Home namma chikmagalur chikamagalur ಜನತೆಗೆ ಸತ್ಯದ ಅರಿವು ಮೂಡಿಸಲು ಕಾರ್ಯಾಗಾರ
chikamagalurHomeLatest Newsnamma chikmagalur

ಜನತೆಗೆ ಸತ್ಯದ ಅರಿವು ಮೂಡಿಸಲು ಕಾರ್ಯಾಗಾರ

Share
Share

ಚಿಕ್ಕಮಗಳೂರು: ಭಾರತ ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ, ಬಿಜೆಪಿ ನೇತೃತ್ವದ ಕೇಂ ದ್ರ ಸರ್ಕಾರ ವೈಫಲ್ಯತೆ ಹಾಗೂ ಹಿಂದೂ-ಮುಸ್ಲೀಂ ಹತ್ತಿಕ್ಕುವ ಸಂಘಟನೆಗಳ ವಿರುದ್ಧ ಜಾಗೃತಿ ಮೂಡಿಸು ಸುವುದೇ ಕಾರ್ಯಾಗಾರದ ಮೂಲ ಉದ್ದೇಶಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೈ ಯದ್ ಹನೀಫ್ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಆಯೋಜಿ ಸಿದ್ಧ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಾಗಾರ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತವು ಸಮೃದ್ಧ ದೇಶ. ಗಾಂಧೀಜಿ ಜನಿಸಿದ ಮಣ್ಣಿನಲ್ಲಿ ಇತ್ತೀಚೆಗೆ ಕೋಮುವಾದ, ಗಾಂಧೀಜಿ ಕೊ ಂದ ಗೂಡ್ಸೆ ಸಿದ್ದಾಂತಗಳು ಹೆಚ್ಚುತ್ತಿವೆ. ಇದು ಜನಸಾಮಾನ್ಯರಲ್ಲಿ ತಪ್ಪು ಮಾಹಿತಿ ರವಾನೆಯಾಗುತ್ತಿರುವ ಕಾ ರಣ ನೈಜ ಗಾಂಧೀಜಿ ತತ್ವ, ಆದರ್ಶ ಹಾಗೂ ಸಿದ್ದಾಂತಗಳನ್ನು ಪರಿಚಯಿಸುವುದೇ ಕಾರ್ಯಾಗಾರದ ಮು ಖ್ಯ ಕೆಲಸ ಎಂದರು.

ಸಮಾಜದ ಏಕತೆಗಾಗಿ ಕಾಂಗ್ರೆಸ್ ಪಕ್ಷದ ಅನೇಕ ನಾಯಕರುಗಳು ಪ್ರಾಣ ತ್ಯಾಗ ಮಾಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ, ರಾಜೀವ್‌ಗಾಂಧಿ ಕಾಲಘಟ್ಟದಲ್ಲಿ ದೇಶವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಪ್ರಸ್ತು ತ ದಿನದಲ್ಲಿ ತಂತ್ರಜ್ಞಾನ ಉನ್ನತಕ್ಕೇರಲು ಮೂಲ ಕತೃವೇ ಅಂದಿನ ರಾಜೀವ್‌ಗಾಂಧಿಯವರ ಕೆಲಸ-ಕಾ ರ್ಯಗಳೇ ಕಾರಣ ಎಂದು ತಿಳಿಸಿದರು.

ಇತ್ತೀಚೆಗೆ ದೇಶದಲ್ಲಿ ಬಿಜೆಪಿ ಮತ್ತು ಆಪ್ತ ಸಂಘಟನೆಗಳು ಅಧಿಕಾರಕ್ಕಾಗಿ ಹಿಂದೂ-ಮುಸ್ಲೀಂ, ಭಾರ ತ-ಪಾಕಿಸ್ತಾನ ಎಂಬುದರ ಬಗ್ಗೆ ಜನರಲ್ಲಿ ಕಿತ್ತಾಟ ಎಬ್ಬಿಸುತ್ತಿದೆ. ಈ ನಡುವೆ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಹನ್ನೊಂದು ಪೂರೈಸಿದರೆ ನಿರುದ್ಯೋಗ ಸಮಸ್ಯೆ, ಜನರಿಗೆ ವಿಪರೀತ ತೆರಿಗೆ ಬರೆ ಹೆಚ್ಚಿಸುತ್ತಿದೆ ಎಂ ದು ದೂರಿದರು.

ಆ ನಿಟ್ಟಿನಲ್ಲಿ ಜಿಲ್ಲೆಯ ಕಡೂರು ಕ್ಷೇತ್ರದಲ್ಲಿ ಕಾರ್ಯಕರ್ತರು, ಸಿಎಲ್‌ಓಗಳಿಗೆ ಬೃಹತ್ ಮಟ್ಟದ ಕಾರ್‍ಯಾ ಗಾರ ಹಮ್ಮಿಕೊಳ್ಳಲಿದ್ದೇವೆ. ಅಲ್ಲಿನ ಶಾಸಕರು ಬಹಳಷ್ಟು ಉತ್ಸಾಹಕರಾದ ಕಾರಣ ಕಡೂರಿನಲ್ಲೇ ಕಾರ್ಯಾ ಗಾರ ದಿನಾಂಕ ನಿಗಧಿಗೊಳಿಸಿ, ಸಮಸ್ತ ಪಕ್ಷದ ಕಾರ್ಯಕರ್ತರಿಗೆ ಬೆಳಿಗ್ಗೆಯಿಂದ ಸಂಜೆವರೆಗೆ ಕಾರ್ಯಾಗಾ ರ ನಡೆಸಲಾಗುವುದು ಎಂದರು.

ಕೆಪಿಸಿಸಿ ಸಂಯೋಜಕ ಎಂ.ಎಸ್.ಅನಂತು ಮಾತನಾಡಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರ ಆದೇಶದನ್ವ ಯ ಪ್ರತಿ ಜಿಲ್ಲೆಗಳಲ್ಲಿ ಕಾರ್‍ಯಾಗಾರ ನಡೆಸಿ, ಕಾಂಗ್ರೆಸ್ ಪಕ್ಷದ ಇತಿಹಾಸ ಮರುಸೃಷ್ಟಿಸುವ ಕೆಲಸ ಮಾಡಲಾಗು ತ್ತಿದೆ. ಅದರಂತೆ ಮೈಸೂರು, ಬಾಗಲಕೋಟೆ ಮತ್ತು ಹುಬ್ಬಳ್ಳಿ ಜಿಲ್ಲೆಯಲ್ಲಿ ಕಾರ್ಯಾಗಾರ ಹಮ್ಮಿಕೊಂಡು ಯಶಸ್ವಿಗೊಂಡಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸಿದ್ದಾಂತ ಮತ್ತು ದೇಶಕ್ಕಾಗಿ ಮಣಿದ ನಾಯಕರುಗಳ ವಿಚಾರಮಂಥನ ನಡೆಸುವ ಉದ್ದೇಶ ದಿಂದ ಜಿಲ್ಲಾ ಹಾಗೂ ತಾಲ್ಲೂಕು ಪ್ರಚಾರ ಅಧ್ಯಕ್ಷರು, ಪದಾಧಿಕಾರಿಗಳು ಮುಂದಾಗಬೇಕು. ಜೊತೆಗೆ ಹೋ ಬಳಿ, ಗ್ರಾಮ ಹಾಗೂ ಬೂತ್‌ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಿಸುವ ಮೂಲಕ ಪಂಚ ಗ್ಯಾರಂಟಿ, ಸಕಾ ರದ ಸಾಧನೆ ಕುರಿತು ಮಾಹಿತಿ ರವಾನಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಆರ್.ಚಂದ್ರಣ್ಣ, ಹೇಮಲತಾ, ಸಂಯೋ ಜಕರಾದ ಎ.ಎಸ್.ಮಹೇಶ್ವರಪ್ಪ, ಹೆಚ್.ಸಿ.ಗಂಗಾಧರ್, ಲೋಲಾಕ್ಷಿ ಬಾಯಿ, ಮಂಜೇಗೌಡ, ಬ್ಲಾಕ್ ಕಾಂಗ್ರೆ ಸ್ ಪ್ರಚಾರ ಸಮಿತಿ ಅಧ್ಯಕ್ಷ ಹುಣಸೇಮಕ್ಕಿ ಲಕ್ಷ್ಮಣ್, ಸಿಡಿಎ ಸದಸ್ಯ ಸಿ.ಸಿ.ಮಂಜುನಾಥ್, ಮುಖಂಡರುಗ ಳಾದ ಅನ್ಸರ್‌ಆಲಿ, ದಿವಾಕರ್, ಸಚಿನ್‌ಸಿಂಗ್, ನಿಂಗೇಗೌಡ, ತಂಬಿ, ಸುಧೀರ್ ಉಪಸ್ಥಿತರಿದ್ದರು.

Workshop to make people aware of the truth

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...