ಚಿಕ್ಕಮಗಳೂರು : ತಮಿಳುನಾಡಿನ ಬಿಜೆಪಿಯ ರಾಜ್ಯಾಧ್ಯಕ್ಷ ಅಣ್ಣಾಮಲೈ ನಿನ್ನೆ ತಮ್ಮ ಶರ್ಟ್ ಬಿಚ್ಚಿ ಬೀದಿಯಲ್ಲಿ ಚಾಟಿಯಿಂದ ಹೊಡೆದು ಕೊಳ್ಳುವ ಮೂಲಕ ಪ್ರತಿಭಟನೆ ಮಾಡಿ ಜನರಿಗೆ ಪುಕ್ಕಟೆ ಮನರಂಜನೆ ಕೊಟ್ಟಿದ್ದಾರೆ. ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಖಂಡಿಸಿ ಡಿ.ಎಂ.ಕೆ ಸರ್ಕಾರದ ವಿರುದ್ದ ಚಾಟಿ ಬೀಸಲು ಹೋಗಿ ತಾವೇ ಚಾಟಿ ಬೀಸಿಕೊಂಡಿದ್ದಾರೆ.
ಡಿ.ಎಂ.ಕೆ ಸರ್ಕಾರದ ವಿರುದ್ದ ವಿವಿಧ ರೂಪದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಣ್ಣಾಮಲೈ ಚಿಕ್ಕಮಗಳೂರಿನಲ್ಲಿ ಎಸ್ಪಿ ಆಗಿದ್ದಾಗ ಹಲವು ವಿಷಯಗಳಲ್ಲಿ ಚಾಟಿ,ಲಾಠಿ ಬಳಸಿದ್ದರು. ರಸ್ತೆ ಬದಿಯಲ್ಲಿ ಯುವಕರಿಗೆ ಲಾಠಿ ಬೀಸಿದಾಗ ವಾಗ್ವಾದ ನಡೆದಿತ್ತು. ಐ.ಪಿ.ಎಸ್ ಅಧಿಕಾರಿಯಾಗಿದ್ದಾಗ ಅಧಿಕಾರ ಚಲಾಯಿಸಿ ಲಾಠಿ, ಚಾಟಿ ಬೀಸುವುದಕ್ಕೂ ಪಕ್ಷ ಸಂಘಟನೆಗಾಗಿ ತನಗೆ ತಾನೇ ಚಾಟಿ ಬೀಸಿಕೊಳ್ಳುವುದಕ್ಕೆ ಅಜ ಗಜಾಂತರ ವ್ಯತ್ಯಾಸವಿದೆ.
ಹೊಟ್ಟೆ ಪಾಡಿಗಾಗಿ ಮಾರಮ್ಮನ ವೇಷಭೂಷಣದಲ್ಲಿ ದೇಹ ದಂಡಿಸಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದವರಂತೆ ಅಧಿಕಾರ ದಾಹ ಅಣ್ಣಾಮಲೈ ಚಾಟಿ ಬೀಸಕೊಳ್ಳುವಂತೆ ಮಾಡಿದೆ. ಎ,ಸಿ ರೂಮ್, ಎ,ಸಿ ಕಾರಿನಲ್ಲಿ ಕುಳಿತು ಅಧಿಕಾರ ಚಾಲಯಿಸಿದ ಸಿಂಗಂ ಈಗಾ ಚೂಯಿಂಮ್ ತಿನ್ನುತ್ತಾ ಬೀದಿ ಬದಿಯಲ್ಲಿ ಬಟ್ಟೆಗಳನ್ನು ಬಿಚ್ಚಿ ಕೊಂಡು ಚಾಟಿ ಬಳಸಿಕೊಳ್ಳೊದನ್ನು ಹೇಳಿಕೊಟ್ಟ ಗುರುವಿಗಾಗಿ ಕರ್ನಾಟಕದ ಪೊಲೀಸರು ಹುಡುಕುತ್ತಿರುವುದು ನಿಜವೋ ಸುಳ್ಳೋ ಪತ್ತೆ ಹಚ್ಚಬೇಕಾಗಿದೆ.
Leave a comment