ಚಿಕ್ಕಮಗಳೂರು : ಇತ್ತೀಚಿಗೆ ಚಿಕ್ಕಮಗಳೂರಿನ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾಡಾನೆಗಳು ರಸ್ತೆಯಲ್ಲೇ ಸಂಚಾರ ಮಾಡುವ ಘಟನೆಗಳು ಪದೇ ಪದೇ ಸಂಭವಿಸುತ್ತಿವೆ. ಕಳೆದ ಎರಡು ವರ್ಷಗಳಿಂದ ಚಾರ್ಮಡಿ ಘಾಟ್ ನಲ್ಲಿ ಕಾಡಾನೆ ಹಾವಳಿ ಮಿತಿಮೀರಿದ ಬೆನ್ನಲ್ಲೇ ಇದೀಗ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲೂ ಕಾಡಾನೆ ಹಾವಳಿ ಹೆಚ್ಚಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬುವಂತೆ, ಕಳೆದ ಮೂರು ನಾಲ್ಕು ದಿನಗಳಿಂದ ರಾಷ್ಟ್ರೀಯ ಉದ್ಯಾನವನದ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪ ಒಂಟಿ ಸಲಗ ಒಂದು ರಸ್ತೆಯಲ್ಲಿ ಸಂಚರಿಸುತ್ತಿರುವುದು ವಾಹನ ಸವಾರರಲ್ಲಿ ಭಯ ಉಂಟು ಮಾಡುವಂತೆ ಆಗಿದೆ.
ಶೃಂಗೇರಿಯಿಂದ ಕೆರೆಕಟ್ಟೆ ಬಜಗೋಳಿ ಮಾರ್ಗದಲ್ಲಿ ರಾತ್ರಿ ಸಮಯ ಆಗುತ್ತಿದ್ದಂತೆ ಈ ಕಾಡಾನೆ ಓಡಾಡೋದು ಸಾಮಾನ್ಯವಾಗಿದೆ. ಜೊತೆಗೆ ಇತ್ತೀಚೆಗೆ ಹಗಲು ಹೊತ್ತಲ್ಲೂ ಒಂಟಿ ಸಲಗದ ಓಡಾಟ ಜಾಸ್ತಿಯಾಗಿದ್ದು ಅರಣ್ಯ ಇಲಾಖೆಗೆ ವಾಹನ ಸವಾರರು ಮಾಹಿತಿ ನೀಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಅರಣ್ಯ ಇಲಾಖೆ ತುರ್ತು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Leave a comment