ಚಿಕ್ಕಮಗಳೂರು : ಕಡೂರು ತಹಶಿಲ್ದಾರ್ ಪೂರ್ಣಿಮಾ ಅಮಾನತುಗೊಳಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ರಂಗೇನಹಳ್ಳಿ ಗ್ರಾಮದ ಸರ್ವೇ ನಂಬರ್4 ರಲ್ಲಿ 8 ಎಕರೆ 3 ಗುಂಟೆ ಅರಣ್ಯ ಇಲಾಖೆಯ ಜಮೀನು ಅಕ್ರಮ ಮಂಜೂರು ಮಾಡಿದ್ದು ಈ ಸಂಬಂಧ ಪ್ರಸ್ತುತ ಕಡೂರು ತಸೀಲ್ದಾರ್ ಆಗಿರುವ ಪೂರ್ಣಿಮಾರನ್ನು ಅಮಾನತು ಮಾಡಿ ಸರ್ಕಾರ ಕ್ರಮ ಕೈಗೊಂಡಿದೆ.
ನಿವೃತ್ತ ತಹಶಿಲ್ದಾರ ಆಗಿರುವ ಧರ್ಮೋಜಿರಾವ್ ಕೂಡ ಇದೇ ಸರ್ವೇ ನಂಬರ್ ರಲ್ಲಿ 4 ಎಕರೆ 30 ಗುಂಟೆ ಜಾಗ ಅಕ್ರಮವಾಗಿ ಮಂಜೂರು ಮಾಡಿರುವುದರಿಂದ ಕಾನೂನು ಕ್ರಮ ಕೈಗೊಳ್ಳಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸರ್ಕಾರಕ್ಕೆ ವರದಿ ನೀಡಿದ್ದರು ಇದರ ಆಧಾರದ ಮೇಲೆ ಅಮಾನತು ಆದೇಶ ಹೊರ ಬಿದ್ದಿದೆ.
Leave a comment