Home Latest News ನದಿಗಳ ಶುದ್ದೀಕರಣಕ್ಕಾಗಿ 400 km ಪಾದಯಾತ್ರೆ : ಶೃಂಗೇರಿ ಹಿರಿಯ ಶ್ರೀ ಚಾಲನೆ
Latest News

ನದಿಗಳ ಶುದ್ದೀಕರಣಕ್ಕಾಗಿ 400 km ಪಾದಯಾತ್ರೆ : ಶೃಂಗೇರಿ ಹಿರಿಯ ಶ್ರೀ ಚಾಲನೆ

Share
Share

ಚಿಕ್ಕಮಗಳೂರು : ಕರುನಾಡಿನ ಜೀವನದಿಗಳಾದ ತುಂಗಾ-ಭದ್ರಾ ಉಳಿಸಿ ಅಭಿಯಾನ ಆರಂಭಗೊಂಡಿದೆ. ಶೃಂಗೇರಿಯಿಂದ ಆರಂಭಗೊಂಡು 400 ಕಿ.ಮೀ. ಈ ಅಭಿಯಾನ ಸಾಗಲಿದೆ. ಶೃಂಗೇರಿ ತಾಲೂಕಿನಿಂದ ಕಿಷ್ಕಿಂದೆವರೆಗೂ ನದಿ ಉಳಿಸಿ ಅಭಿಯಾನ ನಡೆಯಲಿದೆ. ಅಭಿಯಾನಕ್ಕೆಶೃಂಗೇರಿ ಶ್ರೀಮಠದ ಹಿರಿಯ ಶ್ರೀಗಳಾದ ಭಾರತೀ ತೀರ್ಥ ಶ್ರೀಗಳಿಂದ ಚಾಲನೆ ದೊರೆತಿದ್ದು ಶೃಂಗೇರಿ ತಾಲೂಕಿನ ಗಂಗಡಿ ಕಲ್ಲುವಿನಲ್ಲಿ ಹುಟ್ಟುವ ತುಂಗಾ-ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ಸಂಗಮವಾಗಿ ನಾಡಿನ ಜೀವನದಿಗಳಾಗಿವೆ.‌

ಕೋಟಿಗೂ ಹೆಚ್ಚು ಜನರ ಜೀವನಾಡಿ ಯಾಗಿರುವ ತುಂಗಾಭದ್ರ ನದಿಗಳು ಇತ್ತೀಚಿನ ವರ್ಷಗಳಲ್ಲಿ ಕಲ್ಮಶ ಗೊಂಡಿವೆ ಎಂದು ಹೇಳಲಾಗುತ್ತಿದೆ. ಅಲ್ಲದೇ ತುಂಗಾಭದ್ರಾ ನೀರಿನಲ್ಲಿ ಯತೇಚ್ಛವಾಗಿ ಅಲ್ಯೂಮಿನಿಯಂ ಅಂಶ ಕೂಡಾ ಪತ್ತೆಯಾಗಿತ್ತು ಆದ್ದರಿಂದ ಕುಡಿಯಲು ಯೋಗ್ಯ ಅಲ್ಲದ ಮಟ್ಟಕ್ಕೆ ಬಂದಿರುವ ನದಿ ನೀರು ನಗರ-ಪಟ್ಟಣಗಳ ತ್ಯಾಜ್ಯ ನೀರಿನಿಂದ ಕಲುಷಿತಗೊಳ್ಳುತ್ತಿರೋ ಹಂತ ತಲುಪಿದೆ.

ಇದೇ ಕಾರಣಕ್ಕೆ ನದಿಗಳನ್ನ ಉಳಿಸುವಂತೆ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದಿಂದ ಈ ಆಂದೋಲನ ಆರಂಭಿಸಿದೆ. ಇಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಮೊದಲ ಬಾರಿಗೆ ನದಿಗಳ ಉಳಿವಿಗೆ ದೊಡ್ಡ ಹೋರಾಟ ಶುರುವಾಗಿದೆ

Share

Leave a comment

Leave a Reply

Your email address will not be published. Required fields are marked *

Don't Miss

ದಬ್ಬಾಳಿಕೆಯಿಂದ ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ಯತ್ನ

ಚಿಕ್ಕಮಗಳೂರು: ಬಿಡದಿ ಟೌನ್‌ಶಿಪ್ ಯೋಜನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಬ್ಬಾಳಿಕೆಯ ಮೂಲಕ ಜಾರಿಗೆ ತರಲು ಮುಂದಾಗಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಶೆಟ್ಟಿ ಆರೋಪಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...

ಮೆಡಿಕಲ್ ಕಾಲೇಜು ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿ

ಚಿಕ್ಕಮಗಳೂರು:  ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿರುವ ಮೂಲ ಉದ್ದೇಶ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ. ಬಡ ರೋಗಿಗಳಿಗೆ ಜಿಲ್ಲೆಯಲ್ಲೇ ಉತ್ತಮ ಚಿಕಿತ್ಸೆ ದೊರೆಯುವಂತೆ, ಆಸ್ಪತ್ರೆಯನ್ನು ತಕ್ಷಣ ಪೂರ್ಣ ಪ್ರಮಾಣದಲ್ಲಿ...

Related Articles

ಬಯಲ ಬಂಗಾರದ”ಈರುಳ್ಳಿ” ಬಲು ದೂರ,ದೂರ

ಅಜ್ಜಂಪುರ: ಚಿಕ್ಕಮಗಳೂರು ಜಿಲ್ಲೆಯಲ್ಲಿ “ಬಯಲ ಬಂಗಾರದ ಬೆಳೆ ಬೆಳೆಯುವ ಕಪ್ಪು ಮಣ್ಣು ಅಜ್ಜಂಪುರ ಮತ್ತು ಕಡೂರು...

ರೈತನ ಮನೆ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಮನೆ ಜಖಂ

ಚಿಕ್ಕಮಗಳೂರು:  ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಗಾಳಿಯ ವೇಗ ಹೆಚ್ಚಿರುವುದರಿಂದ ಮರಗಳು ಧರೆಗುರುಳುತ್ತಿವೆ. ಮೂಡಿಗೇರೆಯ ಕೋಳೂರು...

ಆಸ್ತಿ- ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂಪತ್ತು

ಚಿಕ್ಕಮಗಳೂರು:  ಆಸ್ತಿ ಮತ್ತು ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂ ಪತ್ತು. ಈ ಆರೋಗ್ಯಯುತ ಬದುಕು...

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯದಿಂದಲೇ 12 ಸಾವಿರ ಕೋಟಿ ರೂ. ವೆಚ್ಚ

ಚಿಕ್ಕಮಗಳೂರು:  ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ೫,೩೦೦ ಕೋಟಿ ರೂ. ಘೋಷಿಸಿದ್ದ ಕೇಂದ್ರ ಸರ್ಕಾರ ಇದುವರೆಗೆ...