ಚಿಕ್ಕಮಗಳೂರು : ಸಖರಾಯಪಟ್ಟಣ ಹೋಬಳಿಯ ಜೋಡಿ ಹೋಚಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಿಲ್ಲೆಯ ಕೆಎಎಸ್ ಐಎಎಸ್ ಅಧಿಕಾರಿಗಳೇ ಬೆಚ್ಚಿಬೀಳಿಸುವ ರೀತಿಯ ಪ್ರಕರಣ ಒಂದಕ್ಕೆ ನಾಂದಿ ಹಾಡಿದ್ದಾರೆ. ತನ್ನ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಮುಂದಾದ ಪಂಚಾಯ್ತಿ ಸದಸ್ಯರಿಗೆ ತಿರುಮಂತ್ರ ಹೂಡಲು ಮಾಸ್ಟರ್ ಪ್ಲಾನ್ ಮಾಡಿದ ಈ ತ್ರಿಮೂರ್ತಿ ಜಿಲ್ಲಾ ಪಂಚಾಯ್ತಿ ಸಿಇಓ ತರೀಕೆರೆ ಎ.ಸಿ ಕಡೂರು ತಾಲ್ಲೂಕು ಪಂಚಾಯ್ತಿ ಇಓ ಸೇರಿದಂತೆ ಗ್ರಾಮ ಪಂಚಾಯ್ತಿ ಪಿಡಿಓ ನನ್ನು ಕೋರ್ಟ್ ಗೆ ಎಳೆದಿದ್ದಾರೆ.
ವರ್ಷದ ಹಿಂದೆ ಜೋಡಿ ಹೋಚಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷನಾಗಿ ಆಯ್ಕೆಯಾದ ಈ ತ್ರಿಮೂರ್ತಿ ಆರಂಭದಲ್ಲಿ ಎಲ್ಲಾ ಸದಸ್ಯರ ಜೊತೆ ಉತ್ತಮ ಹೊಂದಾಣಿಕೆ ಮಾಡಿಕೊಂಡಿದ್ದರು, ಕ್ರಮೇಣ ಸಂಬಂಧಗಳು ಹಳಸಿದ್ದರಿಂದ ಅಧ್ಯಕ್ಷರ ಮೇಲೆ ಅವಿಶ್ವಾಸ ತರಲು ಸದಸ್ಯರು ಮುಂದಾಗುತ್ತಾರೆ, ಈ ಬಗ್ಗೆ ಮಾಹಿತಿ ಪಡೆದುಕೊಂಡ ತ್ರಿಮೂರ್ತಿ ಅವಿಶ್ವಾಸಕ್ಕೆ ಸೆಡ್ಡು ಹೊಡೆಯಲು ಹೈಕೋರ್ಟ್ ಮೆಟ್ಟಿಲೇರಿ ಕೇವಿಯಟ್ ತರುವ ಮೂಲಕ ಎಲ್ಲ ಅಧಿಕಾರಿಗಳನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದ್ದಾರೆ.
ಹತ್ತು ಜನ ಸದಸ್ಯರಲ್ಲಿ ಎಂಟು ಮಂದಿ ಅವಿಶ್ವಾಸಕ್ಕೆ ಸಹಿ ಹಾಕಿ ತ್ರಿಮೂರ್ತಿಯನ್ನು ಇಳಿಸಲು ಯತ್ನಿಸಿದ್ದರು, ಇದೀಗ ತಮ್ಮ ಅಧಿಕಾರ ಉಳಿಸಿಕೊಳ್ಳಲು ವಿಕೇಂದ್ರಿಕರಣ ವ್ಯವಸ್ಥೆಯ ಬಲ ಬಳಸಿ ಜೋಡಿ ಹೋಚಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು ಇದನ್ನು ತನ್ನ ತಲೆಗೆ ಕಟ್ಟಲು ಅವಿಶ್ವಾಸ ಮಂಡನೆ ಮಾಡುತ್ತಿದ್ದಾರೆ ಎಂದು ಕೋರ್ಟ್ ನಿಂದ ಕೇವಿಯಟ್ ಪಡೆದಿರುವ ತ್ರಿಮೂರ್ತಿ ವಿರೋಧಿಗಳಿಗೆ ಸಖತ್ ಟಾಂಗ್ ಕೊಟ್ಟಿದ್ದಾರೆ. ಸದ್ಯ ತರೀಕೆರೆ ಎ.ಸಿ ಗೆ ಅವಿಶ್ವಾಸ ಮಂಡನೆ ಮಾಡದಂತೆ ಆದೇಶವಿದ್ದು ಮಿನಿಮಂ ಆರು ತಿಂಗಳು ಬೀಸೊ ದೊಣ್ಣೆಯಿಂದ ತ್ರಿಮೂರ್ತಿ ತಪ್ಪಿಸಿಕೊಂಡಂತಾಗಿದೆ. ಈ ನಡುವೆ ಗ್ರಾಮ ಪಂಚಾಯ್ತಿ ಪಿಡಿಓ ಮಂಜುನಾಥ್ ನನ್ನು ಜಿಲ್ಲಾ ಪಂಚಾಯ್ತಿ ಸಿಇಓ ಎಚ್ ಎಸ್ ಕೀರ್ತನಾ ಅಮಾನತು ಮಾಡಿದ್ದಾರೆ.
ಇಷ್ಟೆಲ್ಲಾ ವಿಷಯಗಳ ಹಿಂದೆ ಇರುವ ಮಾಸ್ಟರ್ ಮೈಂಡ್ ಶ್ರೀ ಶ್ರೀ ಶ್ರೀ ಎಸ್ ಎಲ್ ಭೋಜೇಗೌಡ ಎಂಬುದು ತಿಳಿದವರ ಅಂಬೋಣ……..
Leave a comment