Home namma chikmagalur ಮೂವರು ಅಂತರ್ ಜಿಲ್ಲಾ ದನ ಕಳ್ಳರ ಬಂಧನ
namma chikmagalurchikamagalurCrime NewsHomeLatest News

ಮೂವರು ಅಂತರ್ ಜಿಲ್ಲಾ ದನ ಕಳ್ಳರ ಬಂಧನ

Share
Share

ಮೂಡಿಗೆರೆ: ಬಣಕಲ್ ಪೊಲೀಸ್ ಠಾಣೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಮೂವರು ಅಂತರ್ ಜಿಲ್ಲಾ ದನ ಕಳ್ಳರನ್ನು ಬಂಧಿಸಿದ್ದಾರೆ.

ಯೂನಿಸ್ ಕಾರ್ಕಳ, ನಾಸಿರ್ ಮೂಡುಬಿದಿರೆ ಹಾಗೂ ಇಕ್ಬಾಲ್ ಮೂಡುಬಿದಿರೆ ಬಂಧಿತ ಆರೋಪಿಗಳು.

ಆರೋಪಿಗಳು ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ದನಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧೆಡೆ ನೆಲೆಸಿದ್ದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದ್ದು, ಕಳ್ಳತನಕ್ಕೆ ಬಳಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ವಿರುದ್ಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 56/2025 ಮತ್ತು 72/2025 ಅಡಿಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 303ರಂತೆ ಪ್ರಕರಣ ದಾಖಲಾಗಿದೆ.

ಬಣಕಲ್ ಪೊಲೀಸ್ ಠಾಣೆಯ ಪಿಎಸ್ಐ ರೇಣುಕಾ ಅವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು  ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Three inter-district cash thieves arrested
Share

Leave a comment

Leave a Reply

Your email address will not be published. Required fields are marked *

Don't Miss

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು. ಶೃಂಗೇರಿ ತಾಲೂಕಿನ ಬುಕ್ಕಡಿಬೈಲು ಗ್ರಾಮದ ನಿವಾಸಿಯಾಗಿರುವ ಬಿ.ಜಿ. ಕೃಷ್ಣಮೂರ್ತಿ ವಿರುದ್ಧ ಕರ್ನಾಟಕದಲ್ಲಿ ಒಟ್ಟು 54...

ವಾಹನಗಳ ಮಿರರ್ ತಗುಲಿ-ಕತ್ತಿ-ಬಂದೂಕು ಝಳಪಿಸಿದ ಗಲಾಟೆ

ಚಿಕ್ಕಮಗಳೂರು: ವಾಹನಗಳ ಮಿರರ್ ಪರಸ್ಪರ ತಗುಲಿದ ಸಣ್ಣ ವಿಚಾರ ಕತ್ತಿ-ಬಂದೂಕು ಝಳಪಿಸುವ ಹಂತಕ್ಕೆ ತಲುಪಿರುವ ಆರೋಪವೊಂದು ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಸರವಳ್ಳಿ ಗ್ರಾಮದಲ್ಲಿ ಜುಲೈ 2...

Related Articles

ಮಹಿಳೆ ಗಮನ ಬೇರೆಡೆ ಸೆಳೆದು ₹ 3.90 ಲಕ್ಷ ವಂಚನೆ

ಕಡೂರು: ಕಳೆದ ಜೂನ್‌ನಲ್ಲಿ ಗಮನ ಬೇರೆಡೆಗೆ ಸೆಳೆದು ಗ್ರಾಹಕರೋರ್ವರ ಖಾತೆಯಿಂದ ₹3.90 ಲಕ್ಷಡ್ರಾ ಮಾಡಿರುವ ಪ್ರಕರಣ...

ಶಿವಮೊಗ್ಗ-ಶೃಂಗೇರಿ ಮಾರ್ಗ ಪರಿಗಣಿಸಿ

ಚಿಕ್ಕಮಗಳೂರು: ನೂತನ ರೈಲ್ವೆ ಯೋಜನೆಗೆ ಅಂತಿಮ ಸ್ಥಳ ನಿರ್ಧಾರ ಸಮೀಕ್ಷೆ ಮಾಡುವ ವೇಳೆ ಶಿವಮೊಗ್ಗ, ಭದ್ರಾವತಿ,...

ಕವಿಕಲ್ ಮಠದ ರಸ್ತೆಯಲ್ಲಿ ಹುಲಿ ದಿಢೀರನೆ ಪ್ರತ್ಯಕ್ಷ

ಚಿಕ್ಕಮಗಳೂರು: ಕಾಫಿನಾಡಿನ ಹಸಿರು ಕಾಡುಗಳ ನಡುವೆ ಸಂಚರಿಸುತ್ತಿದ್ದ ಪ್ರವಾಸಿಗರಿಗೆ ಮರೆಯಲಾಗದ ಅನುಭವವೊಂದು ಎದುರಾಗಿದೆ. ಚಿಕ್ಕಮಗಳೂರು ತಾಲೂಕಿನ...

ಭದ್ರಾ ಜಲಾಶಯದ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಸೂಚನೆ

ಚಿಕ್ಕಮಗಳೂರು: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು,...