ಚಿಕ್ಕಮಗಳೂರು :
ಉತ್ತಮ್ ಎಂಬ ವೈದ್ಯ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಉತ್ತಮ್ 27 ವರ್ಷದ ವೈದ್ಯ ಆತ್ಮಹತ್ಯೆ ಮಾಡಿಕೊಂಡಿರುವುದರ ಬಗ್ಗೆ ವರದಿಯಾಗಿದೆ.
ತರೀಕೆರೆ ಸಮೀಪದ ಕಟ್ಟೆಹೊಳೆಯ ಉತ್ತಮ್ ಅಜ್ಜಂಪುರ ಸಮುದಾಯ ಅರೋಗ್ಯ ಕೇಂದ್ರದ ನಂದೀಪುರದಲ್ಲಿ ಸೇವೆ ಸಲ್ಲಿಸುತ್ತಿದ್ದರು ಇಂದು ಸಂಜೆ ಮನೆಗೆ ತೆರಳಿದವರು ರೈಲಿಗೆ ಸಿಲುಕಿರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ.
ಸ್ವಂತ ಊರಿಗೆ ಬಂದಿದ್ದ ಉತ್ತಮ್ ವಾಕ್ ಹೋಗುವುದಾಗಿ ಹೇಳಿ ಮನೆ ಬಿಟ್ಟವರು ಭದ್ರಾವತಿ ಲಿಮಿಟ್ ನಲ್ಲಿ ರೈಲಿಗೆ ಸಿಲುಕಿರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ.ಆತ್ಮಹತ್ಯೆಯೋ ಕೊಲೆಯೋ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ.
ಕಳೆದ ಕೆಲವು ದಿನಗಳಿಂದ ಡಿಪ್ರೆಶನ್ ವೈದ್ಯ ಬಳಲುತ್ತಿದ್ದ ಎಂದು ತಿಳಿದುಬಂದಿದ್ದು ದೊಡ್ಡಪ್ಪನ ಮನೆಯಲ್ಲಿ ಉಳಿದುಕೊಂಡು ಮಾನಸಿಕ ಒತ್ತಡದಿಂದ ತೊಳಲಾಟದಿಂದ ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿದುಬಂದಿದೆ ಭದ್ರಾವತಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ
Leave a comment