ಚಿಕ್ಕಮಗಳೂರು: ಇಲ್ಲಿನ ರೋಟರಿ ಕ್ಲಬ್ನಿಂದ ಸ್ವಾರ್ಥಕ್ಕಿಂತ ಸೇವೆ ಮಿಗಿಲು ಎಂಬ ದ್ಯೇಯದೊಂದಿಗೆ ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದೆ ಎಂದು ಕ್ಲಬ್ ಅಧ್ಯಕ್ಷ ಸುಜಿತ್ ಎಂ.ಎಲ್. ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಕ್ಲಬ್ನ ೫ ಸೇವಾ ಮಾರ್ಗಗಳಾದ ಕ್ಲಬ್ ಸೇವೆ, ವೃತ್ತಿಸೇವೆ, ಸಮುದಾಯ ಸೇವೆ, ಅಂತರಾಷ್ಟ್ರೀಯ ಸೇವೆ ಮತ್ತು ಯುವಸೇವೆಗಳ ಮೂಲಕ ಸಮಾಜದ ಏಳಿಗೆಗಾಗಿ ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿರುವುದಾಗಿ ಹೇಳಿದರು.
ವಿದ್ಯಾ ದಾಸೋಹದ ಮೂಲಕ ತಾಲ್ಲೂಕಿನಾದ್ಯಂತ ೨೦೪೦ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ೧೦೨೦೦ ನೋಟ್ ಪುಸ್ತಕಗಳನ್ನು ವಿತರಿಸಲಾಗಿದೆ. ಚಳಿಯಿಂದ ರಕ್ಷಣೆಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಮತ್ತು ಎಸ್ಟೇಟ್ ಕಾರ್ಮಿಕರಿಗೆ ೩೪೦೦೦೦ ರೂಗಳ ವೆಚ್ಚದಲ್ಲಿ ೬೮೬ ಸ್ವೆಟರ್ಗಳನ್ನು ವಿತರಿಸಲಾಗಿದೆ ಎಂದರು.
ಆರೋಗ್ಯ ಜಾಗೃತಿ ಅಭಿಯಾನ, ಶಾಲಾ ಮೂಲ ಸೌಕರ್ಯ, ಪರಿಸರ ಸಂರಕ್ಷಣೆ, ರಸ್ತೆ ಸುರಕ್ಷತೆ, ವಿಶೇಷಚೇತನರೊಂದಿಗೆ ರೋಟರಿ ದಿನ, ತಾಂತ್ರಿಕ ನೆರವು, ಉಚಿತ ಆರೋಗ್ಯ ಸೇವೆ, ಮಕ್ಕಳಿಗಾಗಿ ಉಯ್ಯಾಲೆ, ರೋಟರಿ ಅರ್ಥ್ ಪಾರ್ಕ್, ಸಂವೇದನಾ ಯೂಟ್ಯೂಬ್ ಚಾನಲ್, ಪೌರ ಕಾರ್ಮಿಕರಿಗೆ ಸನ್ಮಾನ, ಯುವಚೇತನ, ಇಂಟರ್ನೆಟ್ ಕ್ಲಬ್ ಉದ್ಘಾಟನೆ, ಜಿಲ್ಲಾಮಟ್ಟದ ಅತಿಥಿ ಕಾರ್ಯಕ್ರಮ, ಸಾಹಿತ್ಯ ಸೇವೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು.
ನಿಧಿ ಸಂಗ್ರಹಕ್ಕೆ ಬೆಂಬಲ, ಆಶಾಕಿರಣ ಅಂಧಮಕ್ಕಳ ಶಾಲೆಗಾಗಿ ವಾಸವಿ ಮಹಿಳಾ ಮಂಡಳಿಯಿಂದ ೩೭ ಸಾವಿರ ರೂಗಳನ್ನು ನೀಡಲಾಗಿದೆ ಎಂದರು. ಮುಂದಿನ ಅಧ್ಯಕ್ಷರಾಗಿ ಲಿಖಿತ್ ಎನ್.ಪಿ ಅವರು ೦೩-೦೭-೨೦೨೫ ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಲಿಖಿತ್ ಎನ್.ಪಿ, ಹರ್ಷಿತ್ ವಸಿಷ್ಠ, ಎಂ.ಎಸ್. ಸುಧೀರ್, ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.
Rotary Club does many social work
Leave a comment