ಚಿಕ್ಕಮಗಳೂರು: ಭಾರತ ಕಮ್ಯುನಿಷ್ಟ ಪಾರ್ಟಿ ಸ್ಥಾಪನೆಯಾಗಿ ೧೦೦ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆ.೭ ಮತ್ತು ೮ ರಂದು ನಗರದಲ್ಲಿ ೧೪ ನೇ ಜಿಲ್ಲಾ ಸಮ್ಮೇಳನ ಮತ್ತು ಬಹಿರಂಗ ಅವೇಶನ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಸುಂದರೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆ.೭ ರಂದು ಬೆಳಗ್ಗೆ ೧೧ ಕ್ಕೆ ಭಾರತ ಕಮ್ಯುನಿಷ್ಟ್ ಪಕ್ಷದ ಕಚೇರಿಯಿಂದ ಆಜಾದ್‌ಪಾರ್ಕ್‌ವರೆಗೆ ಮೆರವಣಿಗೆ ನಡೆಸಿ ನಂತರ ಬಹಿರಂಗ ಸಭೆ ನಡೆಯುವುದು. ಬಹಿರಂಗ ಅಧಿವೇಶನದಲ್ಲಿ ಮುಖ್ಯ ಭಾಷಣಕಾರರಾಗಿ ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ, ರಾಜ್ಯ ಕಾರ್ಯದರ್ಶಿ ಸಾತಿಸುಂದರೇಶ್, ಸಿಪಿಐ ರಾಜ್ಯ ಮುಖಂಡ ಪಿ.ವಿ.ಲೋಕೇಶ್ ಹಾಗೂ ಜಿಲ್ಲಾ ಮುಖಂಡರು ಮಾತನಾಡಲಿದ್ದಾರೆ ಎಂದು ಹೇಳಿದರು.
ಆ.೮ ರಂದು ನಗದ ಅಂಬೇಡ್ಕರ್ ಭವನದಲ್ಲಿ ಪ್ರತಿನಿಧಿ ಸಮಾವೇಶ ನಡೆಯಲಿದೆ, ಚಿಕ್ಕಮಗಳೂರಿನಲ್ಲಿ ಸುಮಾರು ೮೦ ರ ದಶಕದಲ್ಲಿ ಆರಂಭವಾದ ಸಿಪಿಐ ಪಕ್ಷ ತೋಟಕಾರ್ಮಿಕರ ಹಕ್ಕುಗಳು, ನಿರುದ್ಯೋಗಿ ಯುವಕರ ಉದ್ಯೋಗ ಸಮಸ್ಯೆ, ವಿದ್ಯಾರ್ಥಿ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತರು ಒಟ್ಟಾರೆ ಶೋಷಿತರ ಏಳಿಗೆಗಾಗಿ ಹೋರಾಟ ರೂಪಿಸುತ್ತಾ ಬಂದಿದೆ ಎಂದರು.
ಜಿಲ್ಲೆಯ ಹಲವು ಕಡೆ ಹೋರಾಟದ ಮೂಲಕ ನಿವೇಶನ ಕೊಡಿಸಲಾಗಿದೆ.ವಿಧಾನ ಸಭೆ ಲೋಕಸಭೆ ಚುನಾವಣೆಯಲ್ಲಿ ಸಿಪಿಐ ಪಕ್ಷದ ಅಭ್ಯರ್ಥಿ ಸ್ವತಂತ್ರವಾಗಿ ಸ್ಪರ್ಧಿಸಿ ೧ ಲಕ್ಷಕ್ಕೂ ಅಕ ಮತಗಳನ್ನು ಪಡೆದಿದ್ದಾರೆ. ವಿಧಾನ ಸಭೆ ಚುನಾವಣೆಯಲ್ಲಿ ಕೇವಲ ೬೦೦ ಮತಗಳ ಅಂತರದಲ್ಲಿ ಸೋತಿದ್ದಾರೆ ಎಂದು ವಿವರಿಸಿದರು.
ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಪಕ್ಷದ ಪ್ರತಿನಿಧಿಗಳನ್ನು ಆಯ್ಕೆಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಇಂದಿನ ಹಣಬಲ, ಜಾತಿ ಚುನಾವಣಾ ವ್ಯವಸ್ಥೆಯಿಂದ ಚುನಾವಣಾ ಗೆಲುವಿನ ಮತ ಪಡೆಯುವಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಿರುವುದು ನಿಜ. ಆದರೆ, ನೈತಿಕ ಹೊರಾಟದಲ್ಲಿ ಜಿಲ್ಲೆಯ ರಾಜಕೀಯ ವ್ಯವಸ್ಥೆಯನ್ನು ಪ್ರತಿನಿಧಿಸಬಲ್ಲ ಶಕ್ತಿಯಾಗಿರುವುದು ಹೆಮ್ಮೆಯಾಗಿದೆ ಎಂದು ರಾಧಸುಂದರೇಶ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ತಾಲೂಕು ಅಧ್ಯಕ್ಷ ಕೆರಮಕ್ಕಿರಮೇಶ್, ವಸಂತಕುಮಾರ್ ಉಪಸ್ಥಿತರಿದ್ದರು.
CPI convention-open session on August 7-8
Leave a comment