Home ಭೂ ಭೌತಿಕ ಸಮೀಕ್ಷೆ ಉದ್ದೇಶದಿಂದ ಲಘು ವಿಮಾನ ಹಾರಾಟ
HomeLatest Newsnamma chikmagalur

ಭೂ ಭೌತಿಕ ಸಮೀಕ್ಷೆ ಉದ್ದೇಶದಿಂದ ಲಘು ವಿಮಾನ ಹಾರಾಟ

Share
Share

ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಮತ್ತು ಕಳಸ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಲಘು ವಿಮಾನವೊಂದು ತಳಮಟ್ಟದಲ್ಲಿ ಹಾರಾಟ ನಡೆಸಿ ಇಲ್ಲಿನ ಜನತೆಯ ಆತಂಕಕ್ಕೆ ಕಾರಣವಾಗಿದ್ದ ಲಘು ವಿಮಾನ ಭೂ ಭೌತಿಕ ಸಮೀಕ್ಷೆ ಉದ್ದೇಶದಿಂದ ಹಾರಾಟ ನಡೆಸಿದೆ ಎಂಬುದು ಲಭ್ಯ ಮೂಲಗಳಿಂದ ತಿಳಿದು ಬಂದಿದ್ದು ಇಲ್ಲಿನ ಜನರು ನಿರಾಳರಾಗಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಎರೆಡೆರೆಡು ಬಾರಿ ತಳಮಟ್ಟದಲ್ಲಿ ಹಾರಾಟ ನಡೆಸಿ ಸಂಚಲನ ಮೂಡಿಸಿತ್ತು. ಯಾವ ಉದ್ದೇಶಕ್ಕಾಗಿ ಲಘು ವಿಮಾನ ಹಾರಾಟ ನಡೆಸುತ್ತಿದೆ. ವಿಮಾನದಲ್ಲಿ ಯಾರಿದ್ದಾರೆ. ಎಲ್ಲಿಂದ ವಿಮಾನ ಬಂದಿತ್ತು ಎಂಬ ಹಲವು ಪ್ರಶ್ನೆಗಳು ಇಲ್ಲಿನ ಜನರಲ್ಲಿ ಮೂಡಿತ್ತು. ಅರಣ್ಯ, ಪೊಲೀಸ್ ಇಲಾಖೆಗೂ ಯಾವುದೇ ಮಾಹಿತಿ ಇರಲಿಲ್ಲ. ಸದ್ಯ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆತ್ತಿದ್ದು, ಸಮೀಕ್ಷೆ ಉದ್ದೇಶದಿಂದ ಲಘು ವಿಮಾನ ಪಶ್ಚಿಮಘಟ್ಟ ಪ್ರದೇಶದಲ್ಲಿ ಹಾರಾಟ ನಡೆಸಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಬಾಳೆಹೊನ್ನೂರು ಮತ್ತು ಕಳಸ ತಾಲೂಕು ಭಾಗದಲ್ಲಿ ಸಂಚಲನ ಮೂಡಿಸಿದ್ದು ಅessಟಿಚಿ ೨೦೮ gಡಿಚಿಟಿಜ ಛಿಚಿಡಿಚಿvಚಿಟಿ ಸೆಣ್ಣ ವಿಮಾನವಾಗಿದ್ದು, ಈ ಪ್ರದೇಶದಲ್ಲಿ ವೈಜ್ಞಾನಿಕ ಉದ್ದೇಶಕ್ಕಾಗಿ ಕಾರ್ಯ ನಿರ್ವಹಿಸಿದೆ ವಿಶೇಷವಾಗಿ ಭೂ ಭೌತಿಕ ಸಮೀಕ್ಷೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಭೂಮಿಯ ಅಡಿಭಾಗವನ್ನು ಗಾಳಿಯಿಂದ ಮ್ಯಾಪಿಂಗ್ ಮಾಡುವ ಕಂಪನಿ ಇದನ್ನು ನಿರ್ವಹಣೆ ಮಾಡಲಾಗುತ್ತಿದ್ದು, ವಿಮಾನದ ಹಿಂಭಾಗದಲ್ಲಿ ಉದ್ದವಾದ ಸೂಜಿತರಹ ಕಾಣುವ ಸಾಧನ ಇದೆ. ಇದನ್ನು ಮ್ಯಾಗ್ನೆಟೋಮೀಟರ್ ಸ್ಟಿಂಗರ್ ಎಂದು ಕರೆಯ ಲಾಗುತ್ತದೆ. ಇದು ಭೂಮಿಯ ಚುಂಬಕ ವ್ಯಾತ್ಯಾಸಗಳನ್ನು ಅಳೆಯಲು ಬಳಸಲಾಗುತ್ತದೆ ಎಂದು ಹೇಳ ಲಾಗುತ್ತದೆ.

ಈ ಲಘು ವಿಮಾನವೂ ಮಂಗಳೂರು(ಐಎಕ್ಸ್‌ಇ) ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿ ಚಿಕ್ಕಮಗ ಳೂರು ಹಾಗೂ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಈ ವಿಮಾನವು ಕಡಿಮೆ ಎತ್ತರದಲ್ಲಿ ಹಾರಾಡುವಂತಹ ವಿಮಾನವಾಗಿದ್ದು, ಜಿಗ್ ಜಾಗ್ ಅಥವಾ ಜಾಲರಿಯ ರೀತಿಯಲ್ಲಿ ಹಾರಾಟ ನಡೆಸುತ್ತದೆ. ಒಂದೇ ಪ್ರದೇಶದ ಮೇಲೆ ಮತ್ತೇ ಮತ್ತೇ ಹಾರಾಟ ನಡೆಸುತ್ತದೆ ಎಂದು ತಿಳಿದು ಬಂದಿದೆ.

ಈ ಲಘು ವಿಮಾನವೂ ಖನಿಜ ಸಂಪತ್ತು. ಭೂಗರ್ಭ ರಚನೆ, ಭೂಗರ್ಭ ಜಲ ಸಂಪನ್ಮೂಲ, ಚುಂಬಕ ಕ್ಷೇತ್ರದ ಬದಲಾವಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ. ಈ ಹಿನ್ನಲೆಯಲ್ಲಿ ಲಘು ವಿಮಾನ ಹಾರಾಟ ನಡೆಸಿದೆ ಎಂಬುದು ಲಭ್ಯ ಮೂಲಗಳಿಂದ ತಿಳಿದು ಬಂದಿದ್ದು, ಒಟ್ಟಾರೆ ಕಳೆದ ಮೂರು ದಿನಗಳ ಹಿಂದೆ ತಳ ಮಟ್ಟದಲ್ಲಿ ಹಾರಾಟ ನಡೆಸಿ ಜನರ ಆತಂಕಕ್ಕೆ ಕಾರಣವಾಗಿದ್ದ ವಿಮಾನವೂ ಭೂ ಭೌತಿಕ ಸಮೀಕ್ಷೆಗೆ ಹಾರಾಟ ನಡೆಸಿದ್ದೆಂದು ತಿಳಿದು ಇಲ್ಲಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Online phishing fraud for a person from Balehonnur

Share

Leave a comment

Leave a Reply

Your email address will not be published. Required fields are marked *

Don't Miss

ಹೇಮಾವತಿ ನದಿಯಲ್ಲಿ ಬಳಿ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಮೂಡಿಗೆರೆ: ಹೇಮಾವತಿ ನದಿಯಲ್ಲಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೋಣಿಗಂಡಿ ಬಳಿ ನಡೆದಿದೆ. ನದಿ ತೀರದಲ್ಲಿ ತುಂಡಾಗಿ ಬಿದ್ದಿದ್ದ ಸಜೀವ ವಿದ್ಯುತ್...

ಜಿಲ್ಲೆಯಲ್ಲಿ “ಅಡ್ಜಸ್ಟ ಮೆಂಟ್ ಜನಪ್ರತಿನಿಧಿಗಳು. ಜಿಲ್ಲೆ ದೋಚುತ್ತಿರುವ ಖದೀಮರು ?

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ನಿತ್ಯ ದರೋಡೆ ನಡಯುತ್ತಿವೆ.ಜೊತೆಗೆ ಡ್ರಗ್ಸ್ ಮಾಫಿಯಾ ಕೂಡ ಎಂಟ್ರಿ ಕೊಟ್ಟಿದೆ. ಜಿಲ್ಲೆಯ ಸಮಸ್ಯೆಗಳ ವಿಷಯಗಳ ಮೇಲೆ ನಿಗಾ ವಹಿಸದೆ ಇರುವುದರಿಂದ ರಾಜ್ಯದ ವಿವಿಧ ಭಾಗದಿಂದ ಮತ್ತು...

Related Articles

ನಗರಸಭೆಯಿಂದ ಬೆನಕ ಬಾರ್ ಆಂಡ್ ರೆಸ್ಟೋರೆಂಟ್ ಗೆ ಬೀಗ

ನಗರಸಭೆ ನಿಗದಿಪಡಿಸಿದ ಗಾಡಿಗೆ ಕಸ ನೀಡದೆ ಚರಂಡಿಗೆ ಹಾಕುತ್ತಿದ್ದ ನಗರದ ಬೆನಕ ಬಾರ್ ಆಂಡ್ ರೆಸ್ಟೋರೆಂಟ್...

ಮೂರು ಲಕ್ಷ ರೂ. ಮೌಲ್ಯದ ಗಾಂಜಾ ವಶ

ಚಿಕ್ಕಮಗಳೂರು, ಎನ್ ಡಿಪಿಎಸ್ ಪ್ರಕರಣದಲ್ಲಿ ಆರೋಪಿತನೋರ್ವನನ್ನು ಬಂಧಿಸಿರುವ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಆತನಿಂದ ಮೂರು...

ಕಬಡ್ಡಿ-ಖೋಖೋ ಗ್ರಾಮೀಣ ಸೊಗಡಿನ ಕ್ರೀಡೆಗಳು

ಚಿಕ್ಕಮಗಳೂರು: ಕಬಡ್ಡಿ, ಖೋಖೋ ಹಾಗೂ ವಾಲಿಬಾಲ್ ಗ್ರಾಮೀಣ ಸೊಗಡಿನ ಅ ಮೂಲ್ಯವಾದ ಕ್ರೀಡೆಗಳು. ಇವುಗಳನ್ನು ಮುಂದಿನ...

ಗುತ್ತಿಗೆದಾರರ ಬಾಕಿ ಹಣ ಮರುಪಾವತಿಗಾಗಿ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು: ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ ೩೭ ಸಾವಿರ ಕೋಟಿರೂ. ಹಣ ಮರುಪಾವತಿಗೆ ಒತ್ತಾಯಿಸಿ ಮಾರ್ಚ್ ೦೫...