Home ಗಟ್ಟಿ ಗುಂಡಿಗೆಯ ಬೆಳ್ಳಿ : ಪ್ರಕಾಶಮಾನಕ್ಕೆ ಆಳುವರಿಗೆ ಉರಿ ಉರಿ
Home

ಗಟ್ಟಿ ಗುಂಡಿಗೆಯ ಬೆಳ್ಳಿ : ಪ್ರಕಾಶಮಾನಕ್ಕೆ ಆಳುವರಿಗೆ ಉರಿ ಉರಿ

Share
Share

ಚಿಕ್ಕಮಗಳೂರು : ಸಹಕಾರ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಅಲ್ಲಿನ ಆಳ ಅಗಲ ಅರೆದು ಕುಡಿದವರು ಒಮ್ಮೆಯಾದರೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗ ಬೇಕೆಂಬ ಕನಸು ಕಂಡವರಿದ್ದರು ಹಿರಿಯ ಸಹಕಾರಿ ಕುಳಗಳ ಮಧ್ಯೆ ಮೊದಲ ಬಾರಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಅಧ್ಯಕ್ಷರಾಗಿ ಯಶಸ್ಸುಗಳಿಸುವುದು ಅಷ್ಟು ಸುಲಭವಲ್ಲ, ಅದರಲ್ಲೂ ಬೇರೆಯದ್ದೆ ಪಕ್ಷದ ಸರ್ಕಾರ ಇದ್ದಾಗ ಬ್ಯಾಂಕ್ ನಿಭಾಯಿಸುವುದು ಕಷ್ಟಕರ , ಈ ನಡುವೆ ಬೆಳ್ಳಿ ಪ್ರಕಾಶ್ ಧೈರ್ಯ ಮೆಚ್ಚಲೇಬೇಕು ಎಂದು ಅವರ ವಿರೋಧಿಗಳು ಕೂಡಾ ಹೇಳುತ್ತಾರೆ.

ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಕಳೆದ ಒಂದೂವರೆ ವರ್ಷದಿಂದ ಹಿಡಿದು ಎಳೆಯುತ್ತಿದ್ದಾರೆ ಅದರೆ ಆ ದೈತ್ಯ ಜಪ್ಪಯ್ಯ ಅನ್ನುತ್ತಿಲ್ಲ. ಕಡೂರಿನ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಅದೃಷ್ಟವಂತ ಜೊತೆಗೆ ಶ್ರಮದಿಂದ ಚಿಕ್ಕಮಗಳೂರು ಜಿಲ್ಲೆಯಿಂದ ಅಪೆಕ್ಸ್ ಬ್ಯಾಂಕ್ ಗೆ ಅಯ್ಕೆಯಾದ ಪ್ರಥಮರೆಂಬ ದಾಖಲೆ ಬರೆದಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯವರನ್ನು ಸೋಲಿಸಿ ಕಾಂಗ್ರೆಸ್ ನ 5 ಜನ ಶಾಸಕರು ಅಯ್ಕೆಯಾದ ನಂತರ ಬಿಜೆಪಿ ಯವರ ಕೈಯಲ್ಲಿರುವ ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ನಲ್ಲಿರುವ ಅಧ್ಯಕ್ಷರುಗಳನ್ನು ಕೆಳಗಿಳಿಸಲು ಕಾಂಗ್ರೆಸ್ ನ ಐವರು ಶಾಸಕರಗಳು ಮುಖ್ಯಮಂತ್ರಿ ಮತ್ತು ಸಹಕಾರ ಸಚಿವರ ಬಳಿ ನಿಯೋಗ ಹೋಗಿ ಮನವಿ ಕೊಟ್ಟು ಕೊಟ್ಟು ಸುಸ್ತಾಗಿದ್ದಾರಂತೆ. ರಾಜಕೀಯವಾಗಿ ವಿರೋಧಿಸುವುದು ಸಹಜ ಆದರೆ ಅವರು ಕೂಡ ಚುನಾಯಿತ ಪ್ರತಿನಿಧಿಗಳು ಎಂಬ ಜಾಣ ಮರೆವು ಇರುವುದಕ್ಕಿಂತ ಇದೊಂದು ರಾಜಕೀಯ ದ್ವೇಷ ಎನ್ನಲೇಬೇಕು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್. ಸುರೇಶ್ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಂಡೋಪ ತಂಡವಾಗಿ ವಿದೇಶಿ ಪ್ರವಾಸ ಮಾಡುತ್ತಿರುವುದು ನೋಡಿ ಕೆಲವರು ಅಂಡು ಸುಟ್ಟು ಕೊಂಡವರ ರೀತಿ ಕೂರಲು ಆಗದೆ ನಡೆಯಲು ಆಗದೆ ಚಡಪಡಿಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ವಿದ್ಯುತ್ ಸ್ಪರ್ಶಿಸಿ ಒಂಟಿ ಸಲಗ ಸಾವು : ಜಮೀನು ಮಾಲೀಕನ ವಿರುದ್ಧ ದೂರು

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಮರಣ ಮೃದಂಗ ನಿಲ್ಲದಂತಾಗಿದೆ, ಜಮೀನಿನಲ್ಲಿ ವಿದ್ಯುತ್ ತಂತಿ ತಗಲಿ ಕಾಡಾನೆಯೊಂದು ದಾರುಣವಾಗಿ ಸಾವು ಕಂಡಿದೆ. ಜಮೀನಿನಲ್ಲಿ ಕೆಳಭಾಗಕ್ಕೆ ಜೋತು ಬಿದ್ದಿದ್ದ ವಿದ್ಯುತ್ ತಂತಿಯಿಂದ...

ರಾಜ್ಯ ಕಾಂಗ್ರೆಸ್ ಸರ್ಕಾರ ಗೂಂಡಾ ಸರ್ಕಾರ : ಸಿ.ಟಿ ರವಿ ಆಕ್ರೋಶ

ಚಿಕ್ಕಮಗಳೂರು : ನನ್ನನ್ನು ಬಂಧಿಸಿದಾಗ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಎದುರಿಗೆ ಕರೆದುಕೊಂಡು ಹೋದರು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನನ್ನನ್ನು ಕಾಪಾಡು ಎಂದು ಯಲ್ಲಮ್ಮನಿಗೆ ಹರಕೆ ಹೊತ್ತಿದ್ದೇನೆ ಮುಂದಿನ ದಿನಗಳಲ್ಲಿ ಆಣೆ ಪ್ರಮಾಣಕ್ಕೆ...

Related Articles

ವಕ್ಫ್ ವಿರುದ್ಧ ಆಹೋರಾತ್ರಿ ಬಿಜೆಪಿ ಅಹವಾಲು ಸ್ವೀಕಾರ

ಚಿಕ್ಕಮಗಳೂರು : ಜಿಲ್ಲೆಯ ವಕ್ಫ್ ಆಸ್ತಿ ಸಮಸ್ಯೆ ಬಗೆಹರಿಸಲು ರೈತರು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ...

ವಯೋನಿವೃತ್ತಿ ಹೊಂದಿದ ಶ್ವಾನಕ್ಕೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಚಿಕ್ಕಮಗಳೂರು : ಪೊಲೀಸ್ ಇಲಾಖೆಯಲ್ಲಿ ಖಾಕಿ ಧರಿಸಿದ ಮಾನವರಿಗೆ ಎಷ್ಟು ಗೌರವವಿದೆಯೋ ಅದೇ ರೀತಿ ಇಲಾಖೆಯ...

ಸಂತವೇರಿಯ ಸಂತ ವೇಲಾಯುಧನ್ ಮತ್ತೊಮ್ಮೆ ಬಿಎಸ್ಪಿ ಕಾರ್ಯದರ್ಶಿ

ಚಿಕ್ಕಮಗಳೂರು : ವೇಲಾಯುಧನ್ ಹೆಸರು ಕೇಳಿದರೆ ಇದು ಯಾವ ಅಯುಧ ಎನ್ನಿಸುತ್ತದೆ. ಆದರೆ ವ್ಯಕ್ತಿ ನೋಡಿದರೆ,...

ತರೀಕೆರೆ ಮಾಜಿ ಶಾಸಕ ಡಿ.ಎಸ್ ಸುರೇಶ್ ತಂದೆ ನಿಧನ : ಮನೆಯಲ್ಲೇ ಕೊನೆಯುಸಿರೆಳೆದ ಶಾಂತವೀರಪ್ಪ

ಚಿಕ್ಕಮಗಳೂರು : ತರೀಕೆರೆ ಮಾಜಿ ಶಾಸಕ ಜಿಲ್ಲಾ ಕೇಂದ್ರ ಸಹಕಾರ (DCC)ಬ್ಯಾಂಕ್ ನ ಅಧ್ಯಕ್ಷರಾದ ಡಿ.ಎಸ್.ಸುರೇಶ್...