ತರೀಕೆರೆ: ಹಿರಿಯ ಪತ್ರಕರ್ತರು ಕನ್ನಡ ಪ್ರಭ ಬಿಡಿವರದಿಗಾರರು,ಅಂಚೆ ವಾರ್ತೆ ಪತ್ರಿಕೆ ಸಹ ಸಂಪಾದಕರಾದ ಅನಂತ್ ನಾಡಿಗ್ ರವರಿಗೆ ಪ್ರತಿಷ್ಠಿತ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವೈಟ್ ಅಂಡ್ ವೈಟ್ ಶುಭ್ರ ಬಟ್ಟೆ ಧರಿಸುವ ನಾಡಿಗ್ ಶರ್ಟ್ ನ ಕೊನೆಯ ಗುಂಡಿ ಹಾಕಿದ್ದನ್ನು ಯಾರು ನೋಡಿಲ್ಲ.
ಪತ್ರಿಕಾ ವೃತ್ತಿಗೆ ಘನತೆ ತಂದವರು ಹಲವಾರು ಪ್ರಶ್ನೆ ಕೇಳಿದರು ಯಾರಿಗೂ ನೋವಾಗ ಬಾರದು ಎಂಬ ಸೂಕ್ಷ್ಮ ಸ್ವಭಾವದವರು.ಅಪ್ಪಿ ತಪ್ಪಿಯೂ ಮೈಮೇಲೆ ಎಳೆದು ಕೊಂಡು ಬರೆದವರಲ್ಲ.
ಎಲ್ಲರೊಂದಿಗೆ ಬೆರೆಯುವ ಮಾತನಾಡುವಾಗ ಹೇ ಮಗು,ಹುಡುಗ ಎನ್ನುತ್ತಾ ಹಿರಿಯರಿಗೆ ಯಜಮಾನರು ಎಂದು ಕರೆಯುತ್ತಾರೆ. ಇಂತಹ ಸೂಕ್ಷ್ಮ ಮನಸ್ಸಿನ ಅನಂತ್ ನಾಡಿಗ್ ರವರಿಗೆ ಪ್ರಶಸ್ತಿ ಬಂದಿರುವುದು ತಡವಾದರೂ “ಮಾಗಿದ ಮೇಲೆ ಪ್ರಶಸ್ತಿ ಬಂದಿದೆ ಎಂದು ಭಾವಿಸಿ ಶುಭ ಹಾರೈಸೋಣ.
Media Academy Award for cleanliness
Leave a comment