ಚಿಕ್ಕಮಗಳೂರು: ನಗರದ ಮಾರುತಿ ಮಲ್ಟಿ ಜಿಮ್‌ನ ಬೆಳ್ಳಿ ಹಬ್ಬ ಆಚರಣೆ ಅಂಗವಾಗಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ನ.೨ ರಂದು ಭಾನುವಾರ ಬೆಳಗ್ಗೆ ೧೧ ಗಂಟೆಗೆ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಜಿಮ್‌ನ ಕಾರ್ಯದರ್ಶಿ ಪ್ರಸಾದ್ ಅಮೀನ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾರುತಿ ಮಲ್ಟಿ ಜಿಮ್ ಸ್ಥಾಪನೆಯಾಗಿ ೨೫ ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಿಮ್‌ನಲ್ಲಿ ತರಬೇತಿ ಪಡೆದ ಹಳೇಯ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲು ನಿರ್ಧರಿಸಲಾಗಿದೆ ಎಂದರು.
ಅಂದು ಸಂಜೆ ನಡೆಯಲಿರುವ ಈ ಸ್ಪರ್ಧೆಯಲ್ಲಿ ಮಿಸ್ಟರ್ ಕರ್ನಾಟಕ, ಮಿಸ್ಟರ್ ಚಿಕ್ಕಮಗಳೂರು ಎಂಬ ಎರಡು ವಿಭಾಗದಲ್ಲಿ ನಡೆಸಲಿದ್ದು, ಜೊತೆಗೆ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ನಡೆಸಲಿದ್ದು, ಬೆಂಗಳೂರಿನಿಂದ ಬಾಡಿ ಬಿಲ್ಡರ್‍ಸ್ ಉತ್ತಮ್ ಕರ್ನಾಟಕ ಮತ್ತು ಫಿಟ್ನೆಸ್ ಅಸೋಸಿಯೇಷನ್ ಅವರು ತೀರ್ಪುಗಾರರಾಗಿ ಭಾಗವಹಿಸಿ, ದೃಢೀಕರಣ ಪತ್ರವನ್ನು ವಿತರಿಸಲಿದ್ದಾರೆ ಎಂದು ಹೇಳಿದರು.
ಸ್ಪರ್ಧೆಯ ವಿಜೇತರಿಗೆ ಮಾರುತಿ ಮಲ್ಟಿ ಜಿಮ್ ವತಿಯಿಂದ ಮಿಸ್ಟರ್ ಕರ್ನಾಟಕ ವಿಭಾಗದಲ್ಲಿ ಪ್ರಥಮ ೩೦ ಸಾವಿರ ರೂ, ದ್ವಿತೀಯ ೧೫ ಸಾವಿರ ರೂ, ತೃತೀಯ ೧೫ ಸಾವಿರ ರೂಗಳು ಹಾಗೂ ಮಿಸ್ಟರ್ ಚಿಕ್ಕಮಗಳೂರು ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ ೧೫ ಸಾವಿರ ರೂ, ದ್ವಿತೀಯ ೧೦ ಸಾವಿರ ರೂ ಮತ್ತು ತೃತೀಯ ೧೦ ಸಾವಿರ ರೂ, ಪ್ಲೇಸ್ ವಿನ್ನರ್‍ಸ್‌ಗೆ ಕ್ರಮವಾಗಿ ೫ ಸಾವಿರ, ೪ ಸಾವಿರ, ೨ ಸಾವಿರ ರೂಗಳನ್ನು ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಮಿಸ್ಟರ್ ಕರ್ನಾಟಕ ವಿಭಾಗಕ್ಕೆ ೧ ಸಾವಿರ ರೂ ಹಾಗೂ ಮಿಸ್ಟರ್ ಚಿಕ್ಕಮಗಳೂರು ವಿಭಾಗಕ್ಕೆ ೭೫೦ ರೂ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಮ್‌ನ ಅಧ್ಯಕ್ಷ ಮಾನಸ ಸಂದೀಪ್, ಉಪಾಧ್ಯಕ್ಷ ಜಮ್‌ಶಿದ್‌ಖಾನ್, ಸದಸ್ಯರುಗಳಾದ ಇಕ್ಬಾಲ್ ಅಹಮದ್, ಸಂತೋಷ್, ವಿವೇಕ್ ಇದ್ದರು.
State-level bodybuilding competition on November 2nd
Leave a comment