ಚಿಕ್ಕಮಗಳೂರು: ಭಾರತ ಸರ್ಕಾರದಿಂದ ಆಯೋಜಿಸಲ್ಪಟ್ಟಿರುವ ೪ಜಿ ಸ್ಯಾಚುರೇ ಶನ್ ಸೈಟ್ ಅತ್ಯಂತ ಯಶಸ್ವಿ ಯೋಜನೆಯಾಗಿದ್ದು ಪ್ರತಿಹಳ್ಳಿಗೂ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ದೊರೆ ಯಲಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ತಾಲ್ಲೂಕಿನ ತಾಲ್ಲೂಕಿನ ಕಡವಂತಿ ಗ್ರಾಮ ಪಂಚಾಯಿತಿಯ ಬೊಗಸೆ ಗ್ರಾಮದಲ್ಲಿ ೪ಜಿ ಟವರನ್ನು ಪ್ರಧಾನಿ ನರೇಂದ್ರ ಮೋದಿಯವರು ವೀಡೀಯೋ ಕರೆ ಮೂಲಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವ ಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು, ಜನರಿಗೆ ಬ್ಯಾಂಕಿಂಗ್ ವ್ಯವಹಾರ, ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್, ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಅವಶ್ಯಕತೆವಾದ ಮಾಹಿತಿಗಳು ದೊರೆಯವ ಮೂಲಕ ಪ್ರಧಾನಿಯವರ ಡಿಜಿಟಲ್ ಇಂಡಿಯಾ ಕನಸು ನನಸಾಗುತ್ತಿದೆ ಎಂದರು.
ಮಂಗಳೂರು ಜಿಲ್ಲೆಯಲ್ಲಿ ಈಗಾಗಲೇ ೨೪ ೪ಜಿ ಟವರುಗಳು ಕಾರ್ಯ ಪ್ರಾರಂಭಿಸಿದ್ದು, ಉಳಿದ ೪ ಕಾಮಗಾರಿಗಳು ಪ್ರಾರಂಭವಾಗಿದ್ದು ಇದಲ್ಲದೆ ನಮ್ಮ ಜಿಲ್ಲೆಯಲ್ಲಿ ೧೨೫ ಸ್ಥಳಗಳನ್ನು ಗುರುತಿಸಿ ೪ ಜಿ ಟವರ್ ಗಳನ್ನು ಮಂಜೂರು ಮಾಡುವಂತೆ ದೂರಸಂಪರ್ಕ ಮಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಲಿಂಗರಾಜ್ ಮಾತನಾಡಿ ಬೊಗಸೆ ಗ್ರಾಮದ ಟವರ್ ತರಲು ಹೋರಾಡಿದ ಡಿ ಎನ್ ಜೀವರಾಜ್, ವಿನೋದ್ ಹಾಗೂ ಗ್ರಾಮಸ್ಥರ ಹೋರಾಟವನ್ನು ನೆನಪಿಸಿಕೊಟ್ಟರು,
ಜೆಡಿಎಸ್ ನ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ ಸಂಸದರ ಕಾರ್ಯವನ್ನು ಶ್ಲಾಘಿಸಿ ಮುಂದಿನ ದಿನಗಳಲ್ಲಿ ನೆಟ್ವರ್ಕ್ ಇಲ್ಲದ ಸ್ಥಳಗಳಲ್ಲಿ ನೆಟ್ವರ್ಕ್‌ಅನ್ನು ಹಾಕಿಸಿ ಎಲ್ಲರಿಗೂ ನೆಟ್ವರ್ಕ್ ಸೌಲಭ್ಯವ ನ್ನು ದೊರಕಿಸಿಕೊಡಲಿ ಎಂದರು.
ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಶಾಸಕ ಡಿ.ಎನ್.ಜೀವರಾಜ್, ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯ ವಿನೋದ್‌ಬೊಗಸೆ, ಎಡಿಸಿ ನಾರಾಯಣ ಕನಕರಡ್ಡಿ, ಜಿ.ಪಂ. ಸಿಇಓ ಕೀರ್ತನಾ, ಪೊಲೀಸ್ ವರಿಷ್ಟಾಧಿಕಾರಿ ವಿಕ್ರಮ್ ಅಮಟೆ, ಬಿಜೆಪಿ ಮುಖಂಡ ದೀಪಕ್‌ದೊಡ್ಡಯ್ಯ, ಮುಖಂಡರುಗಳಾದ ಶಶಿ ಆಲೂರು ಹಾಗೂ ಬೊಗಸೆ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
4G Saturation Site is a very successful project
Leave a comment