ಚಿಕ್ಕಮಗಳೂರು : ತರೀಕೆರೆ ಪಟ್ಟಣದ ಜನರಿಗೆ ಶ್ರೀ ರೇವಣ ಸಿದ್ದೇಶ್ವರ ಸಹಕಾರ ಸಂಘಕ್ಕೆ ನಿರ್ದೇಶಕರಾಗಬೇಕು. ಮತ್ತು ಪುರಸಭೆಗೆ ಒಮ್ಮೆಯಾದರೂ ಸದಸ್ಯನಾಗಿ ಮಾಜಿ ಎಂಬ ಬೋರ್ಡ್ ಇದ್ದರೆ ಸಾಕು ಎಂಬ ಮಹದಾಸೆ ಬಹುತೇಕರದ್ದು ಇಂತಹ ಆಸೆ ಈಗ ಶಾಸಕ ಶ್ರೀನಿವಾಸ್ ಗೆ ಶುರುವಾಗಿ ಚುನಾವಣೆಯ ಅಖಾಡಕ್ಕೆ ಇಳಿದು ರೇವಣ ಸಿದ್ದೇಶ್ವರ ಸಂಘದ ಹಣಾಹಣೊ ರಂಗೇರುವಂತೆ ಮಾಡಿದ್ದಾರೆ.
ಇದು ಎಂತ ಮೋಹ ಎಂತಹ ದಾಹ ವೋ ಅಥವಾ ಅಧಿಕಾರದ ಅಮಲು ಎಂಬುದು ಗೊತ್ತಾಗುತ್ತಿಲ್ಲ, ತರೀಕೆರೆ ರೇವಣ ಸಿದ್ದೇಶ್ವರ ಸಹಕಾರ ಸಂಘದ ಚುನಾವಣೆ ಬಂದರೆ ಒಂದು ರೀತಿಯ ಶಾಸಕರ ಚುನಾವಣೆಯಷ್ಟೇ ರಂಗು ಪಡೆಯುತ್ತದೆ, ಈ ಸಂಘ ಬಹುತೇಕ ಸಹಕಾರಿ ಧಿರೀಣರುಗಳ ಗರಡಿಮನೆ ಎಂದರೆ ತಪ್ಪಾಗಲಾರದು, ಇದೀಗ ಹಾಲಿ ಶಾಸಕ ಜಿ.ಹೆಚ್.ಶ್ರೀನಿವಾಸ್ ಸೊಸೈಟಿ ಚುನಾವಣೆಗೆ ಸ್ಪರ್ಧೆ ಮಾಡಿರುವುದು ಮುಂದೆ ಡಿ.ಸಿ.ಸಿ.ಬ್ಯಾಂಕ್ ಚುಕ್ಕಾಣಿ ಹಿಡಿಯಬೇಕು ಎಂಬ ಆಸೆ ಎಂಬುದರ ಮುನ್ಸೂಚನೆ ರೀತಿ ಗೋಚರಿಸುತ್ತಿದೆ, ತರೀಕೆರೆ ಮಾಜಿ ಶಾಸಕ ಡಿ.ಎಸ್.ಸುರೇಶ್ ಪ್ರಸ್ತುತ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾಗಿದ್ದು ಇದನ್ನು ನೋಡಿ ಶ್ರೀನಿವಾಸ್ ಗೆ ಕಣ್ಣು ಕುಕ್ಕುತ್ತಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ , ಅಧಿಕಾರ ಎಂಬ ಮಾಯೆ ಮುಂದೆ ಎಲ್ಲಾ ಗೌಣ ಎಂಬುದು ಈ ರೇವಣ ಸಿದ್ದೇಶ್ವರ ಸೊಸೈಟಿ ಚುನಾವಣೆಯ ಲಾಡಾಯಿಯಲ್ಲಿ ತಿಳಿಯಬಹುದು, ಆದರೆ ಡಿ.ಸಿ.ಸಿ ಬ್ಯಾಂಕ್ ಕನಸು ಹೊತ್ತಿರುವ ಶಾಸಕರ ಟೀಮ್ ಗೆ ಸೆಡ್ಡು ಹೊಡೆಯಲು ಮಾಜಿ ಶಾಸಕ ರ ಬೆಂಬಲಿಗರೂ ಭರ್ಜರಿ ತಯಾರಿ ನಡೆಸುತ್ತಿದ್ದಾರೆ
Leave a comment