಲ್ ಆಸ್ಪತ್ರೆಯ ಸರ್ಜನ್ ಆಗಿ ಡಾ.ಟಿ.ಎಂ.ದೇವರಾಜ್ ನೇಮಕವಾಗಿದ್ದು ಇಂದು ಮಧ್ಯಾಹ್ನ. ಅಧಿಕಾರ ಸ್ಪೀಕಾರ...

ಭದ್ರಾ ಹುಲಿ ಸಂರಕ್ಷಿತ ಸಿಬ್ಬಂದಿಗಳಿಂದಲೇ ಮದ್ಯಪಾನ ಮೋಜು ಮಸ್ತಿ

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ವ್ಯಾಪ್ತಿಯ ತಣಿಗೆಬೈಲು ವಲಯದ, ವಿರೂಪಾಕ್ಷ ಖಾನ್ ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿಗಳು...

ತೋಟಕ್ಕೆ ನೀರು ಬಿಡಲು ಹೋದ ಯುವತಿ ಅಪಹರಣ

ಅಜ್ಜಂಪುರ : ಯುವತಿಯೊಬ್ಬಳನ್ನು ಕಾರಿನಲ್ಲಿ ಬಲವಂತವಾಗಿ ಅಪಹರಿಸಿಕೊಂಡು ಹೋಗಿರುವ ಗಂಭೀರ ಆರೋಪ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ...

ಜೀತ ಪದ್ಧತಿ ತಡೆಗಟ್ಟಲು ಮಾಧ್ಯಮಗಳು ಜೀತ ಪದ್ಧತಿ ವರದಿ ಪ್ರಕಟಿಸಬೇಕು

ಚಿಕ್ಕಮಗಳೂರು: ಮಾನವ ಕಳ್ಳ ಸಾಗಾಣಿಕೆ ಹಾಗೂ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಜೀತ ಪದ್ಧತಿಗೆ...