ಚಿಕ್ಕಮಗಳೂರು : ನಗರದ ಅಂಬೇಡ್ಕರ್ ಭವನದಲ್ಲಿ ಇಂದು ನಡೆದ ದ್ರಾವಿಡ ಸಂಸ್ಕೃತಿ ಸಮ್ಮಿಲನೋತ್ಸವ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರ ತಮಿಳು ಪ್ರೇಮ ಹಾಸ್ಯ ಮಿಶ್ರಿತ ಏಟು ಎದುರೇಟಿಗೆ ಕಾರಣವಾಯಿತು. ಒಬ್ಬರಿಗಿಂತ ಒಬ್ಬರ ಮಾತಿನ ಧಾಟಿ ತಮಿಳು ಭಾಷಿಕರ ಮನಸೆಳೆಯುವಲ್ಲಿ ಯಾರು ಸಫಲವಾದರು ಎಂಬುದು ಮಾತ್ರ ಕೊನೆಗೂ ತಿಳಿಯಲಿಲ್ಲ,
ಮೊದಲಿಗೆ ಮಾತನಾಡಿದ ಸಿ.ಟಿ ರವಿ ಕನ್ನಡ ತಮಿಳು ಸೋದರತ್ವ ಹೇಳಲು ಹೋಗಿ ಕರುನಾಡನ್ನು ತಂಗಚ್ಚಿ ಎನ್ನುವ ಮೂಲಕ ಚಪ್ಪಾಳೆ ಗಿಟ್ಟಿಸಿದರು. ಇದಕ್ಕೆ ಸಖತ್ ಟಾಂಗ್ ಕೊಟ್ಟ ಶಾಸಕ ಎಚ್ ಡಿ ತಮ್ಮಯ್ಯ ನಾನು ಚಪ್ಪಾಳೆ ಗಿಟ್ಟಿಸಿಕೊಳ್ಳಲು ಮಾತನಾಡಲ್ಲ ಲಾರಿ ಆಫೀಸ್ ನಲ್ಲಿ ತಮಿಳು ಭಾಷೆಯನ್ನು ಚನ್ನಾಗಿ ಕಲಿತಿದ್ದೆ ಎಂಬುದನ್ನು ತಮಿಳಿನಲ್ಲೇ 2 ನಿಮಿಷ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಗಾಯತ್ರಿ ಶಾಂತೇಗೌಡ ಅಂತ ತಮಿಳು ಮಾತನಾಡಿದರೆ ಡಬಲ್ ಮೀನಿಂಗ್ ಆಗುತ್ತೆ ಎನ್ನುವ ಮೂಲಕ ಸಭೆಯನ್ನು ನಗೆ ಕಡಲಲ್ಲಿ ತೇಲುವಂತೆ ಮಾಡಿದರು. ಕೊನೆಗೆ ಕನ್ನಡದಲ್ಲೇ ಮಾತನಾಡಿದರು.
ಆದರೆ ಪಂಚ್ ನೀಡಿದ್ದು ಮಾತ್ರ ಎಂಎಲ್ ಸಿ ಎಸ್ ಎಲ್ ಭೋಜೇಗೌಡ ಎಲ್ಲರೂ ತಮಿಳು ಮಾತನಾಡಿ ಗಮನ ಸೆಳೆಯಲು ಯತ್ನಿಸಿದರೆ ಸಿಂದೂರ ಪೂವೆ ಸಿಂದೂರ ಪೂವೆ ಎಂಬ ಅಣ್ಣಕ್ಕಿಳಿ ಸಿನೆಮಾದ ಶಿವಕುಮಾರ್ ನಟನೆಯ ಹಾಡು ಮತ್ತು ಕಾಮಿಡಿ ಹಾಡೊಂದನ್ನು ಹಾಡುವ ಮೂಲಕ ಆಕರ್ಷಣೆಯನ್ನು ತಮ್ಮತ್ತ ಬರಮಾಡಿಕೊಂಡರು.
Leave a comment