ಚಿಕ್ಕಮಗಳೂರು: ಡಾ|| ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ನಗರದ ಆಜಾ ದ್ ಪಾರ್ಕ್ ವೃತ್ತದಲ್ಲಿ ದಿವಂಗತ ಡಾ|| ಪುನೀತ್‌ರಾಜ್‌ಕುಮಾರ್ ನೂತನ ಪ್ರತಿಮೆಯನ್ನು ಭಾನುವಾರ ಸ್ಥಾ ಪಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಐ.ಕೆ.ಓಂಕಾರೇಗೌಡ ಸುಮಾರು ೫.೬ ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು. ಮುಂದಿನ ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಆಜಾದ್ ವೃತ್ತದಲ್ಲಿ ದೊ ಡ್ಡಮಟ್ಟಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸೆಪ್ಟೆಂಬರ್ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಅಶ್ವಿನಿ ಪುನೀ ತ್‌ರಾಜ್‌ಕುಮಾರ್ ಸೇರಿದಂತೆ ಅನೇಕ ಸಿನಿತಾರೆಯನ್ನು ನೇತೃತ್ವದಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸ ಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಸುಜಾತ ಶಿವಕುಮಾರ್, ರೂಪಕುಮಾರ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಸಂಘದ ಗೌರ ವಾಧ್ಯಕ್ಷ ಎಲ್.ವಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಜಿ. ಬಸವರಾಜ್, ಉಪಾಧ್ಯಕ್ಷರಾದ ನೆಟ್ಟೆಕೆರೆ ಹಳ್ಳಿ ಜಯಣ್ಣ, ರೇವನಾಥ್, ಗುರುಮೂ ರ್ತಿ, ಕಾರ್ಯದರ್ಶಿಗಳಾದ ಕರ್ಕಿಪೇಟೆ ಕುಮಾರ್, ಮಹೇಶ್, ಆನಂದ್, ಓಂಕಾರಮೂರ್ತಿ ಮತ್ತಿತರರು ಹಾಜರಿದ್ದರು.
Actor Dr. Puneeth Rajkumar statue installed at Azad Park Circle
Leave a comment