ಚಿಕ್ಕಮಗಳೂರು: ಅಂಬಳೆ ಹೋಬಳಿ ಹರಿಹರದಳ್ಳಿ ಗ್ರಾಮ ಪಂಚಾಯತಿಯ ಜಡಗನಹಳ್ಳಿ ಗ್ರಾಮದ ಓಂಕಾರೇಗೌಡ ಎಂಬುವರು ಮಗ ಯತೀಶ್(21) ಎಂಬುವನು ರಾತ್ರಿ ಹತ್ತು ಗಂಟೆಯ ರೈಲಿಗೆ ಸಿಕ್ಕಿ ದುರ್ಮರಣ ಹೊಂದಿರುವ ಘಟನೆ ವರದಿಯಾಗಿದೆ.
ಸುದ್ದಿ ತಿಳಿದು ಕೃಷ್ಣ ಚಾರೀಟಬಲ್ ಟ್ರಸ್ಟ್ ನವರು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿರುವುದನ್ನು ಪ್ರಶಂಸೆ ಮಾಡಲಾಗಿದೆ.
ಯತೀಶ್ ಪ್ರೇಮ ಪ್ರಕರಣದಲ್ಲಿ ನೊಂದು ಅಸುನೀಗಿರಬಹುದು ಎಂಬ ಮಾಹಿತಿ ಇದ್ದರು ಕೂಡ ರೈಲಿಗೆ ಸಿಕ್ಕಿದ್ದರೆ ದೇಹ ಛಿದ್ರ,ಛಿದ್ರವಾಗಬೇಕಿತ್ತು ಎಂಬ ಅನುಮಾನ ವ್ಯಕ್ತವಾಗಿದೆ.
ಅರಸೀಕೆರೆ ರೈಲ್ವೆ ಪೊಲೀಸ್ ರು ದೂರು ದಾಖಲಿಸಿ ತನಿಖೆ ನೆಡೆಸುತ್ತಿದ್ದಾರೆ.
Young man commits suicide over love affair
Leave a comment