Home namma chikmagalur chikamagalur ಅಮ್ಮಾ ಬುದ್ದಿಮಾತು ಹೇಳಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ
chikamagalurCrime NewsHomeLatest Newsnamma chikmagalur

ಅಮ್ಮಾ ಬುದ್ದಿಮಾತು ಹೇಳಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

Share
Share

ಚಿಕ್ಕಮಗಳೂರು: ತಾಯಿ ಬೈಗಳು ಜೊತೆ ಬುದ್ದಿ ಮಾತು ಹೇಳಿದ ಕಾರಣಕ್ಕೆ ಮಗಳು ದುರಂತ ಅಂತ್ಯ ಕಂಡ ಘಟನೆ ಕಾಫಿನಾಡು ಚಿಕ್ಕಮಗಳೂರಲ್ಲಿ ನಡೆದಿದೆ.

ಕೊಪ್ಪ ತಾಲೂಕಿನ ಜಯಪುರ ಗ್ರಾಮದ ದುರಂತ ಘಟನೆ ಹಲವರನ್ನು ಭಾವುಕರನ್ನಾಗಿ ಮಾಡಿದೆ. ಊಟ ಮಾಡುವಾಗ 13 ವರ್ಷದ ಮಗಳ ಕೈಯಿಂದ ತಟ್ಟೆ ಬಿದ್ದಿದೆ.

ಅನ್ನ ನೆಲದ ಮೇಲೆ ಚೆಲ್ಲಿದೆ. ಅನ್ನ ಚೆಲ್ಲಿದ ಕಾರಣಕ್ಕೆ ತಾಯಿ ಬೈದಿದ್ದಾರೆ. ಗಮನ ಇಲ್ಲ, ಬರೀ ಟಿವಿ ನೋಡು ಎಂದೆಲ್ಲಾ ಬೈದಿದ್ದಾರೆ.

ಚೆಲ್ಲಿದ ಅನ್ನ ಕ್ಲೀನ್ ಮಾಡಲು ಹೇಳಿದ್ದಾರೆ. ಆದರೆ ತಾಯಿ ಬೈಗಳು ಮಗಳಿಗೆ ಸಹಿಸಲು ಸಾಧ್ಯವಾಗಿಲ್ಲ. ಪರಿಣಾಮ 7ನೇ ತರಗತಿ ವಿದ್ಯಾರ್ಥಿನಿ ಬದುಕು ಅಂತ್ಯಗೊಳಿಸಿದ್ದಾಳೆ.

ಬಿದ್ದ ಅನ್ನ ಎಲ್ಲವನ್ನೂ ಕ್ಲೀನ್ ಮಾಡಲು ಸೂಚಿಸಿದ್ದಾರೆ. ತೀವ್ರ ನೋವಿನಿಂದ ಚೆಲ್ಲಿದ ಅನ್ನ ತೆಗೆದು ಕ್ಲೀನ್ ಮಾಡಿದ್ದಾಳೆ. ಬಳಿಕ ತಾಯಿ ಜೊತೆ ಮಗಳು ಸುಪ್ರೀತಾ ಮಾತನಾಡಲೇ ಇಲ್ಲ.

ಮಗಳಿಗೆ ಬುದ್ದಿ ಮಾತು ಹೇಳಿದ ತಾಯಿ ಕೆಲಸಕ್ಕೆ ಹೊರಟಿದ್ದಾರೆ. ಆದರೆ ತಾಯಿ ಬೈಗುಳ, ಬುದ್ದಿ ಮಾತು ಏನೇ ಹೇಳಿದರೂ ಮಗಳು ಸುಪ್ರೀತಾ ಒಂದು ಮಾತು ಆಡಲಿಲ್ಲ.

ಅಷ್ಟರಲ್ಲೇ ಗಟ್ಟಿ ನಿರ್ಧಾರ ಮಾಡಿದ್ದಳು. ತಾಯಿ ಮನೆಯಿಂದ ಹೊರಗೆ ಹೋದ ಕೆಲ ಹೊತ್ತಲ್ಲೇ ಬದುಕು ಅಂತ್ಯಗೊಳಿಸಿದ್ದಾಳೆ.

Amma was a student who committed suicide because of her brainstorming

Share

Leave a comment

Leave a Reply

Your email address will not be published. Required fields are marked *

Don't Miss

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ ಮಹಿಳೆಗೆ ವಂಚನೆ

ಚಿಕ್ಕಮಗಳೂರು : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಅಮಿಷಕ್ಕೆ ಒಳಗಾದ ಮಹಿಳೆಯೊಬ್ಬರು ಬರೋಬ್ಬರಿ ೨,೫೯,೯೫,೯೨೦ ರೂಪಾಯಿಗಳನ್ನು ಕಳೆದುಕೊಂಡು ಸೈಬರ್ ವಂಚಕರ ಬಲೆಗೆ ಬಿದ್ದಿರುವ ಆಘಾತಕಾರಿ ಘಟನೆ ಬೆಳಕಿಗೆ...

ಅಕ್ರಮವಾಗಿ ಸಾಕುತ್ತಿದ್ದ ಕಾಡುಗಿಳಿಗಳ ವಶ

ಚಿಕ್ಕಮಗಳೂರು: ಮೂರು ಕಾಡು ಗಿಳಿಗಳನ್ನು ಅಕ್ರಮವಾಗಿ ಬಂಧನದಲ್ಲಿಟ್ಟು ಸಾಕುತ್ತಿದ್ದ ಆರೋಪದಲ್ಲಿ ನಗರದ ನೆಹರುನಗರದ ನಿವಾಸಿ ಬಾಬು ಎಂಬುವವರ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆ- ೧೯೭೨ ರ ಅನ್ವಯ ಪ್ರಕರಣ ದಾಖಲಿಸಿರುವ ಸಿಐಡಿ...

Related Articles

ಸಂತ ಸೇವಾಲಾಲ್ ಜಯಂತಿಯಲ್ಲಿ ಸರ್ಕಾರದ ವಿರುದ್ಧದ ಆಕ್ರೋಶ

ಚಿಕ್ಕಮಗಳೂರು: ಕಾಫಿನಾಡಿನ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವು ಸಂಭ್ರಮದ ಬದಲು...

ಶ್ರೀ ಸಂತ ಸೇವಾಲಾಲ್ ತತ್ವಾದರ್ಶಗಳು ಮಾsರ್ಗದರ್ಶಿ:

ಚಿಕ್ಕಮಗಳೂರು:  ಹಿಂಸೆ, ಅಸಮಾನತೆ ಇರುವ ಪ್ರಸ್ತುತ ಸಮಾಜಕ್ಕೆ ಶ್ರೀ ಸಂತ ಸೇವಾಲಾಲ್ ಅವರ ತತ್ವಾದರ್ಶಗಳು ಮಾರ್ಗದರ್ಶನ...

ಜೂಜಾಟದಲ್ಲಿ ತೊಡಗಿಕೊಂಡಿದ್ದ ಮೂವರ ಬಂಧನ

ಚಿಕ್ಕಮಗಳೂರು: ಜಿಲ್ಲೆಯ ದೋಣಗುಡಿ ಬಳಿ ಇಸ್ಪೇಟು ಜೂಜಾಟದಲ್ಲಿ ತೊಡಗಿಕೊಂಡಿದ್ದ ಮೂವರನ್ನು ಬಂಧಿಸಿ 17 ಸಾವಿರ ರು....

ಭದ್ರಾ ನದಿಯಲ್ಲಿ ನಾಪತ್ತೆಯಾಗಿದ್ದ ಯುವಕರ ಮೃತದೇಹ ಪತ್ತೆ

ಚಿಕ್ಕಮಗಳೂರು: ಶನಿವಾರ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಭದ್ರಾ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದ ಇಬ್ಬರು...