Home namma chikmagalur chikamagalur ಡಿ.ಸಿ.ಸಿ.ಬ್ಯಾಂಕ್ ನಲ್ಲಿ ಜಾತಿ ” ಘಾಟು” ಮತ್ತು “ಟ್ರಂಕ್” ಸೊಸೈಟಿಗಳ ಆರ್ಭಟ ?
chikamagalurHomeLatest Newsnamma chikmagalur

ಡಿ.ಸಿ.ಸಿ.ಬ್ಯಾಂಕ್ ನಲ್ಲಿ ಜಾತಿ ” ಘಾಟು” ಮತ್ತು “ಟ್ರಂಕ್” ಸೊಸೈಟಿಗಳ ಆರ್ಭಟ ?

Share
Share

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಲ್ಲಿ”ಜಾತಿ” ಗ್ರಹಣ ಮೊದಲಿನಿಂದಲೂ ಇದೆ ಆದರೆ ಈ ಬಾರಿ ಬಹಿರಂಗವಾಗಿ ಕೇಕೆ ಹಾಕುತ್ತಾ ಬೀದಿ,ಬೀದಿಯಲ್ಲಿ ನರ್ತನ ಮಾಡಲು ಚಿಲ್ಟುಪಲ್ಟು ಮುಖಂಡರಿಂದ ಹಿಡಿದು ರಾಷ್ಟ್ರೀಯ ನಾಯಕರವರತನಕ ಹಬ್ಬಿದೆ ಇದರಿಂದ ನೌಕರರಲ್ಲಿ ಹಲವರಿಗೆ ಬಾಡೂಟ ಗ್ಯಾರಂಟಿಯಾಗಿದೆ.ಒಂದಿಬ್ಬರು ನಿರ್ದೇಶಕರಿಗೆ ಅಮ್ಮನ ಹಬ್ಬವನ್ನು ದಿನವೂ ಆಚರಿಸುವಂತಾಗಿದೆ.

ಕಳೆದ ಬಾರಿ ಲಿಂಗಾಯಿತರು ಹಿಡಿತ ಸಾಧಿಸಿದ್ದಾರೆ ಎಂದು ಈ ಬಾರಿ ಚುನಾವಣಾ ಅಜೆಂಡಾ ಮಾಡಿಕೊಂಡು ತಾನೇ ಕುರ್ಚಿಗೆ ಟೆವೆಲ್ ಹಾಕಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ಸಂಬಾಳಿಸಿ ಕೊಂಡು ಹೋಗುವ ಬದಲು ಪುಗ್ಸಟ್ಟೆಗಳ ಮಾತು ಕೇಳಿ ಬ್ಯಾಂಕ್ ನ ಒಳ ಬಣ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದೆ .

ನಿರಂಜನ್ ಸೋತ ನಂತರ ಬಿಜೆಪಿ ಯಿಂದ ಕಿಕ್ ಔಟ್ ಮಾಡಿದಾಗ ಸಹಜವಾಗಿ ಪ್ರತಿಕ್ರಿಯೆ ನೀಡಿ ಇದಕ್ಕೆಲ್ಲ ಕಾರಣ ಸಿ.ಟಿ.ರವಿ ಎಂಬ ಆರೋಪ ಮಾಡಿದ್ದಾರೆ.ಇದಕ್ಕೆ ಸಿ.ಟಿ.ರವಿ ಅಥವಾ ಬಿಜೆಪಿ ಉತ್ತರ ಕೊಡುವುದು ಬಿಟ್ಟು ಬಿಜೆಪಿಯಲ್ಲಿ ಇರುವ ಲಿಂಗಾಯಿತ ಮುಖಂಡರಾದ ಕಲ್ಮರಡಪ್ಪ, ಬೀಕನಹಳ್ಳಿ ಸೋಮಣ್ಣ,ವಿಜಯ್ ಕುಮಾರ್, ಚಿಕ್ಕದೇವನೂರು ರವಿಯಂತಹ ಘಾಟಾನು ಘಟಿಗಳು ನಿರಂಜನ್ ವಿರುದ್ದ ಪತ್ರಿಕಾ ಗೋಷ್ಟಿ ಮಾಡಿ ನಮ್ಮ ನಾಯಕರು ಕೆ.ಎಮ್.ಎಫ್ ಹಾಲು,ಮೊಸರಿದ್ದಂತೆ ಎಂದು ರಾಗ ಎಳೆದಿದ್ದಾರೆ.

ನಿರಂಜನ್ ಲಿಂಗಾಯತ ಆಗಿರುವ ಕಾರಣ ಅವರ ವಿರುದ್ದ ಲಿಂಗಾಯತರನ್ನು ಎತ್ತಿ ಕಟ್ಟಲಾಗಿದೆ ಎಂಬ ಗುರು ತರಹ ಮಾತುಗಳು ಹಾದಿ ಬೀದಿಯಲ್ಲಿ ಚರ್ಚೆಯಾಗುತ್ತಿದೆ. ಇನ್ನೂ ಪುಗ್ಸಟ್ಟೆ ಜಾಗಟೆ ಗಂಟೆ ರೆಡಿ ಇಟ್ಟುಕೊಂಡಿರುವ ಟ್ರಂಕ್ ಸೊಸೈಟಿಗಳಿಗೆ ಡಿ.ಸಿ.ಸಿ ಬ್ಯಾಂಕ್ ನಿಂದ ಅಭಿವೃದ್ಧಿಗಾಗಿ ಹಣ ವಿತರಿಸಲಾಗಿದೆ ಇದರಲ್ಲಿ ಗೋಲ್ ಮಾಲ್ ನಡೆದಿದ್ದು ಸಿಕ್ಕವರಿಗೆ ಸೀರುಂಡೆ ಎಂಬಂತೆ ಆಗಿದೆ ಒಂದೇ ಮನೆಯಲ್ಲಿ ಏಳು ಸೊಸೈಟಿಗಳು ಇವೆ ಇವರೆ ಬಿಜೆಪಿಯ ಸಹಕಾರಿ ಪಿತಾಮಹ ಎನ್ನುತ್ತಿದ್ದು ಈ ಬಗ್ಗೆ ದೂರು ನೀಡಲು ಸೋತ ಅಭ್ಯರ್ಥಿ ದಾಖಲೆಗಳನ್ನು ಹುಡುಕುತ್ತಿದ್ದಾರೆ .

ಕಳೆದ ಹತ್ತು ವರ್ಷಗಳಿಂದ ಈಗಲೂ ಮತ್ತೆ ಅಯ್ಕೆಯಾಗಿರುವ ಟಿ.ಎಲ್.ರಮೇಶ್ ಗೆ ಇವುಗಳು ಕಾಣದಿರುವುದು ಆಶ್ಚರ್ಯ ಏಕೆ ಎಂದರೆ ಇವರ ವಿರುದ್ದ ಚುನಾವಣೆ ಮಾಡಿದ ನಿವೃತ್ತ ಡಿ.ಸಿ.ಸಿ.ಬ್ಯಾಂಕ್ ನೌಕರರ ಸಂಘದ ಬಗ್ಗೆ ಕತ್ತಿ,ಗುರಾಣಿ ಹಿಡಿದು ತಿವಿಯಲು ಶುರುಮಾಡಿರುವುದು ಟ್ರಂಕ್ ಸೊಸೈಟಿಗಳಿಗೆ ಎಲ್ಲರೂ ಸೇರಿ ಗುನ್ನಾ ಹೊಡೆಯುವುದು ಕಾಂಗ್ರೆಸ್ ಗ್ಯಾರಂಟಿ ಅಂತಾಗಿದೆ.

ಜೊತೆಗೆ ಹಾದಿ ಬೀದಿಗೆ ಬ್ಯಾಂಕ್ ತಂದು ನಿಲ್ಲಿಸುವ ಬದಲು ಆಗಿರುವ ಲೋಪ ದೋಷಗಳನ್ನು ಸರಿಪಡಿಸುವ ಬದಲಿಗೆ ಅಂತರಘಟ್ಟೆ ಜಾತ್ರೆಯಲ್ಲಿ ಬಾಂಬೆ ನೋಡು,ಡೆಲ್ಲಿ ನೋಡು,ಬೆಂಗಳೂರು ನೋಡು ಎಂಬ ಪೆಟ್ಟಿಗೆ ಸಿನಿಮಾ ತರಹ ಮಜಾ ತೆಗೆದುಕೊಳ್ಳುವವರು ಜೊತೆಯಲ್ಲಿ ಇದ್ದಾರೆ ಎಂದು ತಿಳಿಯುವುದು ಉತ್ತಮ.

ಜಾತಿ ವ್ಯವಸ್ಥೆ ಎಷ್ಟಿದೆ ಎನ್ನಲು ಬಯಲು ಸೀಮೆಯಿಂದ ಅದರಲ್ಲೂ ಲಿಂಗಾಯತ ಜಾತಿಯವರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ‌ತರಲು ಪ್ರಯತ್ನ ನಡೆಸಿದರು ಪ್ರಯೋಜನ ಆಗಿಲ್ಲ ಎಂದರೆ ಮುಂದೆ ಕಾದಿದೆ ಮಾರಿ ಹಬ್ಬ ಎಂದು ಮಾತನಾಡುವವರು ಇದ್ದಾರೆ.

The emergence of caste “Ghatu” and “Trunk” societies in DCC Bank?

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...