ಚಿಕ್ಕಮಗಳೂರು: – ನಗರದಲ್ಲಿ ನಡೆದ ಸಿಪಿಐ ತಾಲೂಕು ಸಮ್ಮೇಳನದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಯಿತು ಎಂದು ಎರಡನೇ ಬಾರಿಗೆ ಆಯ್ಕೆಯಾಗಿರುವ ಸಿಪಿಐ ತಾಲೂಕು ಕಾರ್ಯದರ್ಶಿ ಕೆರಮಕ್ಕಿ ರಮೇಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವ ಬಗ್ಗೆ ನಮ್ಮ ಹೋರಾಟ ಹಿಂದಿನಿಂದಲೂ ನಡೆದುಬಂದಿದ್ದು, ಅದನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ನಗರದಲ್ಲಿ ವಿಫಲವಾಗಿರುವ ಅಮೃತ್ ಯೋಜನೆ ಮತ್ತು ಯಜಿಡಿ ಕಳಪೆಯಾಗಿರುವುದನ್ನು ಸರಿಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿನ ರಸ್ತೆಗುಂಡಿ ಮುಚ್ಚಬೇಕು. ನಗರಾದ್ಯಂತ ವಾಹನ ನಿಲುಗಡೆ ಅಸ್ತವ್ಯಸ್ತವಾಗಿದ್ದು, ಈ ಬಗ್ಗೆ ನಗರಸಭೆ ಸೂಕ್ತ ಕ್ರಮವಹಿಸಬೇಕು ಎಂದು ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಸಧ್ಯದಲ್ಲೇ ಹೋರಾಟವನ್ನು ರೂಪಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಕ್ಷದ ತಾಲೂಕು ಸಮಿತಿ ರಚಿಸಿದ್ದು, ತಾಲೂಕು ಕಾರ್ಯದರ್ಶಿಯಾಗಿ ರಮೇಶ್ ಆದ ನಾನೇ ಮುಂದುವರಿದಿದ್ದೇನೆ. ಸಹಕಾರ್ಯದರ್ಶಿಗಳಾಗಿ ಹೆಡದಾಳ್‌ಕುಮಾರ್, ಸಿ.ಸಿ.ಮಂಜೇಗೌಡ, ಖಜಾಂಚಿಯಾಗಿ ತಂಪಿತಗೌಡ ಆಯ್ಕೆಯಾಗಿದ್ದಾರೆ. ೧೩ ಮಂದಿ ತಾಲೂಕು ಸಮಿತಿ ಸದಸ್ಯರು ೯ ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು ಎಂದು ಹೇಳಿದರು.
ಕಾರ್ಯಕಾರಿ ಸಮಿತಿಗೆ ಜಿ.ರಮೇಶ್, ಜೆರ್ಮಿಲೋಬೋ, ಜಯಾನಂದ, ಎಸ್.ರವಿ, ಶಿವಾನಂದ, ತಾರಾನಾಥ್, ತಾಲೂಕು ಸಮಿತಿ ಸದಸ್ಯರಾಗಿ ರಾಜು, ಲಕ್ಷ್ಮಿ, ಸಂಜೀವ, ಸತೀಶ, ಅಪ್ಪು, ಹರೀಶ್, ಕೊರಗಪ್ಪ, ವೀರಾಚಾರ್, ವಿಜಯ್‌ಕುಮಾರ್, ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜೆರ್ಮಿಲೋಬೋ, ರಮೇಶ್ ಇದ್ದರು.
CPI contest in upcoming taluk-zilla panchayat elections
Leave a comment