Home namma chikmagalur chikamagalur ಎಂಪಿಎಂಸಿ ಆವರಣದಲ್ಲಿ ಹಮಾಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ
chikamagalurHomeLatest Newsnamma chikmagalur

ಎಂಪಿಎಂಸಿ ಆವರಣದಲ್ಲಿ ಹಮಾಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ

Share
Share

ಚಿಕ್ಕಮಗಳೂರು: ಆರೋಗ್ಯವನ್ನು ಪ್ರತಿಯೊಬ್ಬ ಮನುಷ್ಯನ ಜೋಪಾನದಿಂದ ಕಾಪಾಡಿ ಕೊಳ್ಳಬೇಕು. ದೈನಂದಿನ ಕಾಯಕದ ಜೊತೆಗೆ ಶರೀರದ ಏರುಪೇರನ್ನು ನಿಯಂತ್ರಿಸಲು ತಪಾಸಣೆಗೆ ಒಳಗಾ ಗುವುದು ಅತಿಮುಖ್ಯ ಎಂದು ಎಂಪಿಎಂಸಿ ಮಾರ್ಕೆಟ್ ತರಕಾರಿ ವರ್ತಕರ ಸಂಘದ ಅಧ್ಯಕ್ಷ ಎಂ.ಎಸ್. ನಾಗರಾಜ್ ಹೇಳಿದರು.

ನಗರದ ಎಂಪಿಎಂಸಿ ಆವರಣದಲ್ಲಿ ಮಂಗಳವಾರ ಚಿಕ್ಕಮಗಳೂರು ಎಪಿಎಂಸಿ ಮಾರ್ಕೆಟ್ ತರಕಾ ರಿ ವರ್ತಕರ ಸಂಘ ಹಾಗೂ ಜೀವಿತಾ ಫೌಂಡೇಷನ್ ವತಿಯಿಂದ ಹಮಾಲಿ ಕಾರ್ಮಿಕರಿಗೆ ಆಯೋಜಿಸಿದ್ಧ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಮಾಲಿ ವೃತ್ತಿಬಾಂಧವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸಂಬಂಧ ಉಚಿತ ತಪಾಸಣೆ ನಡೆಸ ಲಾಗುತ್ತಿದೆ. ಪ್ರತಿನಿತ್ಯವು ಕೆಲಸಕ್ಕೆ ಮಾತ್ರ ಸೀಮಿತರಾಗದೇ, ದೇಹದ ಸ್ಥಿತಿಗತಿ ನಿಯಂತ್ರಣಕ್ಕೆ ತಪಾಸಣೆ ಮಾ ಡಿಸಬೇಕು. ದಿಡೀರನೇ ಅನಾರೋಗ್ಯಕ್ಕೆ ತುತ್ತಾಗುವ ಮೊದಲೇ ಎಚ್ಚೆತ್ತುಕೊಂಡು ಆರಂಭದಲ್ಲೇ ಮುಂಜಾಗ್ರತೆ ವಹಿಸಬೇಕು ಎಂದರು.

ಪ್ರಸ್ತುತ ಹಮಾಲಿ ಕಾರ್ಮಿಕರು ಸೂರ್ಯದಯದ ಮುನ್ನವೇ ತರಕಾರಿ ವ್ಯಾಪಾರದಲ್ಲಿ ತೊಡಗಿಸಿಕೊ ಳ್ಳುತ್ತಾರೆ. ವಿವಿಧ ತಾಲ್ಲೂಕು, ಜಿಲ್ಲೆಗಳಿಂದ ತರಕಾರಿ ಸಾಗಿಸುವುದೇ ದೈನಂದಿನ ಕಾಯಕ. ಈ ನಡುವೆ ಸ್ವಲ್ಪ ಸಮಯ ಆರೋಗ್ಯದ ಕಡೆ ಚಿಂತಿಸಬೇಕು. ಮನೆ ಯಜಮಾನನ್ನು ನಂಬಿ ಕುಟುಂಬವೇ ಜೀವಿಸುತ್ತಿದ್ದು ಇದ ಕ್ಕೆ ಪೂರಕವಾಗಿ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಹೇಳಿದರು.

ಎಂಪಿಎಂಸಿ ಮಾರ್ಕೆಟ್‌ನಲ್ಲಿ ನೂರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಕೆಲಸದ ಹೊತ್ತಿನಲ್ಲೇ ಆ ರೋಗ್ಯದ ಕಡೆ ಗಮನಹರಿಸುತ್ತಿಲ್ಲ. ಹೀಗಾಗಿ ಎಂಪಿಎಂಸಿ ಆವರಣದಲ್ಲೇ ತಪಾಸಣೆ ಕೇಂದ್ರ ತೆರೆದು ಸ್ಥಳೀ ಯವಾಗಿ ಬಿಪಿ, ಮಧುಮೇಹ, ಇಸಿಜಿ ಸೇರಿದಂತೆ ಇನ್ನಿತರೆ ತಪಾಸಣೆಯನ್ನು ಉಚಿತವಾಗಿ ಆಯೋಜಿಸಿ ಸಂಘವು ಸಹಕರಿಸುತ್ತಿದೆ ಎಂದರು.

ಜೀವಿತಾ ಪೌಂಡೇಷನ್ ಅಧ್ಯಕ್ಷ ಪ್ರಕಾಶ್ ಮಾತನಾಡಿ ಸಂಸ್ಥೆ ಈಗಾಗಲೇ ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರಿನಲ್ಲಿ ಅನೇಕ ಸಾಮಾಜಿಕ ಕಾರ್ಯ ಕೈಗೊಂಡಿದೆ. ವಿಶೇಷವಾಗಿ ಪೌರ ಕಾರ್ಮಿಕರು, ಹಿರಿಯ ರು ಮತ್ತು ವಿಕಲಚೇತನರಿಗೆ ಶಿಬಿರ ಆಯೋಜಿಸುವುದೇ ಮೂಲ ಉದ್ದೇಶವಾಗಿದೆ ಎಂದರು.

ವಯೋವೃದ್ದರಿಗೆ ಸಂಸ್ಥೆ ಕಡೆಯಿಂದ ಊಟದ ವ್ಯವಸ್ಥೆ, ಆರೋಗ್ಯ ತಪಾಸಣೆ, ಹಿರಿಯರ ಸೇವೆ ಮತ್ತು ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. ಇದೀಗ ಹಮಾಲಿ ಕಾರ್ಮಿಕರಿಗೆ ಶಿಬಿರ ನಡೆಸಲಾಗಿದ್ದು ಕೆಲಸದ ಜಂ ಜಾಟದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಪಿಎಂಸಿ ಆವರಣದಲ್ಲೇ ತಪಾಸಣೆ ನಡೆಸಲಾಗುತ್ತಿದೆ ಎಂ ದರು.

ಕಾರ್ಮಿಕ ಇಲಾಖೆ ಆಯುಕ್ತ ಪ್ರಭಾಕರ್ ಮಾತನಾಡಿ ಕೇಂದ್ರ ಹಾಗೂ ರಾಜ್ಯಸರ್ಕಾರ ಕಾರ್ಮಿಕರಿಗೆ ಅನೇಕ ಸವಲತ್ತನ್ನು ಒದಗಿಸುತ್ತಿದೆ. ಮದುವೆ, ಹೆರಿಗೆ ಭತ್ಯೆ, ತುರ್ತು ಅನಾಹುತ ಸಂಭವಿಸಿದ್ದಲ್ಲಿ ಸಹಾಯ ಧನ ಕಲ್ಪಿಸಲಾಗಿದೆ. ಈ ಸೌಕರ್ಯ ಪಡೆದುಕೊಳ್ಳಲು ಮೊದಲು ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಿ ಕೊಂಡು ಸರ್ಕಾರದ ಸವಲತ್ತು ಪಡೆದುಕೊಳ್ಳಬೇಕು ಎಂದರು.

ಇದೇ ವೇಳೆ ತಪಾಸಣೆಯಲ್ಲಿ ೧೪೦ ಮಂದಿ ಭಾಗವಹಿಸಿ ಸದುಪಯೋಗಪಡಿಸಿಕೊಂಡರು. ಕಾರ್ಯ ಕ್ರಮದಲ್ಲಿ ಎಪಿಎಂಸಿ ಮಾಜಿ ಸದಸ್ಯ ಭದ್ರೇಗೌಡ, ವರ್ತಕರ ಸಂಘದ ಕಾರ್ಯದರ್ಶಿ ಪ್ರವೀಣ್, ಉಪಾಧ್ಯಕ್ಷ ರಾದ ಡಿ.ಟಿ.ಹರೀಶ್, ಟಿ.ಎಸ್.ರಘು, ವೈದ್ಯರಾದ ಡಾ|| ಋದ್ವಿಕ್, ಡಾ|| ಸಹನಾ ಉಪಸ್ಥಿತರಿದ್ದರು.

Health check-up camp for porter workers at MPMC premises

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...