ಚಿಕ್ಕಮಗಳೂರು : ಪ್ರವಾಸಿಗರೇ… ಸದ್ಯಕ್ಕೆ ಕಾಫಿನಾಡ ಪ್ರವಾಸ ಮುಂದೂಡಿ ನಾಳೆಯಿಂದ 3 ದಿನ ಕಾಫಿನಾಡಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಒಂದು ವಾರ ಅಥವಾ ಮಳೆ ನಿಲ್ಲೋವರೆಗೂ ನಿಮ್ಮ ಪ್ರವಾಸ ಮುಂದೂಡಿ ಎಂದು
ಪ್ರವಾಸಿಗರಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ಮನವಿ ಮಾಡಿದೆ.
ಜಿಲ್ಲೆಯಲ್ಲಿ ವಾಡಿಕೆಗಿಂತ ಅಕಾಲಿಕ ಮಳೆ ಹೆಚ್ಚಾಗುತ್ತಿದೆ, ನದಿ-ಹಳ್ಳ-ಕೆರೆ ಗಳು ತುಂಬಿ ಕೆಲವೆಡೆ ಅಪಾಯದ ಮಟ್ಟದಲ್ಲಿವೆ ಅಲ್ಲದೇ ಮಲೆನಾಡಿನ ಅಲ್ಲಲ್ಲೇ ಭೂಕುಸಿತ ಕೂಡ ಉಂಟಾಗಿದೆ. ಮಲೆನಾಡಿನಲ್ಲಿ ಧರೆ, ಬೆಟ್ಟ-ಗುಡ್ಡ ಕುಸಿಯುವ ಸಂಭವ ಕೂಡ ಎದುರಾಗಿದೆ. ಇದರಿಂದಾಗಿ ನಿಮ್ಮ ಟ್ರಕ್ಕಿಂಗ್ ಹಾಗೂ ಪ್ರವಾಸ ಕಾರ್ಯಕ್ರಮಗಳನ್ನು ಮುಂದಿನ ಒಂದು ವಾರಗಳ ಕಾಲ ಮುಂದೂಡಿ ಎಂದು ಡಿ.ಸಿ ಕಚೇರಿಯಿಂದ ಸಲಹೆ ನೀಡಲಾಗಿದೆ. ಸಾರ್ವಜನಿಕರು ಹಾಗೂ ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರು ನದಿಪಾತ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.
ಅಲ್ಲದೇ ಬಟ್ಟೆಗಳು ಹಾಗೂ ಜಾನುವಾರುಗಳನ್ನು ತೊಳೆಯಲು ಕೆರೆ-ಕಟ್ಟೆಗಳ ಬಳಿ ಹೋಗದಂತೆ ಸಹಾ ಎಚ್ಚರಿಕೆ ಕೊಡಲಾಗಿದೆ.
ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಪ್ರವಾಸಿಗರು-ಸ್ಥಳಿಯರಿಗೆ ಮನವಿ ಮಾಡಲಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ ಅದರಲ್ಲೂ ಮುಳ್ಳಯ್ಯನಗಿರಿ ಐ.ಡಿ ಪೀಠ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಿದೆ
Leave a comment