ಚಿಕ್ಕಮಗಳೂರು: ಅಜ್ಜಂಪುರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ತಿಮ್ಮಣ್ಣ ಎಂಬುವರ ಮನೆ ಬಳಿ ಇಟ್ಟಿದ್ದ ಬೋನಿನಲ್ಲಿ ಚಿರತೆಯೊಂದು ಸೆರೆಯಾಗಿದೆ.
ನಾರಣಾಪುರದಲ್ಲಿ ಮೇಲಿಂದ ಮೇಲೆ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಚಿರತೆಯನ್ನು ಸೆರೆಹಿಡಿಯುವಂತೆ ಸಾರ್ವಜನಿಕರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದರು. ೩ ದಿನಗಳಿಂದ ಬೋನಿಟ್ಟಿದ್ದು, ಕಳೆದ ರಾತ್ರಿ ಬೋನಿಗೆ ಚಿರತೆ ಬಿದ್ದಿದೆ.
ಬೋನಿಗೆ ಬಿದ್ದಿದ್ದ ಚಿರತೆಯನ್ನು ಕಾಡಿಗೆ ಬಿಡಲು ಅಧಿಕಾರಿಗಳು ತೆರಳಿದ್ದು,ಬೋನಿನ ಬಾಗಿಲು ತೆಗೆದು ಚಿರತೆ ನೋಡುತ್ತಾನಿಂತಿದ್ದಾಗ ಭಯ-ಆಕ್ರೋಶದಲ್ಲಿದ್ದ ಚಿರತೆ ದಾಳಿಗೆ ಯತ್ನಿಸಿದ್ದು ತಕ್ಷಣ ಬಾಗಿಲು ಹಾಕಿದ ಸಿಬ್ಬಂದಿಗಳು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಹೆಚ್ಚು-ಕಮ್ಮಿಯಾದರೂ ಚಿರತೆ ದಾಳಿ ನಡೆಸುವ ಸಾಧ್ಯತೆಯಿದ್ದು, ಚಿರತೆಯನ್ನು ಕಾಡಿಗೆ ಬಿಡುವಾಗ ಅಧಿಕಾರಿ ಮತ್ತು ಸಿಬ್ಬಂದಿಗಳು ಮೈಯೆಲ್ಲಾ ಕಣ್ಣಾಗಿಸಿಕೊಂಡು ಎಚ್ಚರವಹಿಸಬೇಕಾಗಿದೆ. ಎಚ್ಚರ ತಪ್ಪಿದರೆ ದಾಳಿಗೆ ಒಳಗಾಗಬೇಕಾಗುತ್ತದೆ.
Leopard trapped in Ajjampura
Leave a comment