ಚಿಕ್ಕಮಗಳೂರು : ವೇಲಾಯುಧನ್ ಹೆಸರು ಕೇಳಿದರೆ ಇದು ಯಾವ ಅಯುಧ ಎನ್ನಿಸುತ್ತದೆ. ಆದರೆ ವ್ಯಕ್ತಿ ನೋಡಿದರೆ, ಮಾತನಾಡಿಸಿದರೆ ವೇಲು ಅಲ್ವೇ ನಮ್ಮ ವೇಲು ಅಲ್ವೇ ಎನ್ನುವಂತಹ ವ್ಯಕ್ತಿತ್ವ .
ವೇಲಾಯುಧನ್ ದ್ರಾವಿಡ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಮಿಳು ಸಾಹಿತ್ಯ, ಸಂಸ್ಕೃತಿಯನ್ನು ಅರೆದು ಕುಡಿಯುವ ಜೊತೆಗೆ ಜಾಗತಿಕ ವಿಚಾರಗಳ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ.ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕೂಡ ವಿಶೇಷತೆ ಇದೆ.
ತರೀಕೆರೆ ತಾಲ್ಲೂಕಿನ ಸಂತವೇರಿಯವರಾದ ವೇಲಾಯುಧನ್ ಅಕ್ಷರ ಧಾರದ ಲ್ಲಿ ಇಪ್ಟಾ ಕಲಾವಿದರಾಗಿ ದಲಿತ ಚಳುವಳಿಯಲ್ಲಿ, ಶೋಷಿತರ ಪರ ಹೋರಾಟದಲ್ಲಿ ಮುಂಚೂಣಿ ನಾಯಕತ್ವ ವಹಿಸಿದವರು. ರೇಲಾ ರೇಲಾ ರೇಲಾರೆ ಎಂದು ಧ್ವನಿ ಎತ್ತಿದರೆ ಆಕಾಶಕ್ಕೆ ಕೇಳುತ್ತಿತ್ತು .ಅಷ್ಟೊಂದು ಗಟ್ಟಿ ಧ್ವನಿ, ಇಪ್ಟಾ ಕಲಾವಿದರಾಗಿ ನಾಡಿನಾದ್ಯಂತ ಸುತ್ತಾಡಿ ಜಾಗೃತಿ ಮೂಡಿಸುವಂತಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ವೇಲಾಯುಧನ್ ಇಂದು ಬಿಎಸ್ ಪಿ ಪಕ್ಷದ ಮುಂಚಣಿ ನಾಯಕರಾಗಿದ್ದಾರೆ. ಹಿಂದೆ ಬಿಎಸ್ಪಿ ರಾಜ್ಯ ಕಾರ್ಯದರ್ಶಿಯಾಗಿದ್ದ ವೇಲು ಮತ್ತೊಮ್ಮೆ ಕಾರ್ಯದರ್ಶಿಯಾಗಿ ಅಯ್ಕೆಯಾಗಿರುವುದಕ್ಕೆ ಖುಷಿ ಪಟ್ಟವರು ಬಲು ಜನರು ಬಹುಜನರ ಹಿತಕಾಯಲಿ ಎಂದು ಹಾರೈಸೋಣ.
ಜಿಲ್ಲೆಯ ಪ್ರವಾಸಿ ತಾಣಕ್ಕೆ ಹೇಳಿ ಮಾಡಿಸಿದಂತ ಪ್ರದೇಶ ಸಂತವೇರಿ ಕೆಮ್ಮಣ್ಣುಗುಂಡಿ, ಕಲ್ಲತ್ತಿ ಫಾಲ್ಸ್ ನ ಸಮೀಪವಿರುವುದರಿಂದ ವೇಲಾಯುಧನ್ ಸಂತನಂತೆ ಕಂಡರೂ ಶೋಷಿತರ ವಿಚಾರ ಬಂದಾಗ ಅಯುಧ ಹಿಡಿಯುವಂತಾಗುತ್ತಾರೆ. ಹೀಗಾಗಿ ಹಲವರ ಕೆಂಗಣ್ಣಿಗೆ ಗುರಿಯಾಗಿರುವುದು ಉಂಟು.ಹಲವರ ಪ್ರೀತಿ, ವಿಶ್ವಾಸ ಗಳಿಸಿರುವುದು ಉಂಟು.
Leave a comment