ಚಿಕ್ಕಮಗಳೂರು : ರಾಜ್ಯ ಮಟ್ಟದಲ್ಲಿ ಅಬಕಾರಿ ಇಲಾಖೆ ಭ್ರಷ್ಟಾಚಾರದಲ್ಲಿ ಮುಳುಗಿರುವ ವಿಷಯ ಎಲ್ಲೆಡೆ ಮಾರ್ದನಿಸುತ್ತಿದೆ. ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಕೋಟಿ, ಕೋಟಿ ವಸೂಲಿ ಮಾಡುತ್ತಿದ್ದಾರೆ ಎಂದು ಬಾರ್ ಮಾಲೀಕರ ಸಂಘ ಆರೋಪಗಳನ್ನು ಮಾಡುತ್ತಿದೆ. ಇದು ವಿರೋಧ ಪಕ್ಷಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ.
ರಾಜ್ಯ ಮಟ್ಟದಲ್ಲಿ ಈ ಕಥೆಯಾಗಿದ್ರೆ ಜಿಲ್ಲಾ ಮಟ್ಟದಲ್ಲಿ ವಸೂಲಿ ಮಾಡುತ್ತಿರುವ ದಂಧೆಯ ಬಗ್ಗೆ ರೋಚಕ ಕಥೆಗಳು ನೂರಾರು. ಜಿಲ್ಲೆಯ ಚಿಕ್ಕಮಗಳೂರು,ಕಡೂರು ಮತ್ತು ತರೀಕೆರೆ ಕ್ಷೇತ್ರದಲ್ಲಿ ವಸೂಲಿ ನಿರಂತರವಾಗಿ ನಡೆಯುತ್ತಲೇ ಇದೆ ಇದು ನಮಗೆ ಸಾಕಾಗಿ ಹೋಗಿದೆ ಎಂದು ಬಾರ್ ಮಾಲೀಕರು ದೂರುತ್ತಿದ್ದಾರೆ. ಆದರೆ ಲಿಖಿತವಾಗಿ ದೂರು ನೀಡಲು ಹಿಂದೆ, ಮುಂದೆ ಮಾಡುತ್ತಿದ್ದಾರೆ. ಖುದ್ದು ಜನ ಪ್ರತಿನಿಧಿಗಳೇ ಬೇಕಾಬಿಟ್ಟಿ ಬಾರ್ ಗಳನ್ನು ಪ್ರಾರಂಭ ಮಾಡುತ್ತಿರುವುದು ಇತರೆ ವ್ಯಾಪಾರಿಗಳಿಗೆ ನುಂಗಲಾರದ ತುತ್ತಾಗಿದೆ. ಇವರುಗಳಿಗೆ ಮಾತ್ರ ಏಕೆ ಕಾನೂನು ಅನ್ವಯಿಸುವುದಿಲ್ಲ ಇಲಾಖೆ ಲೆಕ್ಕಕ್ಕಿಲ್ಲಾ ಎಂದು ಪ್ರಶ್ನಿಸುತ್ತಿದ್ದಾರೆ.
ಬಾರ್ ಮಾಲೀಕರು ಜನಪ್ರತಿನಿಧಿಗಳಿಗೆ ಮಂತ್ಲಿ ಮಾಮುಲನ್ನು ಸಂದಾಯ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಪ್ರತಿ ತಿಂಗಳಿಗೆ ತಲಾ ಐದು ಸಾವಿರ ವಸೂಲಿ ಮಾಡಿ ತಲುಪಿಸುತ್ತಿರುವುದರ ಬಗ್ಗೆ ದೂರು ನೀಡಲು ತಯಾರಿ ನಡೆಸಿದ್ದಾರೆ.
ಶೃಂಗೇರಿ ಮತ್ತು ಮೂಡಿಗೆರೆ ಕ್ಷೇತ್ರ ಹೊರತುಪಡಿಸಿ ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರು ಕ್ಷೇತ್ರದಲ್ಲಿ ವಸೂಲಿ ಮಾಡುತ್ತಿರುವುದನ್ನು ತನಿಖೆ ಮಾಡಿದರೆ ಖಚಿತ ಬಣ್ಣ ಗೊತ್ತಾಗುತ್ತದೆ. ರಾಜ್ಯ ಮಟ್ಟದಲ್ಲಿ ಒಂದು ಕತೆಯಾದರೆ ಜಿಲ್ಲಾ ಮಟ್ಟದ ಕತೆ ಕೇಳುವವರು ಯಾರು? ಹೀಗಾಗಿಯೇ ಮಧ್ಯ ಮಾರಾಟಗಾರರು ಬೇಕಾಬಿಟ್ಟಿ ಬೆಲೆಗೆ ಎಣ್ಣೆ ಮಾರುತ್ತಿದ್ದಾರಂತೆ ಇದು ಅಬಕಾರಿ ಇಲಾಖೆ ಬದುಕಿದೆಯಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
- ಚಿಕ್ಕಮಗಳೂರು ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ವಸೂಲಿ ಎಂಬುದು ತಿಪ್ಪೆಯಂತಾಗಿದೆ. ಅಬಕಾರಿ ಇಲಾಖೆಯಲ್ಲಿ ಬಾರ್ ಶಾಪ್ ಗಳಿಗೆ ಇಂತಿಷ್ಟು ಬೇಕೆ ಬೇಕು ಎಂದು ಪೈಪೋಟಿಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ನೊಂದ ಮಾಲೀಕರು ಹೇಳುವಂತಿಲ್ಲ, ನುಂಗುವಂತಿಲ್ಲ ಎಂಬ ಇಕ್ಕಟ್ಟಿನಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ. ಶಾಸಕರೊಬ್ಬರು ಹೆಂಡತಿ ಹೆಸರಿನಲ್ಲಿ ಸಿಎಲ್ 7 ಗೆ ಕಾನೂನು ಮೀರಿ ನಡೆಗೆ ಜೈ,ಜೈ ಎನ್ನುತ್ತಿದ್ದು ಆಸ್ಪತ್ರೆ ಪಕ್ಕದ ಲಾಡ್ಜನಲ್ಲಿ ಬಾರ್ ಪ್ರಾರಂಭಿಸಿರುವುದು ಹಾಗೂ ಬಳ್ಳಾವರದಲ್ಲಿ ಮತ್ತೊಂದು ಬಾರ್ ಗೆ ಕಾನೂನು ಮೀರಿ ಅಂಗಡಿ ತೆರೆಯಲು ಒತ್ತಡ ತರುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಜಿಲ್ಲೆಯ ಅಬಕಾರಿ ಇಲಾಖೆ ಭ್ರಷ್ಟಾಚಾರದ ಹರಾಜಿನಲ್ಲಿ ಪೈಪೋಟಿ ನಡೆಸಿದೆ. ಇದರ ಫಲವಾಗಿ ಬಾರ್ ಶಾಪ್ ಗಳಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದು ಸಿದ್ದ ಸರ್ಕಾರ ಹೇಳುವುದು ಒಂದು ಮಾಡುವುದು ಮತ್ತೊಂದು ಎಂಬಂತಾಗಿದೆ
Leave a comment