ಚಿಕ್ಕಮಗಳೂರು: ಮಲ್ಲೇಗೌಡ ಜನರಲ್ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಕೋರಾನಾ ರೀತಿಯ ಕೀಟಗಳು ತಿಂದು ತೇಗುತ್ತಿದ್ದವು ಇದರ ಕ್ಯಾಪ್ಟನ್ ಜಿಲ್ಲಾ ಶಸ್ತ್ರ ಚಿಕಿತ್ಸಾಕ ಡಾ.ಮೋಹನ್ ಕುಮಾರ್ ಕಷ್ಟಪಟ್ಟು ಮಧುಗಿರಿಗೆ ವರ್ಗಾವಣೆಯಾಗಿದ್ದಾನೆ.
ಈತನಿಗೆ ಹೆಗಲಿಗೆ ಹೆಗಲು ಕೊಡುತ್ತಿದ್ದ ಹತ್ತಾರು ವರ್ಷಗಳಿಂದ ಇಲ್ಲಿ ಎಲ್ಲಾ ನಾನೇ ಎನ್ನುತ್ತಿದ್ದ ನೂರ್ ಮಹಮದ್ ಬೆಂಗಳೂರಿಗೆ ವರ್ಗಾವಣೆ ಆಗಿದ್ದಾನೆ.
ಮೋಹನ್ ಕುಮಾರ್ ಕಳೆದ ಆರು ವರ್ಷಗಳಿಂದ ಜಿಲ್ಲಾ ಶಸ್ತ್ರಚಿಕಿತ್ಸಕನಾಗಿದ್ದು ಬೆಣ್ಣೆಯಂತಹ ಮಾತು ಮುಟ್ಟಿದ್ದಕ್ಕೆಲ್ಲಾ ರೊಕ್ಕ,ರೊಕ್ಕ ಎನ್ನುತ್ತಾ ತಿಂದು ತೇಗಿದ್ದರ ಬಗ್ಗೆ ಹಲವು ಸಲ ಬರೆಯಲಾಗಿತ್ತು ಈತ ಬಹಳ ಕಷ್ಟಪಟ್ಟು ಮಧುಗಿರಿಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.
ಈತ ಇನ್ನೂ ಹಲವು ವರ್ಷ ಇಲ್ಲೇ ಇರಬೇಕು ಎಂದು ಶಾಸಕರುಗಳಾದ ರಾಜೇಗೌಡ ಮತ್ತು ತಮ್ಮಯ್ಯಗೆ ಡೈ ಹೊಡೆದು ಹಾರ ಹಾಕಿ ಬರುತ್ತಿದ್ದ ಆದರೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ತೆಗೆದು ಕೊಂಡ ಬಿಗಿ ನಿಲುವು ಮತ್ತು ಅನ್ ಲೈನ್ ವರ್ಗಾವಣೆ ಯಿಂದ ಹಲವು ವರ್ಷಗಳಿಂದ ಗೂಟ ಹೊಡೆದುಕೊಂಡು ತಿನ್ನಬಾರಾದ ಕಡೆ ತಿನ್ನುತ್ತಿದ್ದವರು ಅನಿವಾರ್ಯವಾಗಿ ಗಂಟು ಮೂಟೆ ಕಟ್ಟುತ್ತಿದ್ದಾರೆ.
ಮೋಹನ್ ಕುಮಾರ್ ಎಂತವರು ಮೆಚ್ಚಬೇಕು ಅಷ್ಟು ನಾಟಕ ಮಾಡುತ್ತುದ್ದ ನೌಟಂಕಿ ಆಸ್ಪತ್ರೆ ಅಭಿವೃದ್ಧಿ ನೆಪದಲ್ಲಿ ಮಾಡಬಾರದಷ್ಟು ರೊಕ್ಕ ಮಾಡಿಕೊಂಡಿದ್ದು ಈ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತರು ಯಾವ ಮಾಹಿತಿ ಕೊಟ್ಟಿಲ್ಲ ಉತ್ತರ ಇಲ್ಲವೇ ಇಲ್ಲ ಕೆಲವರ ಕೈಕಾಲು ಹಿಡಿದರೆ ಕೆಲವರಿಗೆ ವ್ಯವಸ್ಥೆ ಮಾಡಿರುವುದನ್ನು ಅವರ ಇಲಾಖೆಯವರು ಹೇಳುತ್ತಾರೆ.ಆದರೆ ಪಾಪದ ನೌಕರರ ಮೇಲೆ ಈತನ ಪೌರುಷ ಹೇಳ ತೀರದು.
ಮೋಹನ್ ಕುಮಾರ್ ಗಳಸ್ಯ ಕಂಟಸ್ಯನಾಗಿದ್ದಾತ ಕಛೇರಿ ಅಧೀಕ್ಷಕ ನೂರ್ ಮಹಮದ್ ಹೆಸರು ಮಾತ್ರ ನೂರು ಕೈಗೆ ಮಾತ್ರ ಸಾವಿರ,ಲಕ್ಷ ಇಟ್ಟರೆ ಕೆಲಸ .ಈತನೇ ಮೋಹನ್ ಕುಮಾರ್ ನ ಕೈ,ಕಾಲು,ಬಾಲ,ಬಾಯಿ,ಕಿವಿಯಾಗಿ ಐಡಿಯಾ ಕೊಡುತ್ತಿದ್ದವನು ಹತ್ತಾರು ವರ್ಷಗಳಿಂದ ಆಸ್ಪತ್ರೆಯಲ್ಲಿ ಇಂಚು,ಇಂಚು ತಿಳಿದು ತಿನ್ನಬಾರದ ಕಡೆ ತಿಂದು ಮೈಸೂರು, ಬೆಂಗಳೂರು, ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದಲ್ಲದೆ ಬೇನಾಮಿಯಾಗಿ ಒತ್ತುವರಿ ಮಾಡಲು ಹೋಗಿ ಹೆಂಡತಿಯಿಂದ ಮುಖಕ್ಕೆ ಉಗಿಸಿಕೊಂಡವನು ಅನಿವಾರ್ಯವಾಗಿ ಬೆಂಗಳೂರಿಗೆ ವರ್ಗಾವಣೆ ಆಗಿದ್ದಾನೆ.ಲೋಕಯುಕ್ತದವರು ಇವನ ಬೆನ್ನು ಹತ್ತಿದರೆ ಬ್ರಹ್ಮಾಂಡ ಭ್ರಷ್ಟಾಚಾರ ಹೊರ ತೆಗೆಯಬಹುದು.
ಇನ್ನೂ ಪಟ್ಟೆ ಜಿರಲೆಯಂತ ಡಾ.ನಾಗೇಶ್ ಭದ್ರವತಿಗೆ ಮತ್ತು ಆರತಿ ನಾಗೇಶ್ ಶಿವಮೊಗ್ಗ ಮಕ್ಕಳ ತಜ್ಞ ಶ್ರೀನಿವಾಸ್ ಕಡೂರಿಗೆ ವೈದ್ಯ ಲೋಹಿತ್ ಮೂಡಿಗೆರೆಗೆ ವರ್ಗಾವಣೆಯಾಗಿದ್ದಾರೆ. ಆರೋಗ್ಯ ಇಲಾಖೆ ಸ್ವಚ್ಛ ಗೊಳಿಸಲು ಬಿಗಿಯಾದ ಕ್ರಮ ತೆಗೆದುಕೊಂಡು ಕಾನುನಿನಂತೆ ಕಟ್ಟುನಿಟ್ಟಾಗಿ ವರ್ಗಾವಣೆ ನೀತಿಯನ್ನು ಜಾರಿಗೊಳಿಸಿದ ಹರ್ಷಗುಪ್ತರ ದಕ್ಷತೆಗೊಂದು ಸಲಾಂ ಹೇಳಲೆ ಬೇಕು.
Mallegowda General Hospital’s Corona pests kick out!
Leave a comment