ಚಿಕ್ಕಮಗಳೂರು: ನಾಡು ನುಡಿ ವಿಚಾರದಲ್ಲಿ ಅನ್ಯಾಯವಾದಾಗ ಹೋರಾಟ ರೂಪಿಸುವ ಜೊತೆಗೆ ಸಾರ್ವಜನಿಕರ ಕುಂದುಕೊರತೆ ಮತ್ತು ಕಾನೂನು ಅರಿವು ಮೂಡಿಸುವ ಕಾರ್ಯದಲ್ಲಿ ಸಂಘಟನೆ ನಿರತವಾಗಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಹೇಳಿದರು.
ನಗರದ ಇಂದಿರಾಗಾಂಧಿ ಬಡಾವಣೆಯಲ್ಲಿ ಕನ್ನಡಸೇನೆ ವತಿಯಿಂದ ಹಮ್ಮಿಕೊಂಡಿದ್ಧ ಸಾರ್ವಜನಿಕರ ಕುಂದುಕೊರತೆ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಬಡಾವಣೆಗಳಲ್ಲಿ ನಿವಾಸಿಗಳು ಮೂಲಸೌಕರ್ಯದ ಸಮಸ್ಯೆ ಬಗ್ಗೆ ಮುಕ್ತವಾಗಿ ಹಂಚಿಕೊಂಡಲ್ಲಿ ಜನಪ್ರ ತಿನಿಧಿಗಳು, ನಗರಸಭಾ ಆಡಳಿತದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾ ಗಲು ಸಾಧ್ಯವಾಗಲಿದೆ ಎಂದು ಹೇಳಿದರು.
ಪ್ರಸ್ತುತ ವಾರ್ಡಿನಲ್ಲಿ ನಿವಾಸಿಗಳ ಹೇಳಿಕೆ ಪ್ರಕಾರ ದೇವಾಲಯ, ಸಮುದಾಯ ಭವನ ನಿರ್ಮಾಣ, ಗುಣಮಟ್ಟದ ರಸ್ತೆ, ಚರಂಡಿ ಹಾಗೂ ನೀರಿನ ಸೌಲಭ್ಯದ ಅವಶ್ಯಕತೆಯಿದೆ. ಈ ಎಲ್ಲಾ ಸಮಸ್ಯೆಗಳಿಗೆ ಕನ್ನಡ ಸೇನೆ ಬೆನ್ನುಲುಬಾಗಿ ನಿಲ್ಲುವ ಮೂಲಕ ಸೌಕರ್ಯಕ್ಕೆ ಪೂರೈಸಲು ಹೋರಾಟ ನಡೆಸಲಿದೆ ಎಂದರು.
ಸಂಘಟನೆ ಕೇವಲ ಹೋರಾಟ, ಪ್ರತಿಭಟನೆಗೆ ಸೀಮಿತವಾಗದೇ ಸಮಾಜದ ನಾಗರೀಕರಿಗೆ ನೆರವಾಗು ವ ಕಾರ್ಯದಲ್ಲಿ ಸದಾಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ನಗರದ ಪ್ರತಿ ವಾರ್ಡಿಗಳಲ್ಲೂ ಕುಂದುಕೊರತೆ ಸಭೆ ನಡೆಸುವ ಮೂಲಕ ನಿವಾಸಿಗಳ ಅಹವಾಲನ್ನು ಸ್ವೀಕರಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾ ಡುತ್ತೇವೆ ಎಂದು ತಿಳಿಸಿದರು.
ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ರಾಜೇಶ್ ಮಾತನಾಡಿ ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಎಲ್ಲರಿಗೂ ಕಾನೂನಿನ ಅರಿವು ಅಗತ್ಯ. ದೈನಂದಿನ ವ್ಯವಹಾರದಲ್ಲಿ ಕಾನೂನಿನ ಚೌಕಟ್ಟಿ ನಲ್ಲಿ ವ್ಯವಹಾರ ನಡೆಸುವ ಮೂಲಕ ಮೋಸ, ವಂಚನೆಗಳಿಂದ ಮುಕ್ತ ಪಡೆಯಲು ಕಾಯ್ದೆಗಳ ಅರಿವು ಪಡೆ ದಿರಬೇಕು ಎಂದರು.
ಕಾನೂನು ವ್ಯವಸ್ಥೆ ಸಮತಟ್ಟಾಗಿ ಕಾಪಾಡಲು ಸಾರ್ವಜನಿಕರ ಸಹಕಾರವು ಅತಿಮುಖ್ಯ. ಬಡಾವಣೆಗ ಳಲ್ಲಿ ಅನೈತಿಕ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸರಿಗೆ ತಿಳಿಸಿದರೆ, ಮಾಹಿತಿ ನೀಡುವವರ ಹೆಸರನ್ನು ಗುಪ್ತವಾಗಿರಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಸಂಘದ ಅಧ್ಯಕ್ಷ ಜಯಪ್ರಕಾಶ್, ವಕ್ತಾರ ಹುಣಸೇಮಕ್ಕಿ ಲ ಕ್ಷ್ಮಣ್, ಮುಖಂಡರುಗಳಾದ ಸತೀಶ್, ಶಂಕರೇಗೌಡ, ರವಿ, ರಮೇಶ್, ಚೈತ್ರ, ನಿವಾಸಿಗಳಾದ ಕುಮಾರ್, ಮಾದೇವು, ವೆಂಕಟೇಶ್, ರಾಮು ಮತ್ತಿತರರು ಉಪಸ್ಥಿತರಿದ್ದರು.
Always ready to try to solve the problems of the settlements
Leave a comment