Home Crime News 25 ಲಕ್ಷ ಮೌಲ್ಯದ ಪೈಪ್ ಗಳು ಸುಟ್ಟು ಭಸ್ಮ : ಎಲ್ಲಿ ಏಕೆ ಇಲ್ಲಿದೆ ಡಿಟೇಲ್ಸ್
Crime News

25 ಲಕ್ಷ ಮೌಲ್ಯದ ಪೈಪ್ ಗಳು ಸುಟ್ಟು ಭಸ್ಮ : ಎಲ್ಲಿ ಏಕೆ ಇಲ್ಲಿದೆ ಡಿಟೇಲ್ಸ್

Share
Share

ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಜಲ ಜೀವನ್ ಮಷಿನ್ ಕಾಮಗಾರಿ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಮನೆ ಮನೆಗಳಿಗೆ ನೀರು ಒದಗಿಸಲು ಸಂಗ್ರಹಿಸಿಟ್ಟಿದ್ದ 25 ಲಕ್ಷ ಮೌಲ್ಯದ ನೀರಾವರಿ ಯೋಜನೆ ಪೈಪ್ ಗಳು ಸುಟ್ಟು ಕರಕಲಾಗಿವೆ.

ಸುಮಾರು 25 ಲಕ್ಷ ಮೌಲ್ಯದ ಕುಡಿಯೋ ನೀರಿನ ಯೋಜನೆಗೆಂದು ತಂದು ಹಾಕಿದ್ದ ನೀರಿನ ಪೈಪ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಬರೋಬ್ಬರಿ 25 ಲಕ್ಷ ಮೌಲ್ಯದ ನೀರಿನ ಪೈಪ್ ಗಳು ಸಂಗ್ರಹಿಸಿಟ್ಟಿದ್ದ ಜಾಗದಲ್ಲೇ ಸುಟ್ಟು ಕರಕಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ತ್ರಿಪುರ ಎಂಬ ಗ್ರಾಮದ ಕುಡಿಯೋ ನೀರಿನ ಯೋಜನೆಗೆಂದು ಪ್ರಧಾನ ಮಂತ್ರಿ ಕುಡಿಯುವ ನೀರಿನ ಸಂಪರ್ಕ ಯೋಜನೆಯಡಿ ಪೈಪ್ ಗಳನ್ನ ತಂದು ಹಾಕಿದ್ದರು. ನವೆಂಬರ್ 4ರ ಸೋಮವಾರದಿಂದ ಕೆಲಸ ಕೂಡ ಆರಂಭವಾಗಬೇಕಿತ್ತು. ಆದರೆ ಇಂದು ಕಿಡಿಗೇಡಿಗಳು ಪೈಪ್ ಗಳಿಗೆ ಬೆಂಕಿ ಹಚ್ಚಿದ ಪರಿಣಾಮ 25 ಲಕ್ಷ ಮೌಲ್ಯದ ಪೈಪ್ ಗಳು ಬೆಂಕಿಯಲ್ಲಿ ಬೆಂದು ಹೋಗಿವೆ. ಯೋಜನೆಯ ಗುತ್ತಿಗೆ ಪಡೆದಿದ್ದ ಹರೀಶ್ ಎಂಬ ಗುತ್ತಿಗೆದಾರ ಪೈಪ್ ಗಳನ್ನ ತಂದು ಹಾಕಿದ್ದರು. ಇದೀಗ ಗುತ್ತಿಗೆದಾರ ಕೆಲಸ ಆರಂಭ ಮಾಡಬೇಕು. ಆದರೆ ಲಕ್ಷಾಂತರ ಮೌಲ್ಯದ ಪೈಪ್ ಗಳು ಸುಟ್ಟು ಹೋಗಿದ್ದು ಹರೀಶ್ ಕಣ್ಣೀರಿಟ್ಟಿದ್ದಾರೆ. ಸ್ಥಳಕ್ಕೆ ಬಣಕಲ್‌ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರೇಣುಕಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಚಿಕ್ಕಮಗಳೂರು:  ಜಿಲ್ಲಾ ನ್ಯಾಯಾಲಯಕ್ಕೆ ಬಂದಿರುವ ಬಾಂಬ್ ಬೆದರಿಕೆ ಇ-ಮೇಲ್ ಆತಂಕಕ್ಕೆ ಕಾರಣವಾಗಿದೆ. ಮಧ್ಯಾಹ್ನ 1.30 ರಿಂದ...

ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ

ಚಿಕ್ಕಮಗಳೂರು:  ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಅತ್ತಿಗೆಯನ್ನೇ...

ಗಾಂಜಾ ಸೇವಿಸಿ ರಂಪಾಟ – ಏಳು ಮಂದಿ ಬಂಧನ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮಾದಕ ದ್ರವ್ಯ ಸೇವನೆ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ಚುರುಕುಗೊಳಿಸಿದ್ದು ಸಾರ್ವಜನಿಕ ಸ್ಥಳಗಳಲ್ಲಿ...

ಎಐಟಿ ವೃತ್ತದ ಬಳಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಎಐಟಿ ವೃತ್ತದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಚೇರಿಯಿಂದ ಮೋಟಾರ್ ಸೈಕಲ್‌ನಲ್ಲಿ...