ಚಿಕ್ಕಮಗಳೂರು: ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾ ಮಿ ಸನ್ನಿಧಾನಕ್ಕೆ ತೆರಳಲು ವಿಜಯನಗರ ಜಿಲ್ಲೆಯ ೬೦ಕ್ಕೂ ಹೆಚ್ಚು ಮಂದಿ ಸೈಕಲ್‌ನೊಂದಿಗೆ ಆಗಮಿಸಿದ ಯುವಕರ ತಂಡವು ಶನಿವಾರ ಮುಂಜಾನೆ ನಗರಕ್ಕಾಗಮಿಸಿ ಕೆಲಹೊತ್ತು ದಣಿವು ಆರಿಸಿಕೊಂಡು ಪುಣ್ಯ ಕ್ಷೇ ತ್ರದತ್ತ ಸಾಗಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಿಂದ ಸೈಕಲ್‌ನೊಂದಿಗೆ ಹೊರಟ ತಂಡವು ಮೊದಲ ದಿನ ಹರಿಹರ, ಮರುದಿನ ಸಖರಾಯಪಟ್ಟಣ ಗ್ರಾಮದಲ್ಲಿ ತಂಗಿದರು. ಆ ಗ್ರಾಮದ ನಿವಾಸಿಗಳು ಭಕ್ತಾಧಿ ಗಳಿಗೆ ಉಳಿದುಕೊಳ್ಳಲು ಜಾಗ ಹಾಗೂ ಊಟೋಪಾಚಾರದ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದು ಒಟ್ಟಾರೆ ೭೦೦ಕ್ಕೂ ಹೆಚ್ಚು ಕಿ.ಮೀ. ಸೈಕಲ್‌ನಲ್ಲಿಯೇ ಸಂಚರಿಸಲಾಗುವುದು ಎಂದು ಹೇಳಿದರು.
ಶ್ರೀ ಮಂಜುನಾಥಸ್ವಾಮಿ ಸನ್ನಿಧಾನಕ್ಕೆ ತೆರಳಿರುವ ಯುವಕರ ತಂಡವು ಇಂದು ಬೆಳಿಗ್ಗೆ ನಗರಕ್ಕಾಗಮಿ ಸಿದ್ದು ಸಂಜೆ ಹೊತ್ತಿಗೆ ಧರ್ಮಸ್ಥಳಕ್ಕೆ ತೆರಳುವುದಾಗಿ ತಿಳಿಸಿದ ಅವರು ದರ್ಶನ ಭಾಗ್ಯ ಪೂರೈಸಿಕೊಂಡು ತಿರುಗಿ ವಾಪಸ್ ಸೈಕಲ್ ಮೂಲಕವೇ ಸ್ವಗ್ರಾಮಕ್ಕೆ ತೆರಳಲಿದ್ದು ಒಟ್ಟು ಆರೇಳು ದಿನಗಳ ಸಂಚರಿಸುತ್ತೇವೆ ಎಂದು ಮಾಹಿತಿ ನೀಡಿದರು.
ಪ್ರತಿವರ್ಷವು ಶ್ರಾವಣ ಮಾಸದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಸೈಕಲ್‌ನಲ್ಲಿ ಧರ್ಮಸ್ಥಳಕ್ಕೆ ತೆರಳ ಲಾಗುತ್ತದೆ. ಈ ತಂಡದಲ್ಲಿ ಸುಮಾರು ೨೦ ವರ್ಷಗಳಿಂದ ತೆರಳುವ ಭಕ್ತಾಧಿಗಳಿದ್ದು, ಅವರೊಟ್ಟಿಗೆ ಪ್ರತಿ ವರ್ಷವು ಯುವಕರ ಗುಂಪು ಶ್ರೀ ಮಂಜುನಾಥನ ದರ್ಶನಕ್ಕೆ ತೆರಳುತ್ತಿದ್ದೇವೆ ಎಂದು ತಿಳಿಸಿದರು.
ಧರ್ಮಸ್ಥಳಕ್ಕೆ ಸಂಪೂರ್ಣವಾಗಿ ಸೈಕಲ್‌ನಲ್ಲೇ ತೆರಳುವ ಕಾರಣ ಸೈಕಲ್‌ಗೆ ಸಣ್ಣಪುಟ್ಟ ದುರಸ್ಥಿಗಳು ಎದುರಾಗುವ ಕಾರಣ ಟೂಲ್‌ಕಿಟ್ ಹಾಗೂ ಪಂಪ್‌ಗಳನ್ನು ಇರಿಸಲಾಗಿದೆ. ಶ್ರೀ ಮಂಜುನಾಥನ ದರ್ಶನದ ನಂತರ ಹೊರಟು ಬೀರೂರು ಮತ್ತು ಹರಪನಹಳ್ಳಿ ಗ್ರಾಮದಲ್ಲಿ ವ್ಯಾಸ್ತವ್ಯ ಹೂಡಿ ಮರುದಿನ ಸ್ವಗ್ರಾಮ ದತ್ತ ತೆರಳಲಾಗುವುದು ಎಂದು ಹೇಳಿದರು.
ಶ್ರೀ ಮಂಜುನಾಥಸ್ವಾಮಿಯ ಶಕ್ತಿ, ಆರ್ಶೀವಾದ ಯುವಕರ ಮೇಲಿರುವತನಕ ಪ್ರತಿವರ್ಷವು ಸೈಕಲ್ ನಲ್ಲಿಯೇ ತೆರಳುತ್ತೇವೆ ಎಂದರು. ಈ ಸಂದರ್ಭದಲ್ಲಿ ಯುವಕರಾದ ಗುಂಡೂರು ರಾಜಶೇಖರ್, ಜಿ.ದರ್ಶ ನ್, ಹುಲುಗಪ್ಪ, ಮನೋಜ್, ಹರಿವಸ, ಮಂಜು, ಲೋಹಿತ್, ರಾಜ, ಸುದೀಪ್, ಮಂಜುನಾಥ್ ಸೇರಿದಂತೆ ಹಲವಾರಿದ್ದರು.
A group of youths arrived in the city to travel to Dharmasthala by bicycle.
Leave a comment