ಚಿಕ್ಕಮಗಳೂರು :
ನಿನ್ನೆ ಸಂಜೆಯಿಂದ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ ಅಕಾಲಿಕವಾಗಿ ಸುರಿದ ವರುಣನ ಆರ್ಭಟಕ್ಕೆ ಜನರು ಹೈರಾಣಾಗಿದ್ದಾರೆ ಏಕಾಏಕಿ ಸುರಿದ ಮಳೆಯಿಂದಾಗಿ ಸಾರ್ವಜನಿಕರು ಸಂಜೆ ವೇಳೆ ಮನೆಗೆ ತೆರಳಲು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು. ಕೆಲವು ಕಡೆ ವಿದ್ಯುತ್ ಸಂಪರ್ಕ ಕೂಡ ಕಟ್ ಆಗಿತ್ತು. ಅಷ್ಟೇ ಅಲ್ಲದೇ ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಮೂಡಿಗೆರೆ ಕಳಸ ತಾಲೂಕು ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ನಿನ್ನೆ ಮಧ್ಯಾಹ್ನದ ನಂತರ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು ಇದರೊಂದಿಗೆ ವರ್ಷಪೂರ್ತಿ ಸುರಿದ ಮಳೆಯಿಂದ ಮಲೆನಾಡಿಗರು ಹೈರಾಣಾಗಿದ್ದಾರೆ.
ಭಾರಿ ಮಳೆಯಿಂದ ಕಾಫಿ ಬೆಳೆಗಾರರಲ್ಲಿ ಆತಂಕ ಮೂಡಿತ್ತು. ಚಿಕ್ಕಮಗಳೂರು, ಕಳಸ. ಕುದುರೆಮುಖ, ಹೊರನಾಡು, ಬಲಿಗೆ ಸುತ್ತಮುತ್ತ ಭಾರೀ ಮಳೆ ಸುರಿದಿದ್ದು ಕಾಫಿ, ಅಡಿಕೆ, ಮೆಣಸು ಮಣ್ಣು ಪಾಲಾಗೋ ಆತಂಕದಲ್ಲಿ ಬೆಳೆಗಾರರು ಇದ್ದಾರೆ. ಹಣ್ಣಾಗಿ ಕೊಯ್ಲಿಗೆ ಬಂದಿರೋ ಕಾಫಿ ಬೆಳೆ ಸಂಪೂರ್ಣ ಉದುರುವ ಸಾಧ್ಯತೆ ಕೂಡಾ ಇದೆ.
ಈ ನಡುವೆ ಮುಂದಿನ ಮೂರು ದಿನಗಳು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲವೆಡೆ ಗುಡುಗು ಮಿಂಚು ಸಿಡಿಲು ಸಹಿತ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ನವೆಂಬರ್17 ರ ವರೆಗೂ ವರುಣ ಇದೇ ರೀತಿ ಅಬ್ಬರಿಸಲಿದ್ದಾನೆ.
Leave a comment