Home namma chikmagalur chikamagalur ಎಂ.ಎಲ್.ಸಿ ಪ್ರಾಣೇಶ್ ಗೆ ಪ್ರಾಣ ಸಂಕಟ.! – ಗಾಯತ್ರಿ ಶಾಂತೇಗೌಡಗೆ ಅಧಿಕಾರ ಗ್ಯಾರಂಟಿನಾ ?
chikamagalurHomeLatest Newsnamma chikmagalur

ಎಂ.ಎಲ್.ಸಿ ಪ್ರಾಣೇಶ್ ಗೆ ಪ್ರಾಣ ಸಂಕಟ.! – ಗಾಯತ್ರಿ ಶಾಂತೇಗೌಡಗೆ ಅಧಿಕಾರ ಗ್ಯಾರಂಟಿನಾ ?

Share
Share

ಚಿಕ್ಕಮಗಳೂರು: ಚಿಕ್ಕ ಮಗಳೂರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಪ್ರಾಣೇಶ್ ಅಯ್ಕೆಯಾಗಿದ್ದು ಕೇವಲ ಆರು ಮತಗಳ ಅಂತರದಿಂದ ಇದನ್ನು ಪ್ರಶ್ನೆ ಮಾಡಿ ಎದುರಾಳಿ ಪರಾಜಿತ ಅಭ್ಯರ್ಥಿ ಗಾಯತ್ರಿಶಾಂತೇಗೌಡ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು ಕಳೆದ ನಾಲ್ಕಾರು ವರ್ಷಗಳಿಂದ ಕೋರ್ಟ್ ಸುತ್ತಿ ಸುಸ್ತಾದವರಿಗೆ ಸದ್ಯ ಅಂತಿಮ ಹಂತಕ್ಕೆ ಬಂದು ನಿಂತಂತೆ ಕಾಣುತ್ತಿದೆ.

ಹೈಕೋರ್ಟ್ ನಲ್ಲಿ ಗುಪ್ತವಾಗಿ ಮತಗಳ ಮರು ಎಣಿಕೆ ಮಾಡಲು ಆದೇಶವಾಗಿದ್ದು ಕಳೆದ ವರ್ಷ ಮತಗಳ ಎಣಿಕೆ ಕಾರ್ಯ ಮುಗಿಸಿ ಕೋರ್ಟ್ ಗೆ ವರದಿ ಕೂಡ ಕೊಡಲಾಗಿತ್ತು. ಸೋತ ಅಭ್ಯರ್ಥಿ ಪರ ಕೆಲವು ಸಲ ಪಟಾಕಿ ಸಿಡಿಸಿ ಜಯಕಾರ ಕೂಡ ಕೂಗಿ ವಿಜಯೋತ್ಸವದ ರೀತಿ ಕುಣಿದು ಕುಪ್ಪಳಿಸಿದ್ದರು.ಆದರೂ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣಿ ನಡೆಯುತಿತ್ತು.

ಪ್ರಾಣೇಶ ಕಡೆ ವಕೀಲರು ಬರೀ ಕೋರ್ಟ್ ನಲ್ಲಿ ದಿನಾಂಕ ತೆಗೆದುಕೊಂಡು ದಿನಗಳನ್ನು ದೂಡುತ್ತಿದ್ದರು ನಿನ್ನೆ ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ದಿನಾಂಕ ತೆಗೆದುಕೊಳ್ಳಲು ವಕೀಲರು ಮುಂದಾದರು ಎನ್ನಲಾಗಿದ್ದು ಇದರಿಂದ ನ್ಯಾಯಾಧೀಶರು ಬರೀ ದಿನಾಂಕ ತೆಗೆದುಕೊಂಡರೆ ಹೇಗೆ ವಿಚಾರಣೆಗೆ ಮುಂದಾಗಿ ಎಂದು ಗರಮ್ ಅಗಿ ಗದರಿದ್ದಲ್ಲದೆ ಫೆಬ್ರವರಿ 24 ರಂದು ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದು ಇಲ್ಲವಾದಲ್ಲಿ ಪ್ರಾಣೇಶ್ ಪಡಿಯುತ್ತಿರುವ‌ ಪಡೆದಿರುವ ವೇತನ ಮತ್ತು ಸೌಲಭ್ಯ ನಿಲ್ಲಿಸ ಬೇಕಾಗುತ್ತದೆ ಎಂದಿರುವ ಬಗ್ಗೆ ವರದಿಯಾಗಿದೆ.

ಸುಪ್ರೀಂ ಕೋರ್ಟ್ ಸೂಚನೆ ಬೆನ್ನಲ್ಲಿ ಪ್ರಾಣೇಶ್ ಗೆ ಸಂಕಷ್ಟ ಎನ್ನುವಂತಾದರೆ ಗಾಯತ್ರಿ ಶಾಂತೇಗೌಡರವರು ನಿಟ್ಟುಸಿರು ಬಿಡುವುದರ ಜೊತೆಗೆ ಪಟಾಕಿ ಸ್ಟಾಕ್ ಮಾಡುವುದರಿಂದ ಹಿಡಿದು ಮಂತ್ರಿಗಿರಿಗೆ ಯಾವ ರೀತಿಯ ಪಟ್ಟುಹಿಡಿಯ ಬೇಕು ಎಂಬ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ ಎಂಬ ಗುಸು,ಗುಸು ಸುದ್ದಿಗಳು ಹರಡಿವೆ

MLC Pranesh is in critical condition.

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...