Home namma chikmagalur chikamagalur ಇನ್ವೆಸ್ಟ್ಮೆಂಟ್ ನಲ್ಲಿ ಅಧಿಕ ಲಾಭ ವೈದ್ಯರೊಬ್ಬರಿಗೆ 21.85 ಲಕ್ಷ ರೂ. ವಂಚನೆ
chikamagalurCrime NewsHomeLatest Newsnamma chikmagalur

ಇನ್ವೆಸ್ಟ್ಮೆಂಟ್ ನಲ್ಲಿ ಅಧಿಕ ಲಾಭ ವೈದ್ಯರೊಬ್ಬರಿಗೆ 21.85 ಲಕ್ಷ ರೂ. ವಂಚನೆ

Share
Share

ಚಿಕ್ಕಮಗಳೂರು: ಆನ್ಲೈನ್ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ನಲ್ಲಿ ಅಧಿಕ ಲಾಭವಿದೆ ಎಂದು ನಂಬಿಸಿ ವೈದ್ಯರೊಬ್ಬರಿಗೆ 21.85 ಲಕ್ಷರು ಪಂಗನಾಮ ಹಾಕಿದ ಘಟನೆ ನಡೆದಿದೆ.

ಡಾ.ಆದರ್ಶ್ ಸುಂದರ್ ರವರ ವಾಟ್ಸಫ್ ನಲ್ಲಿ Axis steady Stocks Club-R2 ಗ್ರೂಪ್ ನಿಂದ ಟ್ರೇಡಿಂಗ್ ಮಾಡಲು ನಿಮಗೆ ಆಸಕ್ತಿ ಇದೆಯೇ? ಎಂದು ಮೆಸೇಜ್ ಬಂದಿದೆ .

ಟ್ರೇಡಿಂಗ್ ಬಗ್ಗೆ ಆಸಕ್ತಿ ಇದ್ದುದರಿಂದ ಟ್ರೇಡಿಂಗ್ ಮಾಡುವುದಾಗಿ ಇವರು ಮೆಸೇಜ್ ಮೂಲಕ ತಿಳಿಸಿದ ಬಳಿಕ ವಾಟ್ಸಫ್ ಗ್ರೂಪ್ ನಲ್ಲಿ ಮೆಂಬರ್ ಆಗಿ ಸೇರಿಸಿದ್ದಾರೆ.

ಗ್ರೂಪ್ ಅಡ್ಮಿನ್ ನವೀನ್ ಕುಲಕರ್ಣಿ & ಸುರಕ್ಷಾ ಟ್ರೇಡಿಂಗ್ ಬಗ್ಗೆ ಗೈಡ್ ಮಾಡಿ, ಐಎಂಇಸಿ ಬ್ಲಾಕ್ ಷೇರಿನಲ್ಲಿ ಹೆಚ್ಚು ಲಾಭ ಇದೇ ಎಂದು ನಂಬಿಸಿ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ.

ತನ್ನ ವರ್ಚುವಲ್ ಐಡಿಯಲ್ಲಿ ಹೆಚ್ಚು ಲಾಭವನ್ನು ತೋರಿಸಿದ್ದು ಅದನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ನಿಮ್ಮ ಖಾತೆ ಲಾಕ್ ಆಗಿದೆ ಇನ್ನು ಹೆಚ್ಚಿನ ಹೂಡಿಕೆ ಮಾಡಿ ಟ್ಯಾಕ್ಸ್ ಕಟ್ಟಿದ ನಂತರ ಹಣವನ್ನು ಡ್ರಾ ಮಾಡಿಕೊಳ್ಳಬಹುದೆಂದು ಹೇಳಿದ್ದಾರೆ.

ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 21,85,000/- ರೂ (ಇಪ್ಪತ್ತೊಂದು ಲಕ್ಷದ ಎಂಭತೈದು ಸಾವಿರ ರೂ ) ಹಣವನ್ನು ವರ್ಗಾವಣೆ ಮಾಡಿಸಿ ಮೋಸ ಮಾಡಿರುವುದು ಬೆಳಕಿಗೆ ಬಂದಿದ್ದು ಪ್ರಕರಣ ದಾಖಲಾಗಿದೆ.

Doctor cheated of Rs 21.85 lakhs for high profit in investment

Share

Leave a comment

Leave a Reply

Your email address will not be published. Required fields are marked *

Don't Miss

ನೈತಿಕ ಪೊಲೀಸ್ ಗಿರಿ ಪ್ರಕರಣ – ಗಂಭೀರವಾಗಿ ಪರಿಗಣನೆ

ಚಿಕ್ಕಮಗಳೂರು: ಕಾಫಿನಾಡಿನ ಸಂತೇ ಮೈದಾನದ ಬಳಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್...

ಕಲ್ಲು ಎಸೆತ ಪ್ರಕರಣ: ಇಬ್ಬರು ಹಿಂದೂ ಯುವಕರ ಬಂಧನ

ಚಿಕ್ಕಮಗಳೂರು: ಕಾಫಿನಾಡಿನ ವಿಜಯಪುರ ಬಡಾವಣೆಯಲ್ಲಿ ನಡೆದಿದ್ದ ಹಿಂದೂ ಮನೆಯೊಂದರ ಮೇಲೆ ನಡೆದಿದ್ದ ಕಲ್ಲು ಎಸೆತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಪೊಲೀಸರು ಇಬ್ಬರು ಹಿಂದೂ ಯುವಕರನ್ನು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ...

Related Articles

ಪ್ರವಾಸ ಮುಂದೂಡಲು ಜಿಲ್ಲಾಡಳಿತ ಮನವಿ

ಚಿಕ್ಕಮಗಳೂರು:  ಐ.ಡಿ. ಪೀಠ ಹಾಗೂ ಸುತ್ತಮುತ್ತಲಿನ ತಾಲ್ಲೂಕಿನ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ ಹಾಗೂ...

ಫೆ.೨೮-ಮಾ.೧೭ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ

ಚಿಕ್ಕಮಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಫೆಬ್ರವರಿ ೨೮ ರಿಂದ ಮಾರ್ಚ್ ೧೭ರವರೆಗೆ ನಡೆಯಲಿದ್ದು, ಪರೀಕ್ಷೆಗಳನ್ನು...

ಕಾಡುಕೋಣ ದಾಳಿಗೆ ಕೃಷಿಕನಿಗೆ ಗಾಯ

ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಜನತೆಗೆ ಈಗ ಕಾಡುಕೋಣಗಳ ಉಪಟಳ ಹೊಸ ಆತಂಕ ತಂದೊಡ್ಡಿದೆ. ಕೊಪ್ಪ ತಾಲೂಕಿನ...

ಕಾಫಿನಾಡಿನ ಹಲವೆಡೆ ಕಾಡಾನೆಗಳ ಸಂಚಾರ – ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ

ಚಿಕ್ಕಮಗಳೂರು: ಕಾಫಿನಾಡಿನ ಹಲವೆಡೆ ಕಾಡಾನೆಗಳ ಸಂಚಾರ ತೀವ್ರಗೊಂಡಿದ್ದು, ಅರಣ್ಯ ಇಲಾಖೆ ಹಾಗೂ ಆನೆ ಕಾರ್ಯಪಡೆ (ETF)...