ಚಿಕ್ಕಮಗಳೂರು: ದಲಿತ ಸಂಘರ್ಷ ಸಮಿತಿ ಮತ್ತು ಪದಾಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ವಕೀಲ ಅನಿಲ್‌ಕುಮಾರ್ ಕ್ಷಮೆಯಾಚಿಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಲ್ಲಂಪುರ ಓಂಕಾರಮೂರ್ತಿ ಮೇಲಿನ ಹಲ್ಲೆ ಪ್ರಕರಣವನ್ನು ಮುಚ್ಚಿಹಾಕುವ ಹಿನ್ನಲೆ ದಲಿತ ಸಂಘಟನೆ ಮತ್ತು ಪದಾಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಇದನ್ನು ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದರು.
ಹಲ್ಲೆ ಪ್ರಕರಣ ಸಂಬಂಧ ಬಿ ರಿಪೋರ್ಟ್ ಆಗಿದೆ. ಕಾನೂನು ವ್ಯವಸ್ಥೆಯಲ್ಲಿ ಪ್ರಕರಣ ಮುಕ್ತಾಯವಾಗಿಲ್ಲ, ದೂರು ಕೊಟ್ಟಿರುವುದು ಓಂಕಾರಮೂರ್ತಿ, ಪ್ರಕರಣ ದಾಖಲು ಮಾಡಿರುವುದು ಪೊಲೀಸ್ ಇಲಾಖೆ, ನೊಂದವರ ಬೆಂಬಲಕ್ಕೆ ನಿಂತಿರುವುದು ಸಂಘಟನೆಯವರು ಸಂಘಟನೆಗಳ ವಿರುದ್ಧ ಮಾತನಾಡಿರುವ ಅವರ ನಡವಳಿಕೆ ನೋಡಿದರೆ ತಪ್ಪಿತಸ್ಥನಾಗಿರಬಹುದು ಎಂಬ ಅನುಮಾನ ಮೂಡುತ್ತದೆ ಎಂದು ಟೀಕಿಸಿದರು.
ದಲಿತ ಸಂಘರ್ಷ ಸಮಿತಿ ಕೆಲವು ಮುಖಂಡರನ್ನು ಉದ್ದೇಶಿಸಿ ಗಡಿಪಾರು ಮಾಡುವಂತೆ ಜಿಲ್ಲಾಡಳಿತಕ್ಕೆ ಗಡುವು ನೀಡಿದ್ದು, ನಮ್ಮ ಮೇಲೆ ಯಾವ ಗುರುತರವಾದ ಪ್ರಕರಣವಿದೆ ಎಂದು ಗಡಿಪಾರು ಮಾಡಬೇಕು ಎಂದು ಪ್ರಶ್ನಿಸಿದ ಅವರು, ಓಂಕಾರಮೂರ್ತಿ ಪ್ರಕರಣ ದಿಕ್ಕುತಪ್ಪಿಸಲು ಆರೋಪ ಮಾಡುತ್ತಿದ್ದಾರೆ ಎಂದ ಅವರು, ದಲಿತ ಸಂಘಟನೆಗಳ ಬಗ್ಗೆ ಜವಾಬ್ದಾರಿಯಿಂದ ಮಾತನಾಡಬೇಕು. ಅವರು ಆಡಿರುವ ಮಾತುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ದಲಿತ ಮುಖಂಡರಾದ ರುದ್ರಸ್ವಾಮಿ, ಕೆ.ಟಿ.ರಾಧಾಕೃಷ್ಣ, ಬಿ.ಬಿ.ನಿಂಗಯ್ಯ ಅವರ ಕ್ಷಮೆ ಕೇಳಬೇಕು. ಒಂದು ವೇಳೆ ಕೇಳದಿದ್ದಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಕೃಷ್ಣಮೂರ್ತಿ, ಮರ್ಲೆ ಅಣ್ಣಯ್ಯ, ಸಂತ್ರಸ್ಥ ಓಂಕಾರಮೂರ್ತಿ, ಪತ್ನಿ ಧನಲಕ್ಷ್ಮೀ, ರಘು, ಸಂತೋಷ್, ಮಂಜಯ್ಯ, ಇಂದಿರಮ್ಮ ಇದ್ದರು.
Dasamsa office bearers should apologize for insults
Leave a comment