Home namma chikmagalur chikamagalur ಸಿದ್ದರಾಮೇಶ್ವರರು ಕೃಷಿಕರ ಬಾಳಿಗೆ ಬೆಳಕಾದವರು
chikamagalurHomeLatest Newsnamma chikmagalur

ಸಿದ್ದರಾಮೇಶ್ವರರು ಕೃಷಿಕರ ಬಾಳಿಗೆ ಬೆಳಕಾದವರು

Share
Share

ಚಿಕ್ಕಮಗಳೂರು: ಭಕ್ತಿ ಹಾಗೂ ಕಾಯಕದ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ ಸಿದ್ದರಾಮೇಶ್ವರರು, ಕೆರೆ-ಕಟ್ಟೆಗಳನ್ನು ಕಟ್ಟಿಸುವ ಮೂಲಕ ರೈತರ ಬದುಕು ಹಸನಾಗಿಸುವ ಮೂಲಕ ರೈತರ ಬಾಳಿಗೆ ಬೆಳಕಾದವರು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ ಶೋಷಿತ ವರ್ಗವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸಮಾಜದ ಮುನ್ನೆಲೆಗೆ ತರುವ, ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಕಾಯಕ ಯೋಗಿ ಸಿದ್ದರಾಮೇಶ್ವರರು, ವಚನಗಳ ಮೂಲಕ ಮೂಢನಂಬಿಕೆ, ಅಂಧಕಾರ ತೊಡೆಯಲು ಯತ್ನಿಸಿದ್ದರು ಎಂದರು.

ಸಿದ್ದರಾಮೇಶ್ವರರು ತಮ್ಮ ತತ್ವಜ್ಞಾನವನ್ನು ಸರಳ ಭಾಷೆಯಲ್ಲಿ ತಿಳಿಸಿ ಕೊಡುವ ಮೂಲಕ ಜನ ಸಾಮಾನ್ಯರ ಹೃದಯದಲ್ಲಿ ಪ್ರಜ್ವಲಿಸುತ್ತಿದ್ದಾರೆ. ಕಾಯಕವೇ ಕೈಲಾಸ ಎಂಬ ಸಿದ್ಧಾಂತವನ್ನು ಜೀವನದ ಮೂಲಕ ಸ್ವೀಕರಿಸಿ, ಸಾಮಾಜಿಕ ಸಮಾನತೆ ಮತ್ತು ಮಾನವೀಯತೆಯನ್ನು ವಚನಗಳ ಮೂಲಕ ಸಮಾಜಕ್ಕೆ ತಿಳಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ. ವಚನಗಳ ಜೀವನ ಮಾರ್ಗದರ್ಶಕ ತತ್ವಗಳು ಜಗತ್ತಿಗೆ ಸಾರಿದ ಸಿದ್ದರಾಮೇಶ್ವರರು ಸಂತ ಶಿವಯೋಗಿಗಳು ಎಂದು ತಿಳಿಸಿದರು.

ಬಸವಾದಿ ಶರಣರು ಹಾಕಿಕೊಟ್ಟ ವಿಚಾರವನ್ನು ಮುಂದಿನ ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಮಹನೀಯರ ಜಯಂತಿ ಆಚರಿಸಲಾಗುತ್ತಿದೆ. ಮಹನೀಯರ, ಮಹಾಪುರುಷರ  ಜಯಂತಿಯನ್ನು ಒಂದು ಜಾತಿ, ಧರ್ಮ, ವರ್ಗಕ್ಕೆ ಸೀಮಿತಗೊಳಿಸಬಾರದು. ದಾರ್ಶನಿಕರ ವಿಚಾರಧಾರೆಗಳು ಇಡೀ ಪ್ರಪಂಚವೇ ಮೆಚ್ಚುವ ವಿಚಾರಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೂ.೫೦ ಲಕ್ಷ ಮುಖ್ಯಮಂತ್ರಿಗಳ ವಿಶೇಷ ಅನುದಾನವನ್ನು ಸಿದ್ದರಾಮೇಶ್ವರ ಭವನಕ್ಕೆ ಮಂಜೂರು ಮಾಡಿಸಲಾಗಿದೆ. ಕಡೂರಿನಲ್ಲಿರುವ ನೊಳಂಬ ವೀರಶೈವರ ಸಮುದಾಯ ಭವನಕ್ಕೂ ಪ್ರಾಮಾಣಿಕ ಪ್ರಯತ್ನದ ಮೂಲಕ ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಮಳೆಯ ದೇವರು ಎಂದು ಕರೆಸಿಕೊಂಡಿರುವ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು, ಹೋದೆಡೆಯಲ್ಲೆಲ್ಲಾ ಕೆರೆ ಕಟ್ಟಿಸುವ ಕಾಯಕದಲ್ಲಿ ನಿರತರಾಗಿ ಕೃಷಿ ಬದುಕಿಗೆ ಪ್ರಧಾನವಾದ ನೀರಾವರಿ ಯೋಜನೆಗಳ ಮೂಲಕ ಕೃಷಿಕರು ಹಾಗೂ ಜನಸಾಮಾನ್ಯರಿಗೆ ಹತ್ತಿರವಾದರು. ಆ ಕಾರಣಕ್ಕಾಗಿ ಇಂದಿಗೂ ಕೂಡ ಸಿದ್ದರಾಮೇಶ್ವರರನ್ನು ಮಳೆಯ ದೇವರು ಎಂದೇ ಸಂಬೋಧಿಸುತ್ತಾರೆ ಎಂದು ಹೇಳಿದರು.

ಶರಣ ಸಿದ್ದರಾಮೇಶ್ವರರು ಮನುಷ್ಯನಾಗಿದ್ದರೂ ಅವರನ್ನು ನಾವಿಂದು ದೇವರನ್ನಾಗಿ ಮಾಡಿದ್ದೇವೆ. ಪರವಾಗಿಲ್ಲ. ದೇವರ ಮಾತನ್ನು ನಾವು ಕೇಳಬೇಕಲ್ಲವೆ? ಹಾಗಾಗಿ ಸಿದ್ದರಾಮೇಶ್ವರರು ಹಾಕಿಕೊಟ್ಟ ಮಾರ್ಗದಲ್ಲಿ ಕಾಯಕ ಜೀವಿಗಳಾಗಿ ಜನಪರ ಯೋಚನೆವುಳ್ಳವರಾಗಿ ನಾವು ಜನರಿಗೆ ಹತ್ತಿರವಾಗಬೇಕು. ಅವರ ವ್ಯಕ್ತಿತ್ವದ ಕಾರಣಕ್ಕಾಗಲಿ, ಕಾಯಕದ ವಿಚಾರಕ್ಕಾಗಲಿ ಅಥವಾ ಇನ್ಯಾವುದೋ ಕಾರಣಕ್ಕಾಗಿಯೇ ಆಗಲಿ ಅವರನ್ನು ಅನುಸರಿಸುವವರಾಗಿ ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಸಿದ್ದರಾಮೇಶ್ವರರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.

ಬೇಲೂರು ತಾಲ್ಲೂಕು ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸಿದ್ದರಾಮೇಶ್ವರರು ಕಾಯಕ ತತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ಹೇಳಿದರು.

ನೊಳಂಬ ಸಮಾಜದ ಮುಖಂಡರುಗಳಾದ ಎಸ್.ಸಿದ್ದಪ್ಪ, ಎಸ್.ಎಂ.ರಾಜಪ್ಪ, ಮಂಜುಳಮ್ಮ, ಜಿಲ್ಲಾ ಬೋವಿ ಸಂಘದ ಅಧ್ಯಕ್ಷ ಕೊಲ್ಲಾ ಬೋವಿ, ತಾಲ್ಲೂಕು ಬೋವಿ ಸಮಾಜದ ಅಧ್ಯಕ್ಷ ನಾಗರಾಜ್, ಲಲಿತೇಗೌಡರು, ಶಿವಾನಂದ, ಎಸ್.ಆರ್.ಸೋಮಣ್ಣ, ಎಂ.ಸತೀಶ್, ಬಿ.ಆರ್.ಜಗದೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಉಪತಹಸೀಲ್ದಾರ್ ಪ್ರಸನ್ನ, ವಿವಿಧ ಇಲಾಖೆ ಅಧಿಕಾರಿಗಳು, ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಸ್ವಾಗತಿಸಿದರು.

Siddaramaiah is a light in the lives of farmers.

Share

Leave a comment

Leave a Reply

Your email address will not be published. Required fields are marked *

Don't Miss

ದಬ್ಬಾಳಿಕೆಯಿಂದ ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ಯತ್ನ

ಚಿಕ್ಕಮಗಳೂರು: ಬಿಡದಿ ಟೌನ್‌ಶಿಪ್ ಯೋಜನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಬ್ಬಾಳಿಕೆಯ ಮೂಲಕ ಜಾರಿಗೆ ತರಲು ಮುಂದಾಗಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಶೆಟ್ಟಿ ಆರೋಪಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...

ಮೆಡಿಕಲ್ ಕಾಲೇಜು ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿ

ಚಿಕ್ಕಮಗಳೂರು:  ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿರುವ ಮೂಲ ಉದ್ದೇಶ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ. ಬಡ ರೋಗಿಗಳಿಗೆ ಜಿಲ್ಲೆಯಲ್ಲೇ ಉತ್ತಮ ಚಿಕಿತ್ಸೆ ದೊರೆಯುವಂತೆ, ಆಸ್ಪತ್ರೆಯನ್ನು ತಕ್ಷಣ ಪೂರ್ಣ ಪ್ರಮಾಣದಲ್ಲಿ...

Related Articles

ಬಯಲ ಬಂಗಾರದ”ಈರುಳ್ಳಿ” ಬಲು ದೂರ,ದೂರ

ಅಜ್ಜಂಪುರ: ಚಿಕ್ಕಮಗಳೂರು ಜಿಲ್ಲೆಯಲ್ಲಿ “ಬಯಲ ಬಂಗಾರದ ಬೆಳೆ ಬೆಳೆಯುವ ಕಪ್ಪು ಮಣ್ಣು ಅಜ್ಜಂಪುರ ಮತ್ತು ಕಡೂರು...

ರೈತನ ಮನೆ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಮನೆ ಜಖಂ

ಚಿಕ್ಕಮಗಳೂರು:  ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಗಾಳಿಯ ವೇಗ ಹೆಚ್ಚಿರುವುದರಿಂದ ಮರಗಳು ಧರೆಗುರುಳುತ್ತಿವೆ. ಮೂಡಿಗೇರೆಯ ಕೋಳೂರು...

ಆಸ್ತಿ- ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂಪತ್ತು

ಚಿಕ್ಕಮಗಳೂರು:  ಆಸ್ತಿ ಮತ್ತು ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂ ಪತ್ತು. ಈ ಆರೋಗ್ಯಯುತ ಬದುಕು...

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯದಿಂದಲೇ 12 ಸಾವಿರ ಕೋಟಿ ರೂ. ವೆಚ್ಚ

ಚಿಕ್ಕಮಗಳೂರು:  ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ೫,೩೦೦ ಕೋಟಿ ರೂ. ಘೋಷಿಸಿದ್ದ ಕೇಂದ್ರ ಸರ್ಕಾರ ಇದುವರೆಗೆ...