ಚಿಕ್ಕಮಗಳೂರು: ವ್ಯಕ್ತಿಯೊಬ್ಬರು ಅನುಮಾನಾಸ್ಪದ ಲಿಂಕ್ ಆಪ್‌ಫೈಲನ್ನು ಕ್ಲಿಕ್ ಮಾಡಿ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡ ಪರಿಣಾಮವಾಗಿ ಸೈಬರ್ ಖದೀಮರು ರಿಮೋಟ್ ಆಕ್ಸ್‌ಸ್ ಪಡೆದು ಅವರ ಬ್ಯಾಂಕ್ ಖಾತೆಗಳಿಂದ ೧೦,೬೫,೮೯೯ ರೂ ಹಣವನ್ನು ಲಪಟಾಯಿಸಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಮಹಿಳೆಯೋರ್ವರು ೨ ಬ್ಯಾಂಕ್ ಖಾತೆಗಳ ಬ್ಯಾಲೆನ್ಸ್‌ನ್ನು ಚೆಕ್ ಮಾಡಿದಾಗ ಎರಡೂ ಖಾತೆಗಳಲ್ಲಿಯೂ ಗಮನಕ್ಕೆ ಬಾರದ ರೀತಿಯಲ್ಲಿ ಹಣ ಕಡಿತಗೊಂಡಿರುವುದು ಕಂಡುಬಂದಿರುತ್ತದೆ.
ಈ ವಿಷಯವಾಗಿ ಸಂಬಂಧಪಟ್ಟ ಬ್ಯಾಂಕ್‌ನಲ್ಲಿ ವಿಚಾರಿಸಿದ್ದು ಪೇಟಿಯಂ ಆಪ್ ಮುಖಾಂತರ ಯಾವುದೋ ಮೊಬೈಲ್ ಗೇಮಿಂಗ್ ಆಪ್‌ಗಳಿಗೆ ಹಣ ಕಟಾವು ಆಗಿರುವ ಬಗ್ಗೆ ಬ್ಯಾಂಕ್ ನವರು ಮಾಹಿತಿ ನೀಡಿರುತ್ತಾರೆ.
ಆದರೆ ಪೇಟಿಯಂ ಆಪ್‌ಯಾಗಲಿ ಅಥವಾ ಯಾವುದೇ ಗೇಮ್ ಆಪ್‌ಆಗಲಿ ಮಹಿಳೆಯು ತನ್ನ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿರುವುದಿಲ್ಲ ಆದರೆ ಸೈಬರ್ ವಂಚಕರು ಮಹಿಳೆಯ ಮೊಬೈಲ್ ಗೆ ಆಪ್‌ಫೈಲನ್ನು ಕಳುಹಿಸಿ ಆಕ್ಸ್‌ಸ್ ಮೊಬೈಲ್‌ನ ಸಂಪೂರ್ಣ ಪಡೆದುಕೊಂಡು ಪೆಟಿಎಂ ಆಪ್‌ನ್ನು ಮಹಿಳೆಯ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿ ೨ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಜೂನ್ ೨೪ ರಿಂದ ಆಗಸ್ಟ್ ೧೦ರವರೆಗೆ ಒಟ್ಟು ೧೦,೬೫,೮೯೯ ರೂ.ಗಳನ್ನು ಸೈಬರ್ ವಂಚಕರು ಬೇರೆ ಬೇರೆ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿ ಮಹಿಳೆಗೆ ವಂಚನೆ ಮಾಡಿರುತ್ತಾರೆ.
ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ ೧೫ ರಂದು ನಗರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.ಆದ್ದರಿಂದ ಮೊಬೈಲ್‌ಗಳಿಗೆ ಬರುವಂತಹ ಯಾವುದೇ ರೀತಿಯ ಅಪರಿಚಿತ, ಅನುಮಾನಾಸ್ಪದ ಆಪ್‌ಫೈಲ್‌ಗಳನ್ನು ಸೂಕ್ತ ಪರಿಶೀಲನೆಗೆ ಒಳಪಡಿಸದೇ ಇನ್‌ಸ್ಟಾಲ್ ಮಾಡಿಕೊಳ್ಳಬಾರದಾಗಿ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವತಿಯಿಂದ ವಿನಂತಿಸಲಾಗಿದೆ.ಸಾರ್ವಜನಿಕರು ಸೈಬರ್ ವಂಚನೆಗೆ ಒಳಗಾಗಿದ್ದಲ್ಲಿ ಕೂಡಲೇ ತಡಮಾಡದೇ ಅಗತ್ಯ ಮಾಹಿತಿಯೊಂದಿಗೆ ಟೋಲ್ ಫ್ರೀ ಸಂಖ್ಯೆ ೧೯೩೦ಕ್ಕೆ ಕರೆಮಾಡಿ ದೂರು ದಾಖಲಿಸುವಂತೆ ತಿಳಿಸಲಾಗಿದೆ.
Officials embezzled Rs 10 lakh online
Leave a comment