Home namma chikmagalur chikamagalur ಶೃಂಗೇರಿ ಕ್ಷೇತ್ರದಲ್ಲಿ ಆನೆಗಳ ಕಾಟ-ರಾಜಕೀಯದವರ ತಿಕ್ಕಾಟ
chikamagalurHomeLatest Newsnamma chikmagalur

ಶೃಂಗೇರಿ ಕ್ಷೇತ್ರದಲ್ಲಿ ಆನೆಗಳ ಕಾಟ-ರಾಜಕೀಯದವರ ತಿಕ್ಕಾಟ

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಗೂ ಕಾಡು ಪ್ರಾಣಿಗಳಿಗೂ ಅವಿನಾಭಾವ ಸಂಬಂಧ. ಆನೆಗಳು, ಕಾಡು ಕೋಣಗಳು,ಜಿಂಕೆ, ಸಾರಂಗ, ಚಿರತೆ,ಹುಲಿಗಳು ಸಾಮಾನ್ಯ. ಆದರೆ ಎಂದೂ ಮನುಷ್ಯರ ಜೊತೆಗೆ ಸಂಘರ್ಷ ಇರಲಿಲ್ಲ.ಆದರೆ ಇಂದು ‌ಮನುಷ್ಯನ ಜೀವ ತೆಗೆಯುತ್ತಿರುವ ಕಾಡಾನೆಗಳ ಉಪಟಳ ಹೇಳ ತೀರದಾಗಿದೆ

ಒಂದು ವಾರದಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡ ಆನೆಯ ಕಾಟಕ್ಕೆ ಜನ ತತ್ತರಗುಟ್ಟಿದ್ದಾರೆ.ಇದನ್ನು ಬಿಜೆಪಿಯವರು ಲಾಭ ಪಡೆಯಲು ಹೋರಾಟ ರೂಪಿಸುವ ಬದಲು ಶಾಸಕ ರಾಜೇಗೌಡರ ಹಣಿಯಲು ಹಿಂಸೆ ಮಾಡತೊಡಗಿದ್ದಾರೆ.

ಮೂಡಿಗೆರೆ ಕ್ಷೇತ್ರದಲ್ಲಿ ಆನೆಗಳ ಉಪಟಾಳ ಹೆಚ್ಚಾಗಿ ಆನೆ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದಾಗ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಶಾಸಕ ಎಂ.ಪಿ.ಕುಮಾರಸ್ವಾಮಿಯ ಬಟ್ಟೆ ಹರಿದು ಹಲ್ಲೆ ನಡೆಸಲು ಜನ ರೊಚ್ಚಿಗೆ ಎದ್ದಾಗ ಕುಮಾರಸ್ವಾಮಿ ಎದ್ದು,ಬಿದ್ದು ಓಡಿದ್ದು ಕಣ್ಣು ಮುಂದಿದೆ.

ಶೃಂಗೇರಿ ಕ್ಷೇತ್ರದಲ್ಲಿ ಕೂಡ ಇಂತಹ ವಾತವರಣ ಸೃಷ್ಟಿಯಾದರೆ ಆಶ್ಚರ್ಯ ಪಡುವಂತಿಲ್ಲ.ಒಂದೇ ವಾರದಲ್ಲಿ ಇಬ್ಬರ ಜೀವ ತೆಗೆದ ಆನೆ ಈ ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಜನರ ಪ್ರಾಣ ತೆಗೆದಿರುವುದರಿಂದ ಜನ ಸಹಜವಾಗಿ ಆಕ್ರೋಶಗೊಂಡಿದ್ದಾರೆ.ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಸತ್ತು ಹೋಗಿದೆ ಬಡವರಿಗೆ ಒಂದು ಕಾನೂನು ,ನೀತಿ,ನಿಯಮ ಶ್ರೀಮಂತ ರಿಗೆ ಅಧಿಕಾರಸ್ಥರಿಗೆ ಒಂದು ಕಾನೂನು ಪಾಲನೆ ಮಾಡುತ್ತಿದ್ದು ಜನರ ಸಿಟ್ಟಿನ ಕಟ್ಟೆ ಹೊಡೆಯುವುದು ಖಚಿತ.

ಕಾಡು ಪ್ರಾಣಿಗಳು ನಾಡಿಗೆ ಬರಲು ಪ್ರಮುಖ ಕಾರಣ ಅರಣ್ಯ ಇಲಾಖೆಗೆ ತಿಳಿದಿರುವುದು ಬಹಿರಂಗ ಸತ್ಯ. ಇವುಗಳಿಗೆ ತಿನ್ನಲು ಆಹಾರ,ಕುಡಿಯಲು ನೀರು ಸ್ವಚ್ಛಂದ ವಾಗಿ ಸುತ್ತಲೂ ಕಾಡು ಬೇಕು. ಆದರೆ ಇಂದು ಅರಣ್ಯ ಇಲಾಖೆ ರೆಸಾರ್ಟ್, ಹೋಮ್ ಸ್ಟೇ ಹಗಲು ರಾತ್ರಿ ತಿರುಗಾಡಲು ಪ್ರವಾಸಿಗರಿಗೆ ಅನುಮತಿ ಕೊಟ್ಟಿರುವುದರಿಂದ ಕಾಡುಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರ ತೊಡಗಿವೆ ಹೀಗಾಗಿ ದಿನಕ್ಕೊಂದು ಕ್ಷಣಕ್ಕೊಂದು ಅನಾಹುತಗಳು ನಡೆಯುತ್ತಿವೆ.

ಅಧಿಕಾರಸ್ಥರು,ಪರಿಸರ ವ್ಯಾಧಿಗಳು ಪತ್ರಿಕೆಗೆ ಹೇಳಿಕೆ ನೀಡಿ ಕೈತೊಳೆದು ಕೊಳ್ಳುತ್ತಿದ್ದಾರೆ.ಜನಸಾಮಾನ್ಯರ ಪ್ರಾಣಕ್ಕೆ ಪರಿಹಾರ ನೀಡುವ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಜನ ರೊಚ್ಚಿಗೆದ್ದ ಕೈಗೆ ಸಿಕ್ಕವರಿಗೆ ಅನಾಹುತ ಮಾಡುವುದು ಖಚಿತ.

ಶೃಂಗೇರಿ ಕ್ಷೇತ್ರ ಬಂದ್: ಕಾಡಾನೆ ದಾಳಿಯಿಂದಾಗಿ ಜನ ರೊಚ್ಚಿಗೆದ್ದ ಘಟನೆ ನಡೆದಿದೆ. ಶಾಸಕ ರಾಜೇಗೌಡ ಮತ್ತು ಜಿಲ್ಲಾಡಳಿತದ ವಿರುದ್ದ ಘೋಷಣೆ ಕೂಗಿದಾಗ ಪೊಲೀಸರು ಲಘ ಲಾಠಿ ಬೀಸಿ ಜನರನ್ನು ಚದುರಿಸಿದ್ದಾರೆ.ಮೃತ ಮಹಿಳೆಯ ದೇಹ ಸಾಗಿಸಲು ಜನ ತಡೆ ಒಡ್ಡಿದಾಗ ಗಲಭೆ ಪ್ರಾರಂಭವಾಗಿ ಪೊಲೀಸರು ಜನರನ್ನು ಚದುರಿಸಲು ಲಾಠಿ ಬೀಸಿದ್ದಾರೆ.

Elephant menace-politician clash in Sringeri constituency

 

 

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...