Home namma chikmagalur chikamagalur ಆನ್‌ಲೈನ್ ಟ್ರೇಡಿಂಗ್ ಆಸೆಗೆ 4.36 ಲಕ್ಷ ರೂಪಾಯಿ ಕಳೆದುಕೊಂಡ ಮಹಿಳೆ
chikamagalurHomeLatest Newsnamma chikmagalur

ಆನ್‌ಲೈನ್ ಟ್ರೇಡಿಂಗ್ ಆಸೆಗೆ 4.36 ಲಕ್ಷ ರೂಪಾಯಿ ಕಳೆದುಕೊಂಡ ಮಹಿಳೆ

Share
Share

ಕಡೂರು : ಮಹಿಳೆಯೊಬ್ಬರು ಆನ್‌ಲೈನ್ ಟ್ರೇಡಿಂಗ್ ಆಸೆಗೆ ಬಿದ್ದು 4.36 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದ್ದು, ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರುದಾರ ಮಹಿಳೆ ಕರ್ನಾಟಕ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಮೊದಲಿನಿಂದಲೂ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದರು.

ಇತ್ತೀಚೆಗೆ ಅವರು ಆನ್‌ಲೈನ್‌ನಲ್ಲಿ ಟ್ರೇಡಿಂಗ್ ಬಗ್ಗೆ ಹುಡುಕಾಟ ನಡೆಸುತ್ತಿದ್ದಾಗ, ಜನವರಿ 27 ರಂದು ವಾಟ್ಸಾಪ್ ಮೂಲಕ ರಕ್ಷಿತ ವೇದ ಮತ್ತು ಆನಂದ್ ದಾಲ್ಮೀಯಾ ಎಂಬ ಹೆಸರಿನ ವ್ಯಕ್ತಿಗಳು ಇವರನ್ನು ಸಂಪರ್ಕಿಸಿದ್ದರು.

ವಂಚಕರು ತಮಗೆ ಐಪಿಒ (IPO) ಹಂಚಿಕೆ ಮಾಡಿಸುವುದಾಗಿ ನಂಬಿಸಿ, ‘FisdPro’ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಸಿದ್ದರು.

ಆರಂಭಿಕ ಹೂಡಿಕೆ ಮತ್ತು ಆ್ಯಪ್ ಬಳಕೆಯ ಶುಲ್ಕದ ಹೆಸರಿನಲ್ಲಿ ವಿವಿಧ ದಿನಾಂಕಗಳಂದು ಹಂತಹಂತವಾಗಿ ಒಟ್ಟು 4,36,900 ರೂಪಾಯಿಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಮಹಿಳೆಯು ಆ್ಯಪ್‌ನಲ್ಲಿ ತಮಗೆ ಬಂದ ಲಾಭದ ಹಣವನ್ನು ವಿತ್‌ ಡ್ರಾ ಮಾಡಲು ಹೋದಾಗ ಅದು ಸಾಧ್ಯವಾಗಿಲ್ಲ, ಆಗಲೇ ತಮಗೆ ಮೋಸ ಹೋಗಿರುವುದು ಅವರ ಅರಿವಿಗೆ ಬಂದಿದೆ. ಈ ಸಂಬಂಧ ಸೈಬರ್ ಕ್ರೈಮ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Woman loses Rs 4.36 lakh in online trading

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದಲ್ಲಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ಅಜ್ಜಂಪುರ: ರೈಲ್ವೆ ಹಳಿ ಮೇಲೆ ರೈಲಿಗೆ ಸಿಲುಕಿ ಸುಮಾರು 65 ರಿಂದ 70 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯು ಕೋಲು ಮುಖ, ಸದೃಢ ಮೈಕಟ್ಟು ಮತ್ತು ಎಣ್ಣೆ...

ಶಾಸಕ ತಮ್ಮಯ್ಯ ರಸ್ತೆ ಡಾಂಬರೀಕರಣ ಕಾಮಗಾರಿ ಪರಿಶೀಲನೆ

ಚಿಕ್ಕಮಗಳೂರು: ನಗರಸಭಾ ವ್ಯಾಪ್ತಿಯಲ್ಲಿ ವಿಶೇಷ ಅನುದಾನದಡಿ ಕೈಗೊಂಡಿರುವ ರಸ್ತೆ ಡಾಂಬರೀಕರಣ ಪೂರ್ಣಗೊಂಡ ಕಾಮಗಾರಿಗಳನ್ನು ಶಾಸಕ ಹೆಚ್.ಡಿ. ತಮ್ಮಯ್ಯ ಪರಿಶೀಲಿಸಿದರು. ಅವರು ಇಂದು ನಗರದ ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು...

Related Articles

ಆಸ್ತಿ ವಿವಾದ – ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಆಸ್ತಿ ವಿವಾದವೊಂದು ಭೀಕರ ಸ್ವರೂಪ ಪಡೆದುಕೊಂಡಿದೆ. ತಂದೆ ತಾಯಿ ಹಾಗೂ ತಂಗಿಯನ್ನು ಕಳೆದುಕೊಂಡು ಅನಾಥನಾಗಿದ್ದ...

ಡಿ.ಸಿ.ಸಿ.ಬ್ಯಾಂಕ್ ನಲ್ಲಿ ಜಾತಿ ” ಘಾಟು” ಮತ್ತು “ಟ್ರಂಕ್” ಸೊಸೈಟಿಗಳ ಆರ್ಭಟ ?

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಲ್ಲಿ”ಜಾತಿ” ಗ್ರಹಣ ಮೊದಲಿನಿಂದಲೂ ಇದೆ ಆದರೆ...

ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆನ್‌ಲೈನ್ ಉದ್ಯೋಗ ವಂಚನೆ

ಚಿಕ್ಕಮಗಳೂರು : ಇಂಜಿನಿಯರಿಂಗ್ ಪದವೀಧರೆ ಆನ್‌ಲೈನ್ ಉದ್ಯೋಗ ವಂಚನೆಗೆ ಬಲಿಯಾಗಿದ್ದು, ಈ ಸಂಬಂಧ ಚಿಕ್ಕಮಗಳೂರು ನಗರದ...

ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರ ಬಂಧನ

ಚಿಕ್ಕಮಗಳೂರು : ಮನುಷ್ಯತ್ವಕ್ಕೆ ಮಸಿ ಬಳಿಯುವಂತೆ ವೃದ್ಧ ರೈತರೊಬ್ಬರ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ...